
ನವದೆಹಲಿ (ಜು.6): ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗುರುವಾರ, ದೇಶದ ಯಾವುದೇ ಪ್ರಧಾನಿ ಕೂಡ ಪತ್ನಿ ಇಲ್ಲದೇ ಇಲ್ಲ ಎಂದು ಹೇಳಿದ್ದಾರೆ. ಪ್ರತಿಪಕ್ಷಗಳಿಂದ ಪ್ರಧಾನಮಂತ್ರಿಯ ಫೇಸ್ ಯಾರಾಗಲಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಮಾತನಾಡುವ ವೇಳೆ ಲಾಲು ಪ್ರಸಾದ್ ಯಾದವ್ ಈ ಮಾತು ಹೇಳಿದ್ದಾರೆ. ಈ ವೇಳೆ ರಾಹುಲ್ ಗಾಂಧಿಗೆ ಆದಷ್ಟು ಶೀಘ್ರವಾಗಿ ಮದುವೆಯಾಗುವಂತೆ ಹೇಳಿದ ಸಲಹೆಯನ್ನು ನೆನಪಿಸಿದರು. ಪತ್ನಿ ಇಲ್ಲದೆ ಪ್ರಧಾನಮಂತ್ರಿಯ ಅಧಿಕೃತ ನಿವಾಸದಲ್ಲಿ ಇರುವುದು ತಪ್ಪು ಎಂದು ಹೇಳಿದ್ದರು. ಯಾರೆಲ್ಲಾ ಪ್ರಧಾನಿಯಾಗ್ತಾರೋ ಅವರು ಪತ್ನಿ ಇಲ್ಲದೆ ಇರಬಾರದು. ಪತ್ನಿ ಇಲ್ಲದೆ ಪ್ರಧಾನಮಂತ್ರಿ ಕಚೇರಿಯಲ್ಲಿ ಇರುವುದು ತಪ್ಪು. ಇದನ್ನು ಯಾವುದೇ ಕಾರಣಕ್ಕೂ ಮಾಡಲಾರದು ಎಂದು ಬಿಜಾರ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ. ಆ ಮೂಲಕ ಹಾಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನೂ ಕೆಣಕಿದ್ದಾರೆ.
ಜೂನ್ 23 ರಂದು ಬಿಹಾರದ ಪಾಟ್ನಾದಲ್ಲಿ ವಿರೋಧ ಪಕ್ಷಗಳ ಜಂಟಿ ಸಭೆ ನಡೆದಿತ್ತು. ಆ ಬಳಿಕ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ತಮಾಷೆಯ ಮಾತುಕತೆ ನಡೆಸಿದ್ದರು. ಗಡ್ಡವನ್ನು ಬೋಳಿಸಿಕೊಂಡು, ಆದಷ್ಟು ಬೇಗ ಮದುವೆಯಾಗುವಂತೆ ಅವರು ಸಲಹೆ ನೀಡಿದ್ದರು.
Land For Job Scam: ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಲಾಲೂ ಪ್ರಸಾದ್, ತೇಜಸ್ವಿ, ರಾಬ್ಡಿ ದೇವಿ ಹೆಸರು
ನೀವು ಈಗಾಗಲೇ ಮದುವೆಯಾಗಬೇಕಿತ್ತು. ಈಗಲೂ ಕೂಡ ನಿಮಗೆ ಸಮಯವಿದೆ. ಈಗ ಕೂಡ ಸಮಯ ತಪ್ಪಿಲ್ಲ. ನೀವು ಮದುವೆಗೆ ಸಜ್ಜಾಗಿ ಮದುವೆಯ ಮೆರವಣಿಗೆಗೆ ಬರಲು ನಾವು ಸಿದ್ಧವಾಗಿದ್ದೇವೆ' ಎಂದು ಲಾಲು ಪ್ರಸಾದ್ ಯಾದವ್ ಹೇಳುತ್ತಿದ್ದರೆ ಇಡೀ ಸಭೆ ನಗೆಗಡಲಲ್ಲಿ ತೇಲಿತು. ಇದಕ್ಕೆ ಅಲ್ಲಿಯೇ ಪ್ರತಿಕ್ರಿಯೆ ನೀಡಿದ್ದ ರಾಹುಲ್ ಗಾಂಧಿ ಈಗ ನೀವು ಹೇಳಿದ್ದೀರಿ ಎಂದಾದಲ್ಲಿ, ಅದು ಆಗಿಯೇ ಆಗುತ್ತದೆ ಎಂದಿದ್ದರು.
ನನ್ನ ಮಾತು ಕೇಳಿದ್ರೆ ಮದ್ವೆಯಾಗುತಿತ್ತು, ಕಾಲ ಇನ್ನೂ ಮಿಂಚಿಲ್ಲ; ಲಾಲು ಮಾತಿಗೆ ನಾಚಿ ನೀರಾದ ರಾಹುಲ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ