ಆರ್‌ಜೆಡಿ ನಾಯಕ ಲಾಲೂ ಪ್ರಸಾದ್‌ ಯಾದವ್‌ಗೆ ಮಗಳಿಂದ ಕಿಡ್ನಿ ದಾನ..!

Published : Nov 10, 2022, 04:14 PM ISTUpdated : Nov 10, 2022, 04:23 PM IST
ಆರ್‌ಜೆಡಿ ನಾಯಕ ಲಾಲೂ ಪ್ರಸಾದ್‌ ಯಾದವ್‌ಗೆ ಮಗಳಿಂದ ಕಿಡ್ನಿ ದಾನ..!

ಸಾರಾಂಶ

ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಲಾಲೂ ಪ್ರಸಾದ್‌ ಯಾದವ್‌ ಅವರಿಗೆ ಮೂತ್ರಪಿಂಡ ಕಸಿ ಮಾಡುವ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದರಂತೆ. ಈ ಹಿನ್ನೆಲೆ, ತಂದೆಗೆ ಮೂತ್ರಪಿಂಡವೊಂದನ್ನು ಮಗಳು ದಾನ ಮಾಡ್ತಾರೆ ಎಂದು ತಿಳಿದುಬಂದಿದೆ. 

ಆರ್‌ಜೆಡಿ (RJD) ಸಂಸ್ಥಾಪಕ ಹಾಗೂ ನಾಯಕ ಲಾಲೂ ಪ್ರಸಾದ್‌ ಯಾದವ್‌ (Lalu Prasad Yadav) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ ತಿಂಗಳಷ್ಟೇ ಅವರು ಸಿಂಗಾಪುರದಿಂದ (Singapore) ಭಾರತಕ್ಕೆ (India) ವಾಪಸಾಗಿದ್ದಾರೆ. ಹಲವು ಆರೋಗ್ಯ ತೊಂದರೆಗಳನ್ನು (Health Problems) ಲಾಲೂ ಪ್ರಸಾದ್‌ ಎದುರಿಸುತ್ತಿದ್ದು, ಈ ಪೈಕಿ ಅವರಿಗೆ ಮೂತ್ರಪಿಂಡ ಅಥವಾ ಕಿಡ್ನಿ (Kidney) ಸಮಸ್ಯೆಯೂ ಇದೆ. ಈ ಹಿನ್ನೆಲೆ ಮೂತ್ರಪಿಂಡ ತೊಂದರೆಗಳಿಗೆ ಚಿಕಿತ್ಸೆ ಪಡೆಯಲು ಆರ್‌ಜೆಡಿ ನಾಯಕ ಲಾಲೂ ಪ್ರಸಾದ್‌ ಯಾದವ್‌ ಸಿಂಗಾಪುರಕ್ಕೆ ತೆರಳಿದ್ದರು. 

ಈಗ 74 ವರ್ಷದ ಲಾಲೂ ಪ್ರಸಾದ್‌ ಯಾದವ್‌ಗೆ ಕಿಡ್ನಿಯೊಂದನ್ನು ದಾನ ಮಾಡಲು ಅವರ ಮಗಳು (Daughter) ಮುಂದಾಗಿದ್ದಾರೆ ಎಂದು ಕುಟುಂಬದ ಹತ್ತಿರ ಸದಸ್ಯರೊಬ್ಬರು ಪಿಟಿಐಗೆ ಗುರುವಾರ ಮಾಹಿತಿ ನೀಡಿದ್ದಾರೆ. ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಲಾಲೂ ಪ್ರಸಾದ್‌ ಯಾದವ್‌ ಅವರಿಗೆ ಮೂತ್ರಪಿಂಡ ಕಸಿ ಮಾಡುವ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದರಂತೆ. ಈ ಹಿನ್ನೆಲೆ, ತಂದೆಗೆ ಮೂತ್ರಪಿಂಡವೊಂದನ್ನು ಮಗಳು ದಾನ ಮಾಡ್ತಾರೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: ರೈಲ್ವೇ ನೌಕರಿಗಾಗಿ ಜಮೀನು ಲಂಚ ಪ್ರಕರಣ, ಲಾಲೂ, ಪತ್ನಿ ರಾಬ್ರಿ ಸೇರಿ 14 ಮಂದಿ ವಿರುದ್ಧ ಚಾರ್ಜ್‌ಶೀಟ್!
 
ಸಿಂಗಾಪುರ ಮೂಲದ ರೋಹಿಣಿ ಆಚಾರ್ಯ (Rohini Acharya), ತಂದೆ ಲಾಲೂ ಪ್ರಸಾದ್‌ ಯಾದವ್‌ ಅವರ ಆರೋಗ್ಯ ಸುಧಾರಿಸಲು ಹಾಗೂ ಅವರ ಜೀವಕ್ಕೆ ಮತ್ತಷ್ಟು ಚೈತನ್ಯ ನೀಡಲು ಮುಂದಾಗಿದ್ದಾರೆ ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ. ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದ ಲಾಲೂ ಪ್ರಸಾದ್‌ ಯಾದವ್‌ ಸದ್ಯ ಜಾಮೀನಿನ ಮೇಲೆ ಹೊರಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿದ್ದಾರೆ. 

ಮೇವು ಹಗರಣಗಳಲ್ಲಿ ಅಪರಾಧಿಯಾಗಿರುವ ಹಾಗೂ 3 ಬಾರಿ ಬಿಹಾರ ಮುಖ್ಯಮಂತ್ರಿಯಾಗಿರುವ ಲಾಲೂ ಪ್ರಸಾದ್‌ ಯಾದವ್‌ ಜೈಲು ಶಿಕ್ಷೆ ಅವಧಿ ಇನ್ನೂ ಜಾರಿಯಲ್ಲಿದ್ದರೂ, ಅನಾರೋಗ್ಯ ಹಿನ್ನೆಲೆ ಅವರು ದೆಹಲಿ ಹಾಗೂ ರಾಂಚಿಯಲ್ಲಿ ಹಲವು ಬಾರಿ ಚಿಕಿತ್ಸೆಯನ್ನೂ ಪಡೆದುಕೊಂಡಿದ್ದಾರೆ. ಇನ್ನು, ಮೂತ್ರಪಿಂಡ ಸರ್ಜರಿ ಚಿಕಿತ್ಸೆ ಈ ತಿಂಗಳು ನಡೆಯಲಿದೆ ಎಂದು ಹೇಳಲಾಗಿದ್ದು, ಆದರೆ ಎಲ್ಲಿ ಚಿಕಿತ್ಸೆ ನಡೆಯಲಿದೆ ಎಂದು ಈವರೆಗೆ ತಿಳಿದುಬಂದಿಲ್ಲ. 

ಇದನ್ನೂ ಓದಿ: Fodder Scam: ಲಾಲೂ ಪ್ರಸಾದ್‌ ಯಾದವ್‌ಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶನಿಗೆ ಮತ್ತೊಂದು ಮದುವೆ

ಈ ವಿಚಾರವನ್ನು ಲಾಲೂ ಪ್ರಸಾದ್‌ ಯಾದವ್‌ ಮಗಳು ರೋಹಿಣಿ ಆಚಾರ್ಯ ಖಚಿತಪಡಿಸಿದ್ದು, "ಹೌದು, ಅದು ನಿಜ, ನಾನು ಡೆಸ್ಟಿನಿಯ ಮಗು ಮತ್ತು ನನ್ನ ಕಿಡ್ನಿಯನ್ನು ತಂದೆಗೆ ನೀಡಲು ಹೆಮ್ಮೆಪಡುತ್ತೇನೆ’’ಎಂದು ಸಿಂಗಾಪುರದಲ್ಲಿ ನೆಲೆಸಿರುವ ರೋಹಿಣಿ ಆಚಾರ್ಯ ಹೇಳಿಕೊಂಡಿದ್ದಾರೆ.  

ಈ ಮಧ್ಯೆ, ಕಳೆದ ತಿಂಗಳಷ್ಟೇ ರೋಹಿಣಿ ಆಚಾರ್ಯ ಅವರು ಲಾಲೂ ಪ್ರಸಾದ್‌ ಯಾದವ್‌ ಹಾಗೂ ಕುಟುಂಬದ ಜತೆಗಿರುವ ಕೆಲವು ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. “ದೇಶವು ದಬ್ಬಾಳಿಕೆಯ ಚಿಂತನೆಯ ವಿರುದ್ಧ ಹೋರಾಡಲು ಈ ದೇಶಕ್ಕೆ ನಿಮ್ಮ ಉಪಸ್ಥಿತಿಯ ಅಗತ್ಯವಿದೆ’’ ಎಂದೂ ಲಾಲೂ ಪ್ರಸಾದ್‌ ಯಾದವ್‌ ಅವರ ಪುತ್ರಿ ಟ್ವೀಟ್‌ ಮಾಡಿದ್ದರು. 

ಅದರೆ, ಈ ಬೆಳವಣಿಗೆ ಬಗ್ಗೆ ನಮಗೆ ಯಾವ ಮಾಹಿತಿಯೂ ಇಲ್ಲ ಎಂದು ದೆಹಲಿಯ ಏಮ್ಸ್‌ ವೈದ್ಯರು ತಿಳಿಸಿದ್ದಾರೆ. ಅಲ್ಲದೆ, ಮೂತ್ರಪಿಂಡ ಕಸಿ ಚಿಕಿತ್ಸೆ ಬೇರೆ ದೇಶದಲ್ಲಿ ನಡೆದರೆ ಅದಕ್ಕೆ ಏಮ್ಸ್‌ ಆಸ್ಪತ್ರೆಯಿಂದ ಅನುಮತಿ ತೆಗೆದುಕೊಳ್ಳುವ ಅಗತ್ಯವೂ ಇಲ್ಲ ಎಂದೂ ವೈದ್ಯರೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ. ದೇಹದ ಬಿಡಿಭಾಗಗಳನ್ನು ಕಸಿ ಮಾಡಿಸಿಕೊಳ್ಳಲು ಭಾರತದಲ್ಲಿ ಅನೇಕ ನಿಯಮಾವಳಿಗಳಿದ್ದು, ಅದನ್ನು ರೋಗಿಗಳು ಪಾಲಿಸಲೇಬೇಕಿದೆ. 

 

ಇದನ್ನೂ ಓದಿ: AIIMS ತಲುಪಿದ ಲಾಲೂ ಆರೋಗ್ಯ ಮತ್ತಷ್ಟು ಗಂಭೀರ, ದೇಹದಲ್ಲಿ ಯಾವುದೇ ಚಲನೆ ಇಲ್ಲ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?