ಕೊಲೆ ಆಗಿದ್ದ ಬಾಲಕ ಸುಪ್ರೀಂಕೋರ್ಟ್‌ ಮುಂದೆ ಹಾಜರಾಗಿ ಬದುಕಿದ್ದೇನೆ ಎಂದ..!

By Kannadaprabha News  |  First Published Nov 12, 2023, 8:55 AM IST

ಉತ್ತರ ಪ್ರದೇಶದ ಪೀಲಿಭೀತ್‌ನ 11 ವರ್ಷ ದ ಬಾಲಕನೊಬ್ಬ ಕೊಲೆ ಆಗಿದ್ದಾನೆ ಎಂದು ಹಲವು ವರ್ಷಗಳ ಹಿಂದೆ ಪ್ರಕರಣ ದಾಖಲಾಗಿತ್ತು. ಆದರೆ ಅದೇ ಬಾಲಕ ಶುಕ್ರವಾರ ಸುಪ್ರೀಂಕೋರ್ಟ್ (Supreme Court) ಮುಂದೆ ಹಾಜರಾಗಿ ತಾನು ಬದುಕಿದ್ದೇನೆ ಎಂದು ಹೇಳಿ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದಾನೆ. 


ನವದೆಹಲಿ: ಇದೊಂದು ವಿಚಿತ್ರ ಘಟನೆ. ಉತ್ತರ ಪ್ರದೇಶದ ಪೀಲಿಭೀತ್‌ನ 11 ವರ್ಷ ದ ಬಾಲಕನೊಬ್ಬ ಕೊಲೆ ಆಗಿದ್ದಾನೆ ಎಂದು ಹಲವು ವರ್ಷಗಳ ಹಿಂದೆ ಪ್ರಕರಣ ದಾಖಲಾಗಿತ್ತು. ಆದರೆ ಅದೇ ಬಾಲಕ ಶುಕ್ರವಾರ ಸುಪ್ರೀಂಕೋರ್ಟ್ (Supreme Court) ಮುಂದೆ ಹಾಜರಾಗಿ ತಾನು ಬದುಕಿದ್ದೇನೆ ಎಂದು ಹೇಳಿ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದಾನೆ. ಆದರೆ ಕೊಲೆ ಆರೋಪ ಹೊತ್ತಿದ್ದ ಆತನ ಅಜ್ಜ ಹಾಗೂ ಮಾವಂದಿರು ಇದರಿಂದ ನಿರಾಳರಾಗಿದ್ದಾರೆ.

ಸಂತ್ರಸ್ತ ಬಾಲಕನ ಹೆಸರು ಅಭಯ್‌ ಸಿಂಗ್‌ (Abhay Singh), ಈತನ ತಂದೆಯ ಮನೆಯವರು ಅಭಯ್‌ನ ಅಮ್ಮನನ್ನು ವರದಕ್ಷಿಣೆಗಾಗಿ ಪೀಡಿಸಿ ಹೊಡೆಯುತ್ತಿದ್ದರು. ಹೀಗಾಗಿ ಈತ ತಂದೆ ಮನೆಯಲ್ಲಿರದೇ 2013ರಿಂದ ತಾಯಿಯ ತವರು ಮನೆಯಲ್ಲೇ ಅಜ್ಜ-ಅಜ್ಜಿಯೊಂದಿಗೆ ವಾಸಿಸುತ್ತಿದ್ದ. ಇದರ ನಡುವೆ ಈತನ ತಾಯಿ ಕೆಲವು ವರ್ಷದ ಹಿಂದೆ ತೀರಿ ಹೋಗಿದ್ದರು. ಹೀಗಾಗಿ ತಾಯಿಯ ಮನೆ ಕಡೆಯವರು, ಅಭಯ್‌ನ ತಂದೆ ಮೇಲೆ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳಲು ಅಭಯ್‌ ತಂದೆ ಕೊಲೆ ಕತೆ ಸೃಷ್ಟಿಸಿ, ಆತನ ಅಜ್ಜ ಹಾಗೂ ಸೋದರ ಮಾವಂದಿರ ವಿರುದ್ಧ ಕೊಲೆ ಕೇಸು ದಾಖಲಿಸಿದ್ದ.

Tap to resize

Latest Videos

ಪಂಜಾಬ್‌ ಗೌರ್ನರ್‌ಗೆ ಸುಪ್ರೀಂ ಚಾಟಿ: ಮಸೂದೆಗೆ ಸಹಿ ಹಾಕದ್ದಕ್ಕೆ ರಾಜ್ಯಪಾಲರಿಗೆ ತೀವ್ರ ತರಾಟೆ

ಆದರೆ ಇದರ ವಿರುದ್ಧ ಬಾಲಕ ಹಲವು ಬಾರಿ ಕೆಳ ನ್ಯಾಯಾಲಯದಲ್ಲಿ ತಾನು ಬದುಕಿದ್ದೇನೆ. ತನ್ನ ಕೊಲೆ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ. ಆದರೂ ಯಾವ ನ್ಯಾಯಾಲಯವೂ ಆತನ ವಾದ ಮನ್ನಿಸಿರಲಿಲ್ಲ. ಹೀಗಾಗಿ ಬಾಲಕ ಸುಪ್ರೀಂ ಮೊರೆ ಹೋಗಿದ್ದ.

2018ರ ಪಟಾಕಿ ನಿಷೇಧ ಇಡೀ ದೇಶಕ್ಕೆ ಅನ್ವಯ: ಸುಪ್ರೀಂಕೋರ್ಟ್‌

click me!