ಇಡೀ ಭಾರತ ಲಾಕ್ಡೌನ್‌ ಮಾಡಿ: ಅಮೆರಿಕ ಸಲಹೆ!

Published : May 02, 2021, 07:23 AM ISTUpdated : May 02, 2021, 08:26 AM IST
ಇಡೀ ಭಾರತ ಲಾಕ್ಡೌನ್‌ ಮಾಡಿ: ಅಮೆರಿಕ ಸಲಹೆ!

ಸಾರಾಂಶ

ಇಡೀ ಭಾರತ ಲಾಕ್ಡೌನ್‌ ಮಾಡಿ: ಅಮೆರಿಕ ಸಲಹೆ| ಅವಧಿಗೆ ಮುನ್ನವೇ ಭಾರತ ಗೆಲುವು ಘೋಷಿಸಿತು| ಸೋಂಕಿನ ವೇಗ ಆತಂಕಕಾರಿ: ಪ್ರಸಿದ್ಧ ತಜ್ಞ ಫೌಸಿ

ನವದೆಹಲಿ(ಮೇ.02): ಭಾರತದಲ್ಲಿ ಕೊರೋನಾ ವೈರಸ್‌ ಹರಡುತ್ತಿರುವ ವೇಗ ಆತಂಕಕಾರಿಯಾಗಿದೆ ಎಂದು ಹೇಳಿರುವ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಅವರ ಮುಖ್ಯ ವೈದ್ಯಕೀಯ ಸಲಹೆಗಾರ ಹಾಗೂ ಜಗತ್ಪ್ರಸಿದ್ಧ ಸಾಂಕ್ರಾಮಿಕ ರೋಗ ತಜ್ಞ ಆ್ಯಂಟನಿ ಫೌಸಿ, ಇಡೀ ದೇಶವನ್ನು ಕೆಲ ಕಾಲ ಲಾಕ್‌ಡೌನ್‌ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

‘ಲಾಕ್‌ಡೌನ್‌ ಯಾರಿಗೂ ಬೇಕಿಲ್ಲ. ಹಾಗಂತ ಆರು ತಿಂಗಳು ಲಾಕ್‌ಡೌನ್‌ ಮಾಡಿ ಅಂತ ನಾನು ಹೇಳುವುದಿಲ್ಲ. ಆದರೆ, ವೈರಸ್‌ನ ಸರಣಿ ತುಂಡರಿಸಲು ಕೆಲ ವಾರಗಳ ಕಾಲವಾದರೂ ಇಡೀ ಭಾರತವನ್ನು ಲಾಕ್‌ಡೌನ್‌ ಮಾಡುವ ಅಗತ್ಯವಿದೆ. ಆಗ ಮಾರಣಾಂತಿಕ ಎರಡನೇ ಅಲೆಯನ್ನು ಕೊಂಚ ಹತೋಟಿಗೆ ತರಬಹುದು. ಅದರ ಜೊತೆಗೆ, ಆಕ್ಸಿಜನ್‌, ಔಷಧಿ ಹಾಗೂ ಪಿಪಿಇ ಕಿಟ್‌ಗಳನ್ನು ಕೂಡ ತ್ವರಿತ ಗತಿಯಲ್ಲಿ ಸಿದ್ಧಪಡಿಸಿ ಎಲ್ಲೆಡೆ ಸಿಗುವಂತೆ ಮಾಡಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ಇದೇ ವೇಳೆ, ಅಮೆರಿಕ ಸರ್ಕಾರದ ವಿದೇಶಾಂಗ ಸಚಿವಾಲಯದ ಜಾಗತಿಕ ಕೋವಿಡ್‌ ಸಂಯೋಜನೆ ಅಧಿಕಾರಿಯೊಬ್ಬರು, ‘ಭಾರತದ ಕೋವಿಡ್‌ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಅಲ್ಲಿ ಇನ್ನೂ 2ನೇ ಅಲೆ ಗರಿಷ್ಠಕ್ಕೆ ಹೋಗಿಲ್ಲ. ಕೂಡಲೇ ಆಕ್ಸಿಜನ್‌, ಪಿಪಿಇ, ಲಸಿಕೆಯ ಕಚ್ಚಾ ವಸ್ತು, ಟೆಸ್ಟಿಂಗ್‌ ಕಿಟ್‌ ಇತ್ಯಾದಿಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಸೋಂಕಿತರ ರಕ್ಷಣೆಗೆ ತಕ್ಷಣ ಬೇಕಿರುವುದನ್ನು ತಯಾರು ಮಾಡಿಕೊಳ್ಳಬೇಕು. ಬೈಡೆನ್‌ ಆಡಳಿತ ಕೂಡ ಈ ವಸ್ತುಗಳನ್ನು ಭಾರತಕ್ಕೆ ಒದಗಿಸಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

"

ಬಹಳ ಬೇಗ ಗೆದ್ದೆವು ಅಂದುಕೊಂಡಿರಿ:

ಭಾರತದ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ ಇಲ್ಲಿನ ಕೊರೋನಾ ಬಿಕ್ಕಟ್ಟಿನ ಕುರಿತು ಮಾತನಾಡಿರುವ ಆ್ಯಂಟನಿ ಫೌಸಿ, ಭಾರತದಲ್ಲಿ ಬಹಳ ಬೇಗ ಕೊರೋನಾ ವಿರುದ್ಧ ವಿಜಯ ಘೋಷಿಸಲಾಯಿತು. ಅದರ ಬದಲು ಇನ್ನಷ್ಟುಸಿದ್ಧತೆ ಮಾಡಿಕೊಳ್ಳಬೇಕಿತ್ತು. ಈಗ ತಾತ್ಕಾಲಿಕವಾಗಿ ದೇಶವನ್ನು ಬಂದ್‌ ಮಾಡಬೇಕು. ವೈರಸ್ಸನ್ನು ನಿಯಂತ್ರಣಕ್ಕೆ ತರಲು ಮೂರು ಹಂತದಲ್ಲಿ ಕ್ರಮ ಕೈಗೊಳ್ಳಬೇಕು. 1.ತಕ್ಷಣದ ಕ್ರಮ, 2.ಮಧ್ಯಂತರ ಕ್ರಮ, 3.ದೀರ್ಘಕಾಲೀನ ಕ್ರಮ. ತಕ್ಷಣದ ಕ್ರಮವಾಗಿ ಆಕ್ಸಿಜನ್‌ ಹಾಗೂ ಇತರ ವೈದ್ಯಕೀಯ ಮೂಲಸೌಕರ್ಯಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಜೊತೆಗೆ ಲಾಕ್‌ಡೌನ್‌ ಮಾಡಬೇಕು. ಕಳೆದ ವರ್ಷ ಚೀನಾದಲ್ಲಿ ಕೊರೋನಾ ಸ್ಫೋಟಿಸಿದಾಗ ಅಲ್ಲಿ ಲಾಕ್‌ಡೌನ್‌ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಭಾರತದಲ್ಲಿ ತಂದೆ ತಾಯಿ, ಅಕ್ಕ ತಂಗಿ, ಅಣ್ಣ ತಮ್ಮಂದಿರೆಲ್ಲ ತಮ್ಮವರಿಗಾಗಿ ಬೀದಿ ಬೀದಿಯಲ್ಲಿ ಆಕ್ಸಿಜನ್‌ ಹುಡುಕುತ್ತಿದ್ದಾರೆ ಎಂದು ಯಾರೋ ಹೇಳಿದ್ದನ್ನು ಕೇಳಿದೆ. ಇದನ್ನೆಲ್ಲ ವ್ಯವಸ್ಥೆ ಮಾಡಲು ಒಂದು ಕೇಂದ್ರೀಯ ಸಂಸ್ಥೆ ಇಲ್ಲವೇ? ಕೊರೋನಾ ನಿಯಂತ್ರಣದಲ್ಲಿ ಲಸಿಕೆ ಮಹತ್ವದ ಪಾತ್ರ ವಹಿಸುತ್ತದೆ. ಆದರೆ, 140 ಕೋಟಿ ಜನಸಂಖ್ಯೆಯ ದೇಶದಲ್ಲಿ ಈಗ ಕೇವಲ ಶೇ.2ರಷ್ಟುಜನರಿಗೆ ಲಸಿಕೆ ನೀಡಲಾಗಿದೆ. ಭಾರತವು ಜಗತ್ತಿನಲ್ಲೇ ಅತಿಹೆಚ್ಚು ಲಸಿಕೆ ತಯಾರಿಸುವ ದೇಶ. ನೀವು ನಿಮ್ಮ ಸಾಮರ್ಥ್ಯವನ್ನು ಸಂಪೂರ್ಣ ಬಳಸಿಕೊಂಡು ಲಸಿಕೆ ತಯಾರಿಸಿಕೊಳ್ಳಬೇಕು ಎಂದೂ ಫೌಸಿ ಸಲಹೆ ನೀಡಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?