
ನವದೆಹಲಿ(ಅ.26): ಅಕಾಲಿಕ ಮಳೆ ಮತ್ತು ತಡವಾಗಿ ಮುಂಗಾರು ನಿರ್ಗಮನದ ಪರಿಣಾಮ ಈ ಬಾರಿ ಉತ್ತರ ಭಾರತದ ಹಲವು ರಾಜ್ಯಗಳು ವಿಪರೀತ ಚಳಿಗೆ ತುತ್ತಾಗಲಿವೆ. ಪೆಸಿಫಿಕ್ ಸಾಗರದಲ್ಲಿನ(Pacific Ocean) ಲಾ ನಿನಾ(La Nina) ಬೆಳವಣಿಗೆಯು ಉತ್ತರ ಗೋಳಾರ್ಧದಲ್ಲಿ ವಿಪರೀತ ಚಳಿಗೆ ಕಾರಣವಾಗಲಿದೆ.
ಉಷ್ಣಾಂಶ ಮೈನಸ್ ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆಯಿದೆ. ಇದರಿಂದ ಜನವರಿ ಮತ್ತು ಫೆಬ್ರವರಿಯಲ್ಲಿ ಉತ್ತರ ಪ್ರದೇಶ(Uttar Pradesh), ಪಂಜಾಬ್(Punjab), ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ತೀವ್ರ ಚಳಿಯು ಮೈ ಕೊರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಲಾ ನಿನಾ(La Nina) ಪರಿಣಾಮ ಭಾರತದಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಪ್ರಮಾಣದ ಮಳೆಯಾಗುತ್ತಿದೆ. ಈಗಾಗಲೇ ನಿರ್ಗಮಿಸಬೇಕಿದ್ದ ಮುಂಗಾರು ಮಾರುತಗಳು ಇನ್ನೂ ಮಳೆಯನ್ನು ಸುರಿಸುತ್ತಿವೆ. ಅಲ್ಲದೆ ದೇಶದಲ್ಲಿ ಉದ್ಭವಿಸಲಿರುವ ಚಳಿಗೆ ಲಾ ನಿನಾ ಅಷ್ಟೇ ಅಲ್ಲದೆ ಹವಾಮಾನ ವೈಪರಿತ್ಯವೂ ಕಾರಣವಾಗಿರಬಹುದು.
ಹವಾಮಾನ ವೈಪರಿತ್ಯದಿಂದ ಆರ್ಕ್ಟಿಕ್‌ನ ಕಾರಾ ಸಮುದ್ರದಲ್ಲಿ ಹೆಚ್ಚು ಒತ್ತಡ ನಿರ್ಮಾಣವಾಗಿದ್ದು, ಕಳೆದ ವರ್ಷದಂತೆ ಈ ವರ್ಷವೂ ಈಶಾನ್ಯ ಏಷ್ಯಾದಲ್ಲಿ ತೀವ್ರ ಚಳಿಗೆ ಕಾರಣವಾಗಲಿದೆ ಎಂದು ಹವಾಮಾನ ತಜ್ಞರೊಬ್ಬರು ತಿಳಿಸಿದ್ದಾರೆ.
ಮುಂಗಾರು ಅಧಿಕೃತವಾಗಿ ಅಂತ್ಯ
ದೇಶದ ಕೃಷಿ ಕ್ಷೇತ್ರದ ಜೀವನಾಡಿಯಾಗಿರುವ ಮುಂಗಾರು ಮಾರುತಗಳು ಅಧಿಕೃತವಾಗಿ ಸೋಮವಾರ ಅಂತ್ಯವಾಗಿವೆ. 1975ರ ನಂತರ ಮುಂಗಾರು ಇಷ್ಟುವಿಳಂಬವಾಗಿ ನಿರ್ಗಮಿಸುತ್ತಿರುವುದು ಇದು ಏಳನೇ ಬಾರಿ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿದೆ.
ದೇಶದ ಬಹುತೇಕ ಭಾಗಗಳಲ್ಲಿ ಮಳೆಯ ಚಟುವಟಿಕೆ ಗಮನಾರ್ಹವಾಗಿ ಇಳಿಕೆ ಕಂಡಿದೆ. ಇದೇ ವೇಳೆ, ದೇಶಕ್ಕೆ ಹಿಂಗಾರು ಮಾರುತಗಳ ಪ್ರವೇಶವಾಗಿದೆ. ದಕ್ಷಿಣ ಪರಾರಯಯ ದ್ವೀಪದಲ್ಲಿ ಮಳೆ ಆರಂಭವಾಗಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಜೂನ್‌ನಲ್ಲಿ ದೇಶಕ್ಕೆ ಪ್ರವೇಶಿಸುವ ಮುಂಗಾರು ಮಾರುತಗಳು ಸೆ.17ರಿಂದ ನಿರ್ಗಮಿಸಲು ಆರಂಭಿಸುತ್ತವೆ. ಆದರೆ ಈ ಬಾರಿ ಅ.25ರವರೆಗೂ ಮಾರುತಗಳು ಇದ್ದವು. 1975ರ ಬಳಿಕ ಅ.25 ಅಥವಾ ಆನಂತರ ಮಾರುತ ನಿರ್ಗಮನವಾಗುತ್ತಿರುವುದು ಇದು 7ನೇ ಬಾರಿ. 2010ರಿಂದ 2021ರವರೆಗಿನ ಅವಧಿಯಲ್ಲೇ ಐದು ಬಾರಿ ಈ ರೀತಿ ಆಗಿದೆ ಎಂದು ವಿವರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ