ಸೋಂಕು ಹೆಚ್ಚಳಕ್ಕೆ ಜನಸಂದಣಿ, ವೈರಸ್‌ ರೂಪಾಂತರ ಕಾರಣ!

Published : Mar 22, 2021, 08:03 AM ISTUpdated : Mar 22, 2021, 08:32 AM IST
ಸೋಂಕು ಹೆಚ್ಚಳಕ್ಕೆ ಜನಸಂದಣಿ, ವೈರಸ್‌ ರೂಪಾಂತರ ಕಾರಣ!

ಸಾರಾಂಶ

ಸೋಂಕು ಹೆಚ್ಚಳಕ್ಕೆ ಜನಸಂದಣಿ, ವೈರಸ್‌ ರೂಪಾಂತರ ಕಾರಣ| ಮಾಸ್ಕ್‌ ಧರಿಸದೇ ಗುಂಪು ಸೇರುವ ಜನರೇ ಸೋಂಕು ವಾಹಕರು| ಜನರು ಕೊರೋನಾ ನಿಯಮ ಪಾಲಿಸುವುದು ತೀರ ಅವಶ್ಯ| ಏಮ್ಸ್‌ ಮುಖ್ಯಸ್ಥ ಗುಲೇರಿಯಾ ಕಳಕಳಿಯ ಮನವಿ| ಕೊರೋನಾ ನಿಯಮ ಪಾಲಿಸದಿದ್ದರೆ 2ನೇ ಅಲೆಗೆ ತಡೆ ಸಾಧ್ಯವಿಲ್ಲ

ನವದೆಹಲಿ(ಮಾ.22): ದೇಶದ ಜನರು ಕೊರೋನಾ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಬೇಕು ಹಾಗೂ ತಕ್ಷಣವೇ ಲಸಿಕೆ ಹಾಕಿಸಿಕೊಳ್ಳಬೇಕು. ಇಲ್ಲದೇ ಹೋದರೆ ಕೊರೋನಾದ 2ನೇ ಅಲೆಯನ್ನು ನಿಯಂತ್ರಿಸುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ದಿಲ್ಲಿಯ ಪ್ರತಿಷ್ಠಿತ ಏಮ್ಸ್‌ ಆಸ್ಪತ್ರೆ ಮುಖ್ಯಸ್ಥ ಡಾ

ರಣದೀಪ್‌ ಗುಲೇರಿಯಾ ಹೇಳಿದ್ದಾರೆ.

ಭಾನುವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ಜನರು ಕೊರೋನಾ ಮಾರ್ಗಸೂಚಿಗಳನ್ನು ಮರೆತಿದ್ದಾರೆ. ವಿವಿಧೆಡೆ ಮಾಸ್ಕ್‌ ಧರಿಸದೇ ಜನಜಂಗುಳಿ ಸೇರಿರುತ್ತದೆ. ಇವರೇ ಸೂಪರ್‌ ಸೆ್ೊ್ರಡರ್‌ಗಳಾಗಿರುತ್ತಾರೆ. ಒಂದು ವೇಳೆ ಮಾಸ್ಕ್‌ ಧಾರಣೆ, ಸೋಂಕಿತರ ಸಂಪರ್ಕ ಪತ್ತೆಯಂತ ಮೂಲಭೂತ ಕೆಲಸಗಳನ್ನು ಮಾಡದೇ ಹೋದರೆ ಕೊರೋನಾ ಪ್ರಕರಣಗಳು ಇನ್ನಷ್ಟುಹೆಚ್ಚಲಿವೆ’ ಎಂದು ಎಚ್ಚರಿಸಿದರು.

‘ಸದ್ಯ ದೇಶದಲ್ಲಿ ಮತ್ತೆ ಸೋಂಕು ಏರಿಕೆಯಾಗುತ್ತಿರುವುದಕ್ಕೆ ಜನರು ಈ ಸಾಂಕ್ರಾಮಿಕ ರೋಗ ಹರಡುವುದು ನಿಂತಿದೆ ಎಂದು ಭಾವಿಸಿರುವುದೂ ಒಂದು ಕಾರಣ. ಹೀಗಾಗಿ ಅವರು ಕೊರೋನಾದಿಂದ ರಕ್ಷಣೆ ಪಡೆಯುವ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ. ರೂಪಾಂತರಿ ಕೊರೋನಾ ವೈರಸ್‌ಗಳು ಕೂಡ ಸೋಂಕು ಹರಡಿಸುತ್ತಿವೆ. ಸೋಂಕಿತರ ಸಂಪರ್ಕಿತರ ಪತ್ತೆಯಲ್ಲೂ ಎಡವಲಾಗುತ್ತಿದೆ. ಆದರೆ, ಮುಖ್ಯ ಕಾರಣ ಜನರ ನಿರ್ಲಕ್ಷ್ಯವೇ ಆಗಿದೆ. ನಾವು ಈಗಲೂ ಅನಗತ್ಯ ಪ್ರಯಾಣವನ್ನು ಕೆಲ ಕಾಲ ಮುಂದೂಡಬೇಕಿದೆ. ಜೊತೆಗೆ ಲಸಿಕೆ ನೀಡಿಕೆ ಪ್ರಮಾಣವನ್ನು ಹೆಚ್ಚಿಸಬೇಕಿದೆ’ ಎಂದೂ ಗುಲೇರಿಯಾ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಂದೇ.. ಚರ್ಚೆಯಿಂದ ಹೊಸ ಇತಿಹಾಸ ಸೃಷ್ಟಿಗೆ ಮೋದಿ ಯತ್ನ: ಕಾಂಗ್ರೆಸ್‌
ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ