ಟರ್ಬುಲೆನ್ಸ್‌ನಿಂದ ವಿಮಾನ ಪತನ ತಪ್ಪಿಸಲು ಇಂಡಿಗೋ ಪೈಲೆಟ್ ಮನವಿ ತಿರಸ್ಕರಿಸಿದ ಪಾಕಿಸ್ತಾನ

Published : May 23, 2025, 10:58 AM IST
ಟರ್ಬುಲೆನ್ಸ್‌ನಿಂದ ವಿಮಾನ ಪತನ ತಪ್ಪಿಸಲು ಇಂಡಿಗೋ ಪೈಲೆಟ್ ಮನವಿ ತಿರಸ್ಕರಿಸಿದ ಪಾಕಿಸ್ತಾನ

ಸಾರಾಂಶ

ಟರ್ಬುಲೆನ್ಸ್‌ನಿಂದ ಪ್ರಯಾಣಿಕರು ಚೀರಾಡುತ್ತಿದ್ದಾರೆ, ವಿಮಾನ ನಿಯಂತ್ರಣ ಕಳೆದುಕೊಳ್ಳುತ್ತಿದೆ. ಎಲ್ಲಾ ಪ್ರಯತ್ನಗಳು ವಿಫಲವಾಗುತ್ತಿದೆ. ಕೊನೆಗೆ ಪ್ರಯಾಣಿಕರ ಜೀವ ಉಳಿಸಲು ಇಂಡಿಗೋ ವಿಮಾನ ಪೈಲೆಟ್ ಪಾಕಿಸ್ತಾನಕ್ಕೆ ಒಂದು ಮನವಿ ಮಾಡಿದ್ದರು. ಆದರೆ ಪಾಕಿಸ್ತಾನ ಈ ಮನವಿ ತಿರಸ್ಕರಿಸಿತ್ತು ಅನ್ನೋ ಮಾಹಿತಿ ಬಯಲಾಗಿದೆ. 

ನವದೆಹಲಿ(ಮೇ.23) ಇಂಡಿಗೋ ವಿಮಾನ 6E 2142 ಇತ್ತೀಚೆಗೆ ಟರ್ಬುಲೆನ್ಸ್‌ನಿಂದ ಆತಂತಕ ಸೃಷ್ಟಿಸಿದ ಘಟನೆ ಹಲವ ಉಸಿರು ಬಿಗಿ ಹಿಡಿಯುವಂತೆ ಮಾಡಿತ್ತು. ದೆಹಲಿಯಿಂದ ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋ ವಿಮಾನ ಟರ್ಬುಲೆನ್ಸ್ ಕಾರಣದಿಂದ ನಿಯಂತ್ರಣ ಕಳೆದುಕೊಂಡಿತ್ತು. ಆಲಿ ಕಲ್ಲು ಮಳೆ, ಪ್ರತಿಕೂಲ ವಾತಾವರಣದಿಂದದಿಂದ ಇಂಡಿಗೋ ವಿಮಾನದ ಮೂತಿಗೆ ಹಾನಿಯಾಗಿದೆ. ಇತ್ತ ಇಂಡಿಗೋ ವಿಮಾನ ನಿಯಂತ್ರಣಕ್ಕೆ ಸಿಗದೆ ಗಿರಿಗರ ತಿಗಲು ಆರಂಭಿಸಿದೆ. ಮಕ್ಕಳು, ಮಳೆಯರು ಸೇರಿದಂತೆ ಪ್ರಯಾಣಿಕರು ಚೀರಾಡುತ್ತಿದ್ದಾರೆ. ಹೇಗಾದರೂ ಮಾಡಿ ಕಾಪಾಡಲು ಪ್ರಾರ್ಥಿಸುತ್ತಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದೆ ಅನ್ನೋವಷ್ಟರಲ್ಲಿ ಇಂಡಿಗೋ ವಿಮಾನ ಪೈಲೆಟ್ ,ಪಾಕಿಸ್ತಾನದ ವಾಯುಪ್ರದೇಶ ಬಳಸಲು ಲಾಹೋರ್ ವಿಮಾನ ನಿಲ್ದಾಣಕ್ಕೆ ಮನವಿ ಮಾಡಿದ್ದರು ಅನ್ನೋ ಮಾಹಿತಿ ಬಯಲಾಗಿದೆ. ಆದರೆ ಭಾರತದ ಪೈಲೆಟ್ ಮಾಡಿದ್ದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿತ್ತು ಎಂದು ವರದಿಯಾಗಿದೆ.

ಲಾಹೋರ್ ಕಂಟ್ರೋಲ್ ರೂಂ ಸಂಪರ್ಕಿಸಿದ್ದ ಇಂಡಿಗೈ ಪೈಲೆಟ್
ಮೇ.21ರಂದು ಇಂಡಿಗೋ ಪೈಲೆಟ್ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿ ಪ್ರಯಾಣಿಕರ ಪ್ರಾಣ ಉಳಿಸಿದ್ದರು. ಆದರೆ ಇದಕ್ಕೂ ಹಿಂದೆ ಪೈಲೆಟ್ ಪ್ರಯಾಣಿಕರ ಜೀವ ಉಳಿಸಲು ಇನ್ನಿಲ್ಲದ ಪ್ರಯತ್ನದ ಮಾಹಿತಿ ಬಹಿರಂಗವಾಗಿದೆ. ತೃಣಮೂಲ ಕಾಂಗ್ರೆಸ್ ಸಂಸದ ಸೇರಿದಂತೆ 220 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಶ್ರೀನಗರಕ್ಕೆ ಹೊರಟ ವಿಮಾನ ಆಗಸದಲ್ಲಿನ ಪ್ರತಿಕೂಲ ವಾತಾವಾರಣದಿಂದ ಸಂಕಷ್ಟಕ್ಕೆ ಸಿಲುಕಿತ್ತು. ಅಮೃತಸರ ವಾಯುಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಇಂಡಿಗೋ ವಿಮಾನ ಟರ್ಬುಲೆನ್ಸ್‌ನಿಂದ ಸಂಕಷ್ಟಕ್ಕೆ ಸಿಲುಕಿತ್ತು. ದಿಢೀರ್ ಎದುರಾಗ ಹವಾಮಾನ ವೈಪರಿತ್ಯ ಇಂಡಿಗೋ ವಿಮಾನ ಹಾರಾಟಕ್ಕೆ ತೀವ್ರ ಸಮಸ್ಯೆ ತಂದಿತ್ತು. ಅಮೃತಸರದಿಂದ ಶ್ರೀನಗರ ವಾಯುಮಾರ್ಗದಲ್ಲಿ ಹಾರಾಟ ಅಪಾಯಕ್ಕೆ ಅಹ್ವಾನ ನೀಡಿದಂತೆ ಅನ್ನೋದು ಪೈಲೆಟ್ ಅರಿತುಕೊಂಡಿದ್ದರು.ಹೀಗಾಗಿ ಲಾಹೋರ್ ಕಂಟ್ರೋಲ್ ರೂಂ ಸಂಪರ್ಕಿಸಿದ್ದ ಪೈಲೆಟ್, ಪಾಕಿಸ್ತಾನದ ವಾಯು ಪ್ರದೇಶ ಕೆಲ ನಿಮಿಷಗಳ ಕಾಲ ಬಳಕೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೆ ಲಾಹೋರ್ ಕಂಟ್ರೋಲ್ ರೂಂ ಈ ಮನವಿಯನ್ನು ತಿರಸ್ಕರಿಸಿತ್ತು ಎಂದು ವರದಿಯಾಗಿದೆ.

ಪಾಕಿಸ್ತಾನ ವಾಯು ಪ್ರದೇಶ ಬಳಕೆ ನಿರ್ಬಂಧ
ಪೆಹಲ್ಗಾಂ ದಾಳಿ ಬಳಿಕ ಭಾರತ ಆಪರೇಶನ್ ಸಿಂದೂರ್ ಮೂಲಕ ತಿರುಗೇಟು ನೀಡಿತ್ತು. ಈ ಸಂಘರ್ಷದಲ್ಲಿ ಪಾಕಿಸ್ತಾನ ತನ್ನ ವಾಯು ಪ್ರದೇಶ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಭಾರತದ ಯಾವುದೇ ವಿಮಾನಗಳು ಪಾಕಿಸ್ತಾನ ವಾಯು ಪ್ರದೇಶ ಬಳಕೆ ಮಾಡದಂತೆ ನಿರ್ಬಂಧ ಹೇರಿತ್ತು. ಇತ್ತ ಭಾರತ ಕೂಡ ಪಾಕಿಸ್ತಾನ ಯಾವುದೇ ವಿಮಾನಗಳು ಭಾರತದ ವಾಯು ಪ್ರದೇಶ ಬಳಕೆ ನಿಷೇಧಿಸಿತ್ತು. ಸದ್ಯ ಕದನ ವಿರಾಮ ಘೋಷಣೆಯಾಗಿ ಹಲವು ದಿನಗಳು ಉರುಳಿದೆ. ಆದರೆ ಉದ್ವಿಘ್ನ ಪರಿಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ಇದರ ನಡುವೆ ತುರ್ತು ಸಂದರ್ಭದಲ್ಲಿ ಭಾರತದ ಪೈಲೆಟ್ ಮಾಡಿದ್ದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿತ್ತು.

ಶ್ರೀನಗರಲ್ಲಿ ಸುರಕ್ಷಿತ ಲ್ಯಾಂಡಿಂಗ್
ಇಂಡಿಗೋ ವಿಮಾನ ಪೈಲೆಟ್ ಟರ್ಬುಲೆನ್ಸ್ ನಡುವೆಯೂ ವಿಮಾನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ವಿಮಾನದ ಮೂತಿ ತೀವ್ರವಾಗಿ ಹಾನಿಯಾಗಿತ್ತು. ಹೀಗಾಗಿ ವಿಮಾನ ಲ್ಯಾಂಡಿಂಗ್ ಅತ್ಯಂತ ಸವಾಲಾಗಿತ್ತು. ಶ್ರೀನಗರ ಕಂಟ್ರೋಲ್ ರೂಂಗೆ ಮಾಹಿತಿ ನೀಡಲಾಗಿತ್ತು. ಹೀಗಾಗಿ ಶ್ರೀನಗರ ವಿಮಾನ ನಿಲ್ದಾಣದಲ್ಲಿ ತುರ್ತುಗಾ ವಿಮಾನ ಭೂಸ್ಪರ್ಶಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಅಗ್ನಿಶಾಮಕ ದಳ, ಆ್ಯಂಬುಲೆನ್ಸ್ ಸೇರಿದಂತೆ ಪೂರ್ವ ತಯಾರಿಯೊಂದಿಗೆ ಶ್ರೀನಗರ ವಿಮಾನ ನಿಲ್ದಾಣ ಸಂಪೂರ್ಣವಾಗಿ ಪರಿಸ್ಥಿತಿ ಎದುರಿಸಲು ಸಜ್ಜಾಗಿತ್ತು. ಇತ್ತ ಪೈಲೆಟ್ ಅನುಭವ, ತಾಳ್ಮೆ ಪರಿಸ್ಥಿತಿಯನ್ನು ಎದುರಿಸುವಲ್ಲಿ ಯಶಸ್ವಿಯಾಗಿದೆ.ಪೈಲೆಟ್ ಯಶಸ್ವಿಯಾಗಿ ಇಂಡಿಗೋ ವಿಮಾನವನ್ನು ಶ್ರೀಗನರ ವಿಮಾನ ನಿಲ್ದಣದಲ್ಲಿ ಇಳಿಸಿದ್ದರು. ಎಲ್ಲಾ ಪ್ರಯಾಣಿಕರು ಸುರಕ್ಷಿತಕವಾಗಿ ವಿಮಾನದಿಂದ  ಹೊರಬಂಂದಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ