
ಕಾನ್ಪುರ: ಪುತ್ರ ಶಿವಂ ಮಿಶ್ರಾ ಚಲಾಯಿಸುತ್ತಿದ್ದ ಲ್ಯಾಂಬೋರ್ಘಿನಿ ಕಾರು ಹರಿದು 6 ಮಂದಿಗೆ ಗಾಯವಾದ ಸಂಬಂಧ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರು ತಮ್ಮ ಮಗನ ಬೆನ್ನಿಗೆ ನಿಂತಿದ್ದು ‘ನನ್ನ ಪುತ್ರ ಕಾರು ಚಲಾಯಿಸುತ್ತಿರಲಿಲ್ಲ. ಅಲ್ಲದೇ ಆತನ ಪಾನಮತ್ತನಾಗಿರಲಿಲ್ಲ’ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ‘ಘಟನೆಗೂ ಹಿಂದಿನ ದಿನ ಲ್ಯಾಂಗೋರ್ಘಿನಿ ಕಾರಿನಲ್ಲಿ ತಾಂತ್ರಿಕ ಸಮಸ್ಯೆಯಿತ್ತು. ಹಾಗಾಗಿ ಅದನ್ನು ಸರಿಪಡಿಸಲಾಗಿತ್ತು. ಶಿವಂ ಮತ್ತು ಚಾಲಕ ಪರೀಕ್ಷೆಗೆಂದು ಕಾರು ತೆಗೆದುಕೊಂಡು ಹೋಗಿದ್ದರು. ಪಾದಚಾರಿಗಳ ಮೇಲೆ ಕಾರು ಹರಿಯುತ್ತಿದ್ದಂತೆ ಶಿವಂ ಪ್ರಜ್ಞಾಹೀನನಾದ.
ಕಾರಿನ ಬಾಗಿಲು ತೆಗೆಯುವುದಕ್ಕೆ ಆಗಲಿಲ್ಲ. ಗಾಜು ಒಡೆದು ಶಿವಂನನ್ನು ಹೊರ ತೆಗೆಯಲಾಯಿತು. ಸದ್ಯ ಅವನು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು 2-3 ದಿನದಲ್ಲಿ ಸುಧಾರಿಸಿಕೊಳ್ಳಬಹುದು. ಅಪಘಾತದ ವೇಳೆ ಶಿವಂ ಕಾರು ಚಲಾಯಿಸುತ್ತಿರಲಿಲ್ಲ. ಅಲ್ಲದೇ ನಮ್ಮ ಮನೆಯಲ್ಲಿ ಯಾರಿಗೂ ಮದ್ಯಸೇವನೆ ಅಭ್ಯಾಸ ಇಲ್ಲ’ ಎಂದಿದ್ದಾರೆ.
ಆದರೆ ಪೊಲೀಸರು, ಕಾರು ಚಲಾಯಿಸಿದ್ದು ಶಿವಂ. ಅಲ್ಲದೇ ಈ ದೃಶ್ಯಾವಳಿಗಳು ಸಿಸಿಟೀವಿಯಲ್ಲಿ ಸೆರೆಯಾಗಿದೆ ಎಂದು ದೃಢಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ