'ನನ್ನ ಸರ್ಕಾರ ಕೆಡವಲು ಲಾಕ್‌ಡೌನ್‌ ವಿಳಂಬ ಮಾಡಿದರು'

By Kannadaprabha NewsFirst Published Apr 13, 2020, 12:03 PM IST
Highlights

ನನ್ನ ಸರ್ಕಾರ ಕೆಡವಲು ಲಾಕ್‌ಡೌನ್‌ ವಿಳಂಬ ಮಾಡಿದರು| ವಿಶ್ವ ಆರೋಗ್ಯ ಸಂಸ್ಥೆಯು ಕೊರೋನಾ ಎಂಬುದು ಸರ್ವವ್ಯಾಪಿ ರೋಗ ಎಂದು ಘೋಷಣೆ ಮಾಡಿದ್ದರೂ ಕೇಂದ್ರ ಸರ್ಕಾರ ಲಾಕ್‌ಡೌನ್‌ ವಿಳಂಬ 

ನವದೆಹಲಿ(ಏ.13): ಮಧ್ಯಪ್ರದೇಶದಲ್ಲಿನ ಕಾಂಗ್ರೆಸ್‌ ಸರ್ಕಾರವನ್ನು ಪತನಗೊಳಿಸುವ ಉದ್ದೇಶದಿಂದ ದೇಶವ್ಯಾಪಿ ಲಾಕ್‌ಡೌನ್‌ ಘೋಷಣೆಯನ್ನು ವಿಳಂಬ ಮಾಡಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಕಮಲನಾಥ್‌ ಆರೋಪಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯು ಕೊರೋನಾ ಎಂಬುದು ಸರ್ವವ್ಯಾಪಿ ರೋಗ ಎಂದು ಘೋಷಣೆ ಮಾಡಿದ್ದರೂ ಕೇಂದ್ರ ಸರ್ಕಾರ ಲಾಕ್‌ಡೌನ್‌ ವಿಳಂಬ ಮಾಡಿತು. ಎಲ್ಲವೂ ಸರಿ ಇದೆ ಎಂದು ತೋರಿಸಲು ಸಂಸತ್‌ ಕಲಾಪವನ್ನೂ ನಡೆಸಲಾಯಿತು. ಶಿವರಾಜ ಸಿಂಗ್‌ ಚೌಹಾಣ್‌ ಪ್ರಮಾಣವಚನ ಸ್ವೀಕರಿಸಿದ ಬಳಿಕವಷ್ಟೇ ಲಾಕ್‌ಡೌನ್‌ ಘೋಷಿಸಲಾಯಿತು.

400 ಕೋಣೆಯ ಈ ಭವ್ಯ ಅರಮನೆಯಲ್ಲಿ 'ರಾಜ'ನಂತಿದ್ದಾರೆ ಜ್ಯೋತಿರಾದಿತ್ಯ ಸಿಂಧಿಯಾ!

ಮಧ್ಯಪ್ರದೇಶದಲ್ಲಿ ಕೊರೋನಾ ವ್ಯಾಪಿಸಿದ್ದರೂ ಸಂಪುಟ ವಿಸ್ತರಣೆ ಮಾಡಿಲ್ಲ. ರಾಜ್ಯದಲ್ಲಿ ಆರೋಗ್ಯ ಸಚಿವರೇ ಇಲ್ಲ ಎಂದು ಹಿರಿಯ ಕಾಂಗ್ರೆಸ್ಸಿಗ ಕಿಡಿಕಾರಿದರು.

click me!