ಸೇನೆ ಸೇರಲು ಸಾಧ್ಯವಾಗಲಿಲ್ಲ ಎನ್ನುವ ಕಾರಣಕ್ಕೆ, ಹುತಾತ್ಮರಾದ ಯೋಧರ ಹೆಸರು, ಭಾವಚಿತ್ರಗಳನ್ನೇ ತನ್ನ ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ ಈ ಯುವಕ. ಏನಿವನ ಕಥೆ?
ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ದೇಶಪ್ರೇಮವನ್ನು ಮೆರೆಯುತ್ತಾರೆ. ಉತ್ತರ ಪ್ರದೇಶದ ಹಾಪುರದ ಯುವಕ ಗೌತಮ್ ಎಂಬಾತ ಮಹಾತ್ಮ ಗಾಂಧಿ, ರಾಣಿ ಲಕ್ಷ್ಮಿ ಬಾಯಿ, ಭಗತ್ ಸಿಂಗ್ ಸೇರಿದಂತೆ ಕರ್ತವ್ಯದ ವೇಳೆ ಹುತಾತ್ಮರಾದ 631 ಸೈನಿಕರ ಹೆಸರನ್ನು ತನ್ನ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡು ದೇಶ ಪ್ರೇಮ ಮೆರೆದಿದ್ದಾನೆ. ಈ ಅಸಾಧಾರಣ ಕಾರ್ಯವು ಅಭಿಷೇಕ್ ಗೌತಮ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಮತ್ತು "ಲಿವಿಂಗ್ ವಾಲ್ ಮೆಮೋರಿಯಲ್" ಪ್ರಶಸ್ತಿಯನ್ನು ತಂದುಕೊಟ್ಟಿದೆ. 31 ವರ್ಷದ ಯುವಕನಿಗೆ ಈ ರೀತಿಯ ಪ್ರೇರಣೆಯಾಗಿದ್ದು, ಕಾರ್ಗಿಲ್‌ನಲ್ಲಿ ಹುತಾತ್ಮರಾದ ಯೋಧರು. ಲೇಹ್-ಲಡಾಖ್ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಹುತಾತ್ಮ ಯೋಧರ ತ್ಯಾಗ-ಬಲಿದಾನದ ಘಟನೆಗಳಿಂದ ಸ್ಫೂರ್ತಿಗೊಂಡ ಯುವಕ ತನ್ನದೊಂದು ಸೇವೆ ಇರಲಿ ಎನ್ನುವ ಕಾರಣಕ್ಕೆ ಈ ರೀತಿ ಮಾಡಿಕೊಂಡಿದ್ದಾನೆ.
ಯಾವುದೇ ಅಪಾಯ ಎದುರಾದರೂ ನಮ್ಮ ಯೋಧರು ತಮ್ಮ ಜೀವದ ಹಂಗು ತೊರೆದು ಮುನ್ನುಗ್ಗುತ್ತಾರೆ. ಎಂಥದ್ದೇಕಷ್ಟದ ಸ್ಥಿತಿಯಲ್ಲಿಯೂ ಅವರು ತಮ್ಮ ಪ್ರಾಣ ತ್ಯಾಗ ಮಾಡಿಯಾದರೂ ನಮಗೆ ಜೀವದಾನ ನೀಡುತ್ತಾರೆ. ನನಗೂ ಇಂಥ ಅನುಭವ ಆಗಿದೆ. ಅವರಿಂದಲೇ ನಾವಿಂದು ಸುರಕ್ಷಿತವಾಗಿದ್ದೇವೆ ಎನ್ನುವ ಗೌತಮ್, ವೀರ ಮರಣ ಅಪ್ಪಿರುವವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಬಗೆ ಹೇಗೆ ಎಂದು ತಿಳಿಯದೇ ಈ ಮಾರ್ಗವನ್ನು ಆಯ್ದುಕೊಂಡಿದ್ದೇನೆ ಎಂದಿದ್ದಾರೆ. ಈ ಟ್ಯಾಟೂವಿನಲ್ಲಿ ಕಿತ್ತೂರ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಸೇರಿದಂತೆ ವೀರ ವನಿತೆಯರ ಭಾವಚಿತ್ರಗಳೂ ಇವೆ.
ಪಾರ್ವತಮ್ಮನವ್ರು ಹಾಗೆ ಯಾಕೆ ಮಾಡಿದ್ರಂತ ಕೊನೆಗೂ ಗೊತ್ತಾಗ್ಲೇ ಇಲ್ಲ! ಸುಧಾರಾಣಿ ಹೇಳಿದ್ದೇನು?
ಅಷ್ಟಕ್ಕೂ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಕುಟುಂಬದವರನ್ನು ಭೇಟಿಯಾಗಿ ಅವರ ಭಾವಚಿತ್ರಗಳನ್ನು ಟ್ಯಾಟೂ ರೂಪದಲ್ಲಿ ಬರೆಸಿಕೊಳ್ಳಲು ಗೌತಮ್ ಹಲವಾರು ವರ್ಷಗಳ ಶ್ರಮ ಪಟ್ಟಿದ್ದಾರೆ. ಎಲ್ಲರ ಭಾವಚಿತ್ರವನ್ನು ಸಂಪೂರ್ಣ ಮಾಹಿತಿ ಪಡೆದು ಕೊನೆಗೆ ದೆಹಲಿಯಲ್ಲಿ ಹಚ್ಚೆ ಕಲಾವಿದರನ್ನು ಹುಡುಕಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಪರಿಯ ಟ್ಯಾಟೂವಿನಿಂದಾಗಿ ಜೀವಕ್ಕೆ ಅಪಾಯ ಎಂದು ವೈದ್ಯರು ಹೇಳಿದ್ದರಂತೆ. ಆದರೆ ಆ ಎಚ್ಚರಿಕೆಯನ್ನು ಕಡೆಗಣಿಸಿ ಈ ನಿರ್ಧಾರಕ್ಕೆ ಬಂದೆ. ದೇಶಕ್ಕಾಗಿ ಪ್ರಾಣ ತೆರುವ ಯೋಧರ ಮುಂದೆ ಇದ್ಯಾವ ಲೆಕ್ಕ ಎನಿಸಿತು ಎಂದಿದ್ದಾರೆ ಗೌತಮ್.
ಕಾರ್ಗಿಲ್‌ನಲ್ಲಿ ಕರ್ತವ್ಯದ ಸಾಲಿನಲ್ಲಿ ಹುತಾತ್ಮರಾದ 559 ಸೈನಿಕರ ಹೆಸರನ್ನು ಹಚ್ಚೆ ಹಾಕುವ ಮೂಲಕ ಅವರು ಪ್ರಾರಂಭಿಸಿದರು. ಅವರು ತಮ್ಮ ದೇಹದ ಮೇಲೆ ಸ್ಮಾರಕ ಸ್ತಂಭವನ್ನು ಸಹ ರಚಿಸಿಕೊಂಡಿದ್ದಾರೆ. ಗೌತಮ್ ಅವರ ಪತ್ನಿ ಸೇರಿದಂತೆ ಅವರ ಕುಟುಂಬಕ್ಕೆ ಅವರ ನಿರ್ಧಾರದ ಬಗ್ಗೆ ಆರಂಭದಲ್ಲಿ ತಿಳಿದಿರಲಿಲ್ಲ. ತಿಳಿದ ಬಳಿಕ ಆತಂಕಗೊಂಡರೂ ಕೊನೆಗೆ ಬೆಂಬಲ ನೀಡಿದರು ಎನ್ನುತ್ತಾರೆ ಗೌತಮ್. ಜನರು ತಮ್ಮ ದೇಶಭಕ್ತಿಯನ್ನು ಆಗಸ್ಟ್ 15, ಜನವರಿ 26 ರಂದು ಅಥವಾ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳ ಸಮಯದಲ್ಲಿ ತೋರಿಸುತ್ತಾರೆ. ಉಳಿದ ಸಮಯದಲ್ಲಿ ಅಸಡ್ಡೆ ತೋರುತ್ತಾರೆ.. ಭಾರತೀಯ ಸೇನೆಗೆ ಸೇರಲು ನನಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಈ ರೀತಿಯಾಗಿ ದೇಶ ಸೇವೆ ಮಾಡುತ್ತಿದ್ದೇನೆ ಎನ್ನುತ್ತಾರೆ ಅವರು. ಅಂದಹಾಗೆ, 1999 ರಲ್ಲಿ, ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಭಾರತದ ಭಾಗಕ್ಕೆ ಪಾಕಿಸ್ತಾನಿ ಸೈನಿಕರು ಮತ್ತು ಭಯೋತ್ಪಾದಕರ ಒಳನುಸುಳುವಿಕೆಯಿಂದ ಕಿಡಿ ಹೊತ್ತಿಸಿ ಭಾರತ ಮತ್ತು ಪಾಕಿಸ್ತಾನ ಕಾರ್ಗಿಲ್ ಯುದ್ಧವನ್ನು ನಡೆಸಿತು. ಅಂತಿಮವಾಗಿ, ಭಾರತವು ಜಯ ಸಾಧಿಸಿತು. ಭಾರತವು ಸುಮಾರು 550 ಸೈನಿಕರನ್ನು ಕಳೆದುಕೊಂಡರೆ, ಪಾಕಿಸ್ತಾನವು 700 ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿದೆ ಎಂದು ಅಂದಾಜಿಸಲಾಗಿದೆ.
ಪ್ರಕಾಶ್ ರಾಜ್ ಜೊತೆ ಕೆಲಸ ಮಾಡುವ ಅನುಭವ ಹೇಗಿರತ್ತೆ? ಪ್ರಿಯಾಮಣಿ ಓಪನ್ ಮಾತಿದು...