ಯುದ್ಧದ ಸವಾಲನ್ನು ಒಗ್ಗಟ್ಟಿಂದ ಜಯಿಸೋಣ : ಮೋದಿ ಕರೆ

Kannadaprabha News   | Kannada Prabha
Published : Mar 30, 2026, 04:48 AM IST
narendra modi

ಸಾರಾಂಶ

ಪ್ರಸ್ತುತ ನಮ್ಮ ನೆರೆಹೊರೆಯಲ್ಲಿ 1 ತಿಂಗಳಿನಿಂದ ಭೀಕರ ಯುದ್ಧ ನಡೆಯುತ್ತಿದೆ. ಇದು ಅತ್ಯಂತ ಸವಾಲಿನ ಸಮಯ. ನಾವೆಲ್ಲ ಈ ಸವಾಲನ್ನು ಒಗ್ಗಟ್ಟಿನಿಂದ ಜಯಿಸಬೇಕು. ಎಲ್ಲಾ ನಾಗರಿಕರು ಜಾಗರೂಕರಾಗಿರಬೇಕು ಮತ್ತು ವದಂತಿಗಳಿಂದ ದಾರಿ ತಪ್ಪಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮನವಿ ಮಾಡಿದ್ದಾರೆ.

ನವದೆಹಲಿ/ಪಾಲಕ್ಕಾಡ್‌ : ಪ್ರಸ್ತುತ ನಮ್ಮ ನೆರೆಹೊರೆಯಲ್ಲಿ 1 ತಿಂಗಳಿನಿಂದ ಭೀಕರ ಯುದ್ಧ ನಡೆಯುತ್ತಿದೆ. ಇದು ಅತ್ಯಂತ ಸವಾಲಿನ ಸಮಯ. ನಾವೆಲ್ಲ ಈ ಸವಾಲನ್ನು ಒಗ್ಗಟ್ಟಿನಿಂದ ಜಯಿಸಬೇಕು. ಎಲ್ಲಾ ನಾಗರಿಕರು ಜಾಗರೂಕರಾಗಿರಬೇಕು ಮತ್ತು ವದಂತಿಗಳಿಂದ ದಾರಿ ತಪ್ಪಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮನವಿ ಮಾಡಿದ್ದಾರೆ. ಅಲ್ಲದೆ, ‘ಸೂಕ್ಷ್ಮ ವಿಷಯದ ಬಗ್ಗೆ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಹೇಳಿಕೆಗಳು ಅಪಾಯಕಾರಿಯಾಗಿದ್ದು, ಇದರಿಂದ ಕೊಲ್ಲಿಯಲ್ಲಿನ 1 ಕೋಟಿ ಭಾರತೀಯರ ಜೀವಕ್ಕೆ ಅಪಾಯವಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮೊದಲು ತಮ್ಮ ಮಾಸಿಕ ‘ಮನ್‌ ಕೀ ಬಾತ್‌’ ರೇಡಿಯೋ ಕಾರ್ಯಕ್ರಮದಲ್ಲಿ ಹಾಗೂ ನಂತರ ಕೇರಳದ ಪಾಲಕ್ಕಾಡ್‌ನಲ್ಲಿ ನಡೆದ ಬಿಜೆಪಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ನಮ್ಮ ನೆರೆಹೊರೆಯ ದೇಶಗಳಲ್ಲಿ ಭೀಕರ ಸಮರ ನಡೆಯುತ್ತಿದೆ. ಇದು ಖಂಡಿತವಾಗಿಯೂ ಅತಿ ಸವಾಲಿನ ಸಮಯ. ಇದನ್ನು ಒಗ್ಗಟ್ಟಿನಿಂದ ಎದುರಿಸಬೇಕು. ಈ ವಿಷಯವನ್ನು ರಾಜಕೀಯಗೊಳಿಸುತ್ತಿರುವವರನ್ನು ತಡೆಯಬೇಕು. ಏಕೆಂದರೆ ಇದು 140 ಕೋಟಿ ನಾಗರಿಕರ ಹಿತಾಸಕ್ತಿಗಳಿಗೆ ಸಂಬಂಧಿಸಿದ ವಿಷಯ. ಸ್ವಾರ್ಥ ರಾಜಕೀಯಕ್ಕೆ ಇಲ್ಲಿ ಸ್ಥಾನವಿಲ್ಲ’ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ಮಾತನಾಡಿದ ಪ್ರಧಾನಿ, ‘ಈ ಸೂಕ್ಷ್ಮ ವಿಷಯದ ಬಗ್ಗೆ ಕಾಂಗ್ರೆಸ್ ಯಾವ ರೀತಿಯ ಹೇಳಿಕೆಗಳನ್ನು ನೀಡುತ್ತಿದೆ ಎಂಬುದನ್ನು ನೀವು ನೆನಪಿನಲ್ಲಿಡಬೇಕು. ಅವು ಅಪಾಯಕಾರಿ. ಗಲ್ಫ್ ದೇಶಗಳಲ್ಲಿ ವಾಸಿಸುವ ಸುಮಾರು 1 ಕೋಟಿ ಭಾರತೀಯರ ಜೀವಗಳನ್ನು ಅಪಾಯಕ್ಕೆ ಸಿಲುಕಿಸಲು ಕಾಂಗ್ರೆಸ್ ಬಯಸುತ್ತದೆ, ಇದರಿಂದ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ’ ಎಂದು ಆರೋಪಿಸಿದರು.

ವದಂತಿಗಳಿಗೆ ಬಲಿಯಾಗದಿರಿ:‘

ಎಲ್ಲಾ ನಾಗರಿಕರು ಜಾಗರೂಕರಾಗಿರಿ ಮತ್ತು ವದಂತಿಗಳಿಗೆ ಬಲಿಯಾಗಬೇಡಿ. ಸರ್ಕಾರ ಒದಗಿಸುವ ನಿರಂತರ ಮಾಹಿತಿಯನ್ನು ಮಾತ್ರ ನಂಬಿ. ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಿ. ಈ ಕಠಿಣ ಪರಿಸ್ಥಿತಿಯಿಂದ ನಾವೆಲ್ಲ ಒಟ್ಟಾಗಿ ವಿಜಯಶಾಲಿಗಳಾಗಿ ಹೊರಹೊಮ್ಮುತ್ತೇವೆ ಎಂಬ ವಿಶ್ವಾಸ ನನಗಿದೆ’ ಎಂದರು.

ಸವಾಲು ಎದುರಿಸುವ ಶಕ್ತಿ:

‘1 ಕೋಟಿಗೂ ಹೆಚ್ಚು ಭಾರತೀಯರಿಗೆ ಎಲ್ಲಾ ರೀತಿಯ ಸಹಾಯವನ್ನು ಒದಗಿಸುತ್ತಿರುವ ಕೊಲ್ಲಿ ರಾಷ್ಟ್ರಗಳಿಗೆ ಕೃತಜ್ಞನಾಗಿದ್ದೇನೆ. ಪಶ್ಚಿಮ ಏಷ್ಯಾ ಭಾರತದ ಇಂಧನ ಅಗತ್ಯಗಳ ಪ್ರಮುಖ ಕೇಂದ್ರವಾಗಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ಸಂಬಂಧಿಸಿದಂತೆ ಪ್ರಪಂಚದಾದ್ಯಂತ ಬಿಕ್ಕಟ್ಟು ಉದ್ಭವಿಸುತ್ತಿದೆ. ನಮ್ಮ ಜಾಗತಿಕ ಸಂಬಂಧಗಳು, ವಿವಿಧ ದೇಶಗಳಿಂದ ನಮಗೆ ಸಿಗುತ್ತಿರುವ ಬೆಂಬಲ ಮತ್ತು ಕಳೆದ ದಶಕದಲ್ಲಿ ದೇಶವು ನಿರ್ಮಿಸಿರುವ ಸಾಮರ್ಥ್ಯವು ಭಾರತ ಈ ಸವಾಲನ್ನು ಧೈರ್ಯದಿಂದ ಎದುರಿಸಲು ಅನುವು ಮಾಡಿಕೊಟ್ಟಿವೆ’ ಎಂದರು.

- ಜಾಗರೂಕರಾಗಿರಿ. ವದಂತಿಗಳಿಂದ ದಾರಿ ತಪ್ಪಬೇಡಿ

- ಸೂಕ್ಷ್ಮ ವಿಷಯದ ಬಗ್ಗೆ ಕಾಂಗ್ರೆಸ್ ಹೇಳಿಕೆ ಅಪಾಯಕಾರಿ

- ಇದರಿಂದ 1 ಕೋಟಿ ಗಲ್ಫ್‌ ಭಾರತೀಯರ ಜೀವಕ್ಕೆ ಅಪಾಯ

- ಮನ್‌ ಕೀ ಬಾತ್‌, ಕೇರಳ ಬಿಜೆಪಿ ರ್‍ಯಾಲಿಯಲ್ಲಿ ಕಿಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಎಂಕೆ ಗೆದ್ರೆ ಮಹಿಳೆಯರಿಗೆ ಮಾಸಿಕ ₹2000!
ಫಿಟ್ ಆಗಿರೋಣ ಅಂತ ಸೈಕ್ಲಿಂಗ್ ಮಾಡ್ತಿದ್ದ ಉದ್ಯಮಿ ಕಾರು ಡಿಕ್ಕಿಯಾಗಿ ಸಾವು: ಕಾರು ಚಲಾಯಿಸ್ತಿದ್ದ 17 ವರ್ಷದ ಬಾಲಕನ ಬಂಧನ