ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾರಣಾಸಿಯಿಂದ ಅಖಾಡಕ್ಕಿಳಿದಿದ್ದ ಮಿಮಿಕ್ರಿ ಆರ್ಟಿಸ್ಟ್ ಶ್ಯಾಮ್ ರಂಗೀಲಾ ನಾಮ ಪತ್ರ ತಿರಸ್ಕೃತಗೊಂಡಿದೆ. ಇದು ವಿಪಕ್ಷ ಸೇರಿದಂತೆ ಹಲುವು ಎಡಪಂಥೀಯ ನಾಯಕರನ್ನು ಕೆರಳಿಸಿದೆ. ಉದ್ದೇಶಪೂರ್ವಕವಾಗಿ ನಾಮಪತ್ರ ತಿರಸ್ಕೃತಗೊಳಿಸಿದ್ದಾರೆ ಎಂದು ರಂಗೀಲಾ ಆರೋಪಿಸಿದ್ದಾರೆ.
ವಾರಣಾಸಿ(ಮೇ.15) ಈ ಬಾರಿಯ ಲೋಕಸಭಾ ಚುನಾವಣೆ ಹಲವು ಕಾರಣಗಳಿಂದ ಕುತೂಹಲಗಳ ಕೇಂದ್ರಬಿಂದುವಾಗಿದೆ. ಈ ಪೈಕಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾರಣಾಸಿಯಿಂದ ಕಾಮಿಡಿಯನ್ ಶ್ಯಾಮ್ ರಂಗೀಲಾ ಅಖಾಡಕ್ಕಿಳಿದಿದ್ದರು. ಆದರೆ ಶ್ಯಾಮ್ ರಂಗೀಲಾ ನಾಮಪತ್ರ ತಿರಸ್ಕೃತಗೊಂಡಿದೆ. ಇದು ಕೆಲವರನ್ನು ಕೆರಳಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ಯಾಮ್ ರಂಗೀಲಾ, ವಿನಾ ಕಾರಣ ನಾಮಪತ್ರವನ್ನು ತಿರಸ್ಕಾರ ಮಾಡಲಾಗಿದೆ. ಇದು ನಿರೀಕ್ಷಿತ ಎಂದು ಶ್ಯಾಮ್ ರಂಗೀಲಾ ಆರೋಪಿಸಿದ್ದಾರೆ.
ಮೋದಿ, ರಾಹುಲ್ ಗಾಂಧಿ ಸೇರಿದಂತೆ ಹಲವರ ಧ್ವನಿ ಅನುಕರಿಸಿ ಭಾರಿ ಜನಪ್ರಿಯತೆ ಗಳಿಸಿರುವ ಶ್ಯಾಮ್ ರಂಗೀಲಾ ಈ ಬಾರಿ ಮೋದಿ ವಿರುದ್ಧವೇ ತೊಡೆ ತಟ್ಟಿದ್ದರು. ವಿಕ್ಷಗಳ ನಾಯಕರು, ಇಂಡಿಯಾ ಒಕ್ಕೂಟ ಬೆಂಬಲಿತ ನಾಯಕರೂ ಶ್ಯಾಮ್ ರಂಗೀಲಾಗೆ ಭಾರಿ ಬೆಂಬಲ ನೀಡಿದ್ದರು. ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದ ಶ್ಯಾಮ್ ರಂಗೀಲಾ ನಾಮಪತ್ರ ಕೂಡ ಸಲ್ಲಿಕೆ ಮಾಡಿದ್ದರು.
ಪ್ರಧಾನಿ ಮೋದಿ ವಿರುದ್ಧ ಶ್ಯಾಮ್ ರಂಗೀಲಾ ಸ್ಪರ್ಧೆ, ಕಾಮಿಡಿಯನ್ ಪರ ನಟ ಕಿಶೋರ್ ಬ್ಯಾಟಿಂಗ್!
ನಾಮಪತ್ರ ಪರೀಶೀಲನೆ ನಡೆಸಿದ ಚುನಾವಣಾ ಆಯೋಗ ಅಧಿಕಾರಿಗಳು, ಶ್ಯಾಮ್ ರಂಗೀಲಾ ನಾಪತ್ರ ತಿರಸ್ಕರಿಸಿದ್ದಾರೆ. ನಾಮ ಪತ್ರ ಸಲ್ಲಿಕೆ ವೇಳೆ ಪ್ರಮಾಣವಚನ ಸ್ವೀಕರಿಸಿಲ್ಲ ಎಂದು ಆಯೋಗ ಅಧಿಕಾರಿಗಳು ಹೇಳಿದ್ದಾರೆ. ನಾನು ಮೊದಲ ಬಾರಿಗೆ ಚುನಾವಣೆ ಸ್ಪರ್ಧಿಸುತ್ತಿದ್ದೇನೆ. ಎಲ್ಲಾ ದಾಖಲೆ ಪತ್ರಗಳನ್ನು ನೀಡಿದ್ದೇನೆ. ನಾಮಪತ್ರ ಸ್ವೀಕರಿಸುವ ವೇಳೆ ಯಾವುದೇ ಸೂಚನೆ ನೀಡಲಿಲ್ಲ. ಇದೀಗ ಸಮಯ ಮುಗಿದ ಬಳಿಕ ನಾಮಪತ್ರ ತಿರಸ್ಕರಿಸಿದ್ದಾರೆ. ಇದು ರಾಜಕೀಯ ಪ್ರೇರಿತವಾಗಿದೆ. ಈ ರೀತಿಯ ಸಮಸ್ಯೆಗಳು ಎದುರಾಗಲಿದೆ ಅನ್ನೋ ಸೂಚನೆ ನನಗೆ ನೀಡಿದ್ದರು.ಆದರೆ ನಾನು ಮತದಾನದ ವೇಳೆ, ಮತದಾನದ ಬಳಿಕ ಸಮಸ್ಯೆ ಎದುರಾಗಲಿದೆ ಎಂದು ಊಹಿಸಿದ್ದೆ. ಆದರೆ ನಾಮಪತ್ರವನ್ನೇ ತಿರಸ್ಕರಿಸಿದ್ದಾರೆ ಎಂದು ಶ್ಯಾಮ್ ರಂಗೀಲಾ ಆಕ್ರೋಶ ಹೊರಹಾಕಿದ್ದಾರೆ.
वाराणसी से नहीं लड़ने देंगे ये तय था, अब साफ़ हो गया
दिल ज़रूर टूट गया है, हौंसला नहीं टूटा है ।
आप सबके सहयोग के लिए शुक्रिया ।
मीडिया और शुभचिंतकों से निवेदन है कृपया अभी कॉल ना करें, जो भी सूचना होगी यहाँ देता रहूँगा, शायद अब थोड़ी देर बातचीत करने की इच्छा नहीं है pic.twitter.com/aB6AZqLGqv
ಶ್ಯಾಮ್ ರಂಗೀಲ್ ನಾಮಪತ್ರ ತಿರಸ್ಕಾರ ಹಲವರು ಟೀಕಿಸಿದ್ದಾರೆ. ಶ್ಯಾಮ್ ರಂಗೀಲಾಗೆ ಭಾರಿ ಜನಬೆಂಬಲ ಸಿಕ್ಕಿತ್ತು. ಮೋದಿಗೆ ಸೋಲಿನ ಭಯ ಕಾಡಿದೆ. ಈ ಬಾರಿ ವಾರಣಾಸಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶ್ಯಾಮ್ ರಂಗೀಲಾ ಹೆಚ್ಚಿನ ಮತ ಪಡೆಯಲಿದ್ದಾರೆ. ಇದರಿಂದ ಮೋದಿ ಅಂತರ ಗಣನೀಯವಾಗಿ ಕುಸಿಯಲಿದೆ. ಯುವ ಅಭ್ಯರ್ಥಿಯ ನಾಮಪತ್ರವನ್ನೇ ತಿರಸ್ಕರಿಸಿದ್ದಾರೆ ಎಂಬ ಆರೋಪಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
Shyam Rangeela: ಮೋದಿಯನ್ನು ಅನುಕರಿಸಿ ಪೇಚಿಗೆ ಸಿಲುಕಿದ ಕಾಮಿಡಿಯನ್ಗೆ ಬಂತು ನೋಟಿಸ್!
ಪ್ರಧಾನಿ ನರೇಂದ್ರ ಮೋದಿ ಮಿಮಿಕ್ರಿ ಮೂಲಕ ದೇಶವ್ಯಾಪಿ ಪ್ರಖ್ಯಾತರಾಗಿದ್ದ ಕಲಾವಿದ ಶ್ಯಾಂ ರಂಗೀಲಾ, ಈ ಬಾರಿ ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿಯುವುದಾಗಿ ಘೋಷಿಸಿದ್ದರು. ಇಂದಿನ ರಾಜಕಾರಣವೂ ಸಹ ಹಾಸ್ಯಮಯವಾಗಿರುವುದೇ ನನ್ನ ಈ ನಿರ್ಧಾರಕ್ಕೆ ಕಾರಣ. ಸೂರತ್ ಮತ್ತು ಇಂದೋರ್‌ನಲ್ಲಿ ನಡೆದ ರಾಜಕೀಯ ಪ್ರಹಸನದಿಂದಾಗಿ ಜನರಿಗೆ ಆಯ್ಕೆಯೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ವಾರಾಣಸಿ ಜನರಿಗೆ ಆಯ್ಕೆ ನೀಡುವ ಸಲುವಾಗಿ ಪ್ರಧಾನಿಯ ವಿರುದ್ಧ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂದು ಶ್ಯಾಮ್ ರಂಗೀಲಾ ಹೇಳಿದ್ದರು.