
ನವದೆಹಲಿ(ಮೇ 23): ಕೊರೋನಾ ವೈರಸ್ ಹರಡುವುದನ್ನು ತಡೆಯಲು ದೇಶದಲ್ಲಿ ಜಾರಿಗೊಳಿಸಿದ ಲಾಕ್‌ಡೌನ್‌ನ ಸಾಫಲ್ಯದ ಬಗ್ಗೆ ಅಲ್ಲಲ್ಲಿ ಅನುಮಾನಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಅದರಿಂದ ಏನು ಪ್ರಯೋಜನವಾಗಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಅಂಕಿಅಂಶಗಳನ್ನು ಪ್ರಕಟಿಸಿದೆ.
ಮಾರ್ಚ್ 25ರಿಂದ ದೇಶದಲ್ಲಿ ಲಾಕ್‌ಡೌನ್ ಜಾರಿಗೊಳಿಸಿದ ಪರಿಣಾಮ 36-70 ಲಕ್ಷ ಜನರಿಗೆ ಸೋಂಕು ಹರಡುವುದು ತಪ್ಪಿದೆ ಮತ್ತು 1.2 ಲಕ್ಷದಿಂದ 2.1 ಲಕ್ಷ ಜನರು ಸಾಯುವುದು ತಪ್ಪಿದೆ ಎಂದು ವರದಿಗಳನ್ನು ಉಲ್ಲೇಖಿಸಿ ಸರ್ಕಾರ ಮಾಹಿತಿ ನೀಡಿದೆ.
ಕೇಂದ್ರದ ಸೂಚನೆ ನಂತ್ರ ಶಾಲೆ ಆರಂಭದ ಬಗ್ಗೆ ನಿರ್ಧಾರ: ಸಚಿವ ಸುರೇಶ್
ದೇಶದಲ್ಲಿನ ಪ್ರಸಕ್ತ ಕೊರೋನಾ ಪರಿಸ್ಥಿತಿ ಬಗ್ಗೆ ಶುಕ್ರವಾರ ಇಲ್ಲಿ ಮಾಹಿತಿ ನೀಡಿದ ನೀತಿ ಆಯೋಗದ ಸದಸ್ಯ ಮತ್ತು ಪ್ರಧಾನಿ ಮೋದಿ ರಚಿಸಿರುವ ಉನ್ನತಾಧಿಕಾರವುಳ್ಳ ಸಮಿತಿಯ ಮುಖ್ಯಸ್ಥ ಡಾ.ವಿ.ಕೆ.ಪೌಲ್, ಸೂಕ್ತ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಣೆ, ಅದಕ್ಕೆ ಪೂರ್ವಭಾವಿ ಸಿದ್ಧತೆ, ಹಂತಹಂತವಾಗಿ ಜಾರಿಗೊಳಿಸಿದ ಕ್ರಮಗಳು ದೇಶದಲ್ಲಿ ಕೊರೋನಾ ಹರಡುವಿಕೆ ಮತ್ತು ಸಾವಿನ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಜೊತೆಗೆ ಅದರಿಂದ ಅತ್ಯಂತ ಪರಿಣಾಮಕಾರಿ ಫಲಿತಾಂಶ ಸಿಕ್ಕಿದೆ ಎಂದು ಹೇಳಿದ್ದಾರೆ. ಇದಕ್ಕೆ ಅವರು ಸರ್ಕಾರ ಮತ್ತು ವಿವಿಧ ಖಾಸಗಿ ಸಂಸ್ಥೆಗಳು ಲಾಕ್‌ಡೌನ್‌ನಿಂದ ಉಂಟಾದ ಪರಿಣಾಮಗಳ ಕುರಿತು ನಡೆಸಿರುವ ವರದಿಯನ್ನು ಉಲ್ಲೇಖಿಸಿದ್ದಾರೆ.
ಅಂಫಾನ್‌ಗೆ ನಲುಗಿದ ಬಂಗಾಳ, ಒಡಿಶಾಕ್ಕೆ ಮೋದಿ 1500 ಕೋಟಿ ಪ್ಯಾಕೇಜ್
ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಎರಡು ಮಾದರಿಯಲ್ಲಿ ಲೆಕ್ಕಾಚಾರ ನಡೆಸಿದ್ದು ಅದರನ್ವಯ ಲಾಕ್‌ಡೌನ್‌ನಿಂದಾಗಿ 36 ಲಕ್ಷದಿಂದ 70 ಲಕ್ಷ ಜನರಿಗೆ ಸೋಂಕು ಹಬ್ಬುವುದು ತಪ್ಪಿದೆ. ಅದೇ ರೀತಿ 1.2 ದಿಂದ 2.1 ಲಕ್ಷ ಜನರ ಸೋಂಕಿಗೆ ಬಲಿಯಾಗುವುದು ತಪ್ಪಿದೆ. ಇನ್ನು ಕೇಂದ್ರ ಅಂಕಿಅಂಶ ಮತ್ತು ಯೋಜನೆಗಳ ಜಾರಿ ಸಚಿವಾಲಯದ ಪ್ರಕಾರ 37ರಿಂದ 78 ಸಾವಿರ ಸಾವು ತಪ್ಪಿದೆ. ಅಲ್ಲದೆ, 14ರಿಂದ 29 ಲಕ್ಷ ಕೊರೋನಾ ಪ್ರಕರಣಗಳು ತಪ್ಪಿವೆ. ಪಿಎಚ್‌ಎಫ್‌ಐ ಪ್ರಕಾರ ಲಾಕ್‌ಡೌನ್‌ನಿಂದಾಗಿ 78 ಸಾವಿರ ಸಾವು ಸಂಭವಿಸುವುದು ತಪ್ಪಿದೆ. ಎಂಕೆಎಸ್‌ಆರ್ ಪ್ರಕಾರ 23 ಲಕ್ಷ ಕೇಸು ಹಾಗೂ 68 ಸಾವಿರ ಸಾವು ತಪ್ಪಿದೆ ಎಂದು ಡಾ. ಪೌಲ್ ಮಾಹಿತಿ ನೀಡಿದ್ದಾರೆ.
ಸ್ಫೋಟ ಇಲ್ಲ:
ಲಾಕ್‌ಡೌನ್‌ನಿಂದಾಗಿ ಆ ಅವಧಿಯಲ್ಲಿ ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಸ್ಫೋಟಕ ಪ್ರಮಾಣದಲ್ಲಿ ಹೆಚ್ಚುವುದು ತಪ್ಪಿದಂತಾಗಿದೆ. ಏಪ್ರಿಲ್ 3ರವರೆಗೆ ದೇಶದಲ್ಲಿ ದಿನದಿಂದ ದಿನಕ್ಕೆ ಶೇ.22.6ರ ಪ್ರಮಾಣದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿತ್ತು. ಏಪ್ರಿಲ್ 3ರ ನಂತರ ಮೊದಲ 15-20 ದಿನದಲ್ಲೇ ಅದು ಸಾಕಷ್ಟುಕಡಿಮೆಯಾಗಿ, ಈಗ ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಳದ ಪ್ರಮಾಣ ಶೇ.5.5 ಇದೆ. ಈಗಲೂ ಸೋಂಕು ಹೆಚ್ಚುತ್ತಿದೆ, ಆದರೆ ಇದು ಸ್ಫೋಟಕ ಹೆಚ್ಚಳ ಅಲ್ಲ. ಲಾಕ್‌ಡೌನ್‌ಗಿಂತ ಮುಂಚೆ ಸೋಂಕು 3.4 ದಿನಕ್ಕೊಮ್ಮೆ ದುಪ್ಪಟ್ಟಾಗುತ್ತಿತ್ತು. ಈಗ 13.3 ದಿನಕ್ಕೆ ದುಪ್ಪಟ್ಟಾಗುತ್ತಿದೆ ಎಂದು ತಿಳಿಸಿದರು.
ಕಳೆದ 4 ದಿನದಿಂದ ನಿತ್ಯ 1 ಲಕ್ಷ ಪರೀಕ್ಷೆ
ಕೊರೋನಾ ಪರೀಕ್ಷೆ ಪ್ರಮಾಣವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಕಳೆದ 4 ದಿನಗಳಿಂದ ಸತತವಾಗಿ ನಿತ್ಯವೂ 1 ಲಕ್ಷಕ್ಕಿಂತ ಹೆಚ್ಚಿನ ಪರೀಕ್ಷೆ ನಡೆಸಲಾಗಿದೆ. ಈವರೆಗೆ ಒಟ್ಟಾರೆ 27.55 ಲಕ್ಷ ಪರೀಕ್ಷೆ ನಡೆಸಲಾಗಿದೆ. ಈವರೆಗೆ ದೇಶದಲ್ಲಿ 48534 ಸೋಂಕಿತರು ಗುಣಮುಖರಾಗಿದ್ದಾರೆ. ಅಂದರೆ ಗುಣಮುಖದ ಪ್ರಮಾಣ ಶೇ.41ರಷ್ಟಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಲಾಕ್‌ಡೌನ್‌ನಿಂದಾಗಿ ಭಾರತ ಬಚಾವ್!
ಯಾವ ಸಮೀಕ್ಷೆ, ಏನನ್ನುತ್ತೆ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ