Price Hike ಶಾಕ್; ಶೀಘ್ರದಲ್ಲೇ ಮದ್ಯ, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳ ದರ ಹೆಚ್ಚಳ!

Published : Nov 13, 2021, 03:53 PM ISTUpdated : Nov 13, 2021, 03:54 PM IST
Price Hike ಶಾಕ್; ಶೀಘ್ರದಲ್ಲೇ ಮದ್ಯ, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳ ದರ ಹೆಚ್ಚಳ!

ಸಾರಾಂಶ

ಭಾರತದಲ್ಲಿ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್ ಎಣ್ಣೆ ಮತ್ತಷ್ಟು ದುಬಾರಿ, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಹೆಚ್ಚಳ ಪೆಟ್ರೋಲ್, ಡೀಸೆಲ್ ಬೆಲೆಯಿಂದ ಹೈರಾಣದ ಮಂದಿಗೆ ಇದೀಗ ಮತ್ತೊಂದು ಆಘಾತ

ನವದೆಹಲಿ(ನ.13): ದೇಶದಲ್ಲಿ ಬೆಲೆ ಏರಿಕೆ(Price Hike) ಬಿಸಿ ಜನಸಾಮನ್ಯರಿಗೆ ಇನ್ನಿಲ್ಲದಂತೆ ಕಾಡುತ್ತಿದೆ. ಪೆಟ್ರೋಲ್, ಡೀಸೆಲ್(Petrol Diesel) ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಹೊಟೆಲ್ ಆಹಾರದ ಬೆಲೆ ಏರಿಕೆ, ಆಟೋ ಪ್ರಯಾಣದ ದರ ಏರಿಕೆ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಶೀಘ್ರದಲ್ಲೇ  ಮದ್ಯ, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತ ಇತರ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಶೇಕಡಾ 8 ರಿಂದ 10 ರಷ್ಟು ಬೆಲೆ ಏರಿಕೆ ಆಗಲಿದೆ.

ಪ್ಯಾಕೆಟ್ ಆಹಾರ ವಸ್ತುಗಳು(Food) ಸೇರಿದಂತೆ ಇತರ ವಸ್ತುಗಳ ಬೆಲೆ ಒಂದು ಹಂತಕ್ಕೆ ಏರಿಕೆಯಾಗಿದೆ. ಇದೀಗ ಎರಡನೇ ಹಂತದ ಬೆಲೆ ಏರಿಕೆಗೆ ಎಲ್ಲಾ ಕಂಪನಿಗಳ ಒಕ್ಕೂಟ ಮುಂದಾಗಿದೆ. ನೂತನ ದರ ಹೊಸ ವರ್ಷದಿಂದ(New Year) ಜಾರಿಗೆ ಬರಲಿದೆ. ಬೆಲೆ ಏರಿಕೆ ನೇರವಾಗಿ ಜನಸಾಮಾನ್ಯರ ಮೇಲೆ ತಟ್ಟಲಿದೆ. ಇದರಿಂದ ವ್ಯಾಪಾರ ವಹಿವಾಟು ಕುಂಠಿತಗೊಳ್ಳಲಿದೆ. 

 

Price Hike: ಬೆಂಗಳೂರು ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್; ನಗರ ಆಟೋ ಪ್ರಯಾಣ ದರ ಏರಿಕೆ!

ಚಿಲ್ಲರೆ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ 4.35% ಕ್ಕೆ ಇಳಿದಿದೆ. ಇತ್ತ ವ್ಯವಹಾರಗಳ ವೆಚ್ಚದ ಸೂಚಕವಾದ ಸಗಟು ಹಣದುಬ್ಬರವು ಈಗ ಆರು ತಿಂಗಳಿನಿಂದ ಎರಡಂಕಿಯಲ್ಲಿದೆ. ಹೀಗಾಗಿ ಅಗತ್ಯ ವಸ್ತಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ. ಗಾಜು, ಹತ್ತಿ ಉಕ್ಕು, ರಾಸಾನಿಯಕ ಕಚ್ಚಾ ಸಾಮಾಗ್ರಿಗಳ ಬೆಲೆ ಏರಿಕೆಯಾಗಿದೆ. ಸಾರಿಗೆ ವೆಚ್ಚವೂ ಹೆಚ್ಚಾಗಿದೆ. ಹೀಗಾಗಿ ಅಗತ್ಯವಸ್ತುಗಳ ಬೆಲೆ ಶೇಕಡಾ 8 ರಿಂದ 10 ರಷ್ಟು ಏರಿಕೆಯಾಗಲಿದೆ.

ದೇಶದಲ್ಲಿ ಬಹುತೇಕ ಎಲ್ಲಾ ಕಚ್ಚಾವಸ್ತುಗಳ ಬೆಲೆ ಗಗನಕ್ಕೇರಿದೆ. ಹತ್ತಿ ಬೆಲೆ ಶೇಕಡಾ 60 ರಷ್ಟು ಏರಿಕೆಯಾಗಿದೆ. ಇದು ನೇರವಾಗಿ ಬಟ್ಟೆ, ಟೆಕ್ಸ್‌ಟೈಲ್(Textile) ವ್ಯವಹಾರದ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಬಟ್ಟೆಗಳ ಮೇಲಿನ ಬೆಲೆ ಹೆಚ್ಚಳವಾಗಲಿದೆ. ಗಾರ್ಮೆಂಟ್ಸ್ ಬೆಲೆ ಏರಿಕೆಯಿಂದ ಬಟ್ಟೆ ದುಬಾರಿಯಾಗಲಿದೆ. ಕಳೆದ ಕೆಲ ತಿಂಗಳನಿಂದ ಕಚ್ಚಾವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. 

ಎಲೆಕ್ಟ್ರಾನಿಕ್ ವಸ್ತುಗಳಾದ(Electronic items) ಎಸಿ, ವಾಶಿಂಗ್ ಮಶಿನ್, ಮೈಕ್ರೋವೇವ್ ಓವನ್ ಸೇರಿದಂತೆ ಇತರ ಕೆಲ ವಸ್ತುಗಳ ಬೆಲೆ ಶೇಕಡಾ 5 ರಿಂದ 6 ರಷ್ಟು ಹೆಚ್ಚಾಗಲಿದೆ. ಈ ಬೆಲೆ ಮುಂದಿನ ವಾರದಿಂದಲೇ ಜಾರಿಯಾಗಲಿದೆ. ಇನ್ನು ಹೊಸ ವರ್ಷದ ಆರಂಭದಲ್ಲಿ ಶೇಕಡಾ 4 ರಿಂದ 5 ರಷ್ಟು ಬೆಲೆ ಏರಿಕೆಯಾಗಲಿದೆ. ಈ ಮೂಲಕ ಎರಡು ತಿಂಗಳ ಅಂತರದಲ್ಲಿ ಎರಡು ಬಾರಿ ಬೆಲೆ ಏರಿಕೆಯಾಗಲಿದೆ.

ಬೆಲೆಯೇರಿಕೆ ವಿರುದ್ಧ 15 ದಿನ ದೇಶದೆಲ್ಲೆಡೆ ‘ಕೈ’ ಪಾದಯಾತ್ರೆ!

ಮದ್ಯದ ಬೆಲೆಯಲ್ಲಿ(liquor) ಶೇಕಡಾ 5 ರಿಂದ 7 ರಷ್ಟು ಹೆಚ್ಚಳವಾಗಲಿದೆ. ಎಲ್ಲಾ ಮದ್ಯದ ಬೆಲೆಯಲ್ಲಿ ಏರಿಕೆಯಾಗಲಿದೆ. ಹೀಗಾಗಿ ಹೊಸ ವರ್ಷದ ಪಾರ್ಟಿಗೆ ಮದ್ಯ ಮತ್ತಷ್ಟು ದುಬಾರಿಯಾಗಲಿದೆ.  ಕ್ರಿಸ್ಮಸ್ ಕೇಕ್ ದುಬಾರಿಯಾಗಲಿದೆ. ಇತ್ತ ಹೊಸ ವರ್ಷದ ಅಬ್ಬರಕ್ಕೆ ಬ್ರೇಕ್ ಬೀಳಲಿದೆ.

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟ ಜನತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸುಂಕ ಕಡಿತಗೊಳಿಸಿ ಕೊಂಚ ರಿಲೀಫ್ ನೀಡಿದೆ. ಆದರೆ ಪೆಟ್ರೋಲ್ ಬೆಲೆ 100 ರೂಪಾಯಿಗಿಂತ ಕೆಳಗಿಳಿದಿಲ್ಲ. ಹೀಗಾಗಿ ಬೆಲೆ ಕಡಿತ ಸಣ್ಣ ಮಟ್ಟಿನ ರಿಲೀಫ್ ನೀಡಿದೆ. ಇತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಶೀಘ್ರದಲ್ಲೇ ಗರಿಷ್ಠ ಮಟ್ಟಕ್ಕೆ ತಲುಪುದರಲ್ಲಿ ಯಾವುದೇ ಅನುಮಾನವಿಲ್ಲ. ಇದರ ಜೊತೆಗೆ ಗ್ಯಾಸ್ ಸಿಲಿಂಡರ್ ಬೆಲೆಯೂ ಗಗನಕ್ಕೇರಿದೆ. ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ. ಗಗನಕ್ಕೇರಿರುವ ಅಡುಗೆ ಎಣ್ಣೆ ಬೆಲೆಯನ್ನು ಕಡಿತಗೊಳಿಸಲಾಗಿದೆ. ಆದರೂ ಜನಸಾಮಾನ್ಯರಿಗೆ ಕೈಗೆಟುಕುವಂತಿಲ್ಲ. ಇತ್ತೀಚೆಗೆ ಬೆಂಕಿ ಪೊಟ್ಟಣದ ಬೆಲೆಯೂ ಏರಿಕೆಯಾಗಿತ್ತು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live:ಇಂಡಿಗೋ ಏರ್‌ಲೈನ್ಸ್ ಸಮಸ್ಯೆ ತನಿಖೆಗೆ 4 ಸದಸ್ಯರ ತಂಡ ರಚಿಸಿದ ಕೇಂದ್ರ ಸರ್ಕಾರ
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌