ಕುಂಭಮೇಳಕ್ಕೂ ನಿಜಾಮುದ್ದೀನ್ ಮರ್ಕಝ್‌ಗೂ ಹೋಲಿಕೆ ಸರಿಯಲ್ಲ: ಸಿಎಂ ರಾವತ್!

By Suvarna News  |  First Published Apr 14, 2021, 9:30 AM IST

ದೇಶಾದ್ಯಂತ ಕೊರೋನಾ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆ| ಇದನ್ನು ನಿಯಂತ್ರಿಸಲು ಸರ್ಕಾರ ಹಲವಾರು ನಿಯಮ ಜಾರಿ| ಕುಂಭಮೇಳಕ್ಕೂ ನಿಜಾಮುದ್ದೀನ್ ಮರ್ಕಝ್‌ಗೂ ಹೋಲಿಕೆ ಸರಿಯಲ್ಲ: ಉತ್ತರಾಖಂಡ್ ಸಿಎಂ ರಾವತ್!


ಡೆಹ್ರಾಡೂನ್(ಏ.14): ದೇಶಾದ್ಯಂತ ಕೊರೋನಾ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದನ್ನು ನಿಯಂತ್ರಿಸಲು ಸರ್ಕಾರ ಹಲವಾರು ನಿಯಮಗಳನ್ನು ಜಾರಿಗೊಳಿಸುತ್ತಿದೆ. ಹೀಗಿದ್ದರೂ ಈ ಮಹಾಮಾರಿಗೆ ಕಡಿವಾಣ ಬೀಳುತ್ತಿಲ್ಲ. ಅತ್ತ ಲಸಿಕಾ ಅಭಿಯಾನ ಆರಂಭವಾಗುತ್ತಿದ್ದರೂ ಪ್ರಕರಣಗಳು ಏರಿಕೆಯಾಗುತ್ತಿವೆ. ಇವೆಲ್ಲದರ ನಡುವೆ ನಡೆದ ಹರಿದ್ವಾರದ ಕುಂಭಮೇಳ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅನೇಕ ಮಂದಿ ಕುಂಭಮೇಳ ಹಾಗೂ ಕಳೆದ ವರ್ಷ ನಡೆದ ದೆಹಲಿಯ ನಿಜಾಮುದ್ದೀನ್ ಮರ್ಕಝ್ ಪ್ರಕರಣದದೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಈ ಬಗ್ಗೆ ಸದ್ಯ ಉತ್ತರಾಖಂಡ್ ಸಿಎಂ ತೀರಥ್ ಸಿಂಗ್ ರಾವತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

| Priests perform Ganga aarti at Har Ki Pauri in Haridwar, Uttarakhand. pic.twitter.com/Kc9Yko9niB

— ANI (@ANI)

ಬುಧವಾರ ಹರಿದ್ವಾರದ ಹರ್‌ ಕಿ ಪೌಡಿಯಲ್ಲಿ ಸೇರಿದ ಭಕ್ತಾದಿಗಳು ಗಂಗಾ ನದಿಯಲ್ಲಿ ಪವಿತ್ರ 'ಶಾಹಿ ಸ್ನಾನ' ಮಾಡಿದರು. 13 ಅಖಾಡಗಳ ಸಾಧುಗಳು ಸಹ ಹರ್‌ ಕಿ ಪೌಡಿಯಲ್ಲಿ ಮೂರನೇ ಪವಿತ್ರ ಸ್ನಾನವನ್ನು ಮಾಡಲಿದ್ದಾರೆ. ಸೋಮವಾರ ನಡೆದ ಎರಡನೇ ಶಾಹಿ ಸ್ನಾನದಲ್ಲಿ ಸುಮಾರು 35 ಲಕ್ಷ ಜನರು ಭಾಗವಹಿಸಿದ್ದರು ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಅಸಾಧ್ಯವಾಗಿತ್ತು.

Tap to resize

Latest Videos

undefined

ಡೆಹ್ರಾಡೂನ್: ದೇಶದಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆ, ಸೋಂಕು ನಿಯಂತ್ರಣಕ್ಕೆ ಹಲವು ರಾಜ್ಯಗಳಿಂದ ಕಠಿಣ ಕ್ರಮಗಳು ಹಾಗೂ ಲಸಿಕೆ ಉತ್ಸವದ ನಡುವೆ ಹರಿದ್ವಾರದ 'ಕುಂಭ ಮೇಳ' ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷದ ದೆಹಲಿಯ ನಿಜಾಮುದ್ದೀನ್‌ ಮರ್ಕಜ್‌ ಪ್ರಕರಣದೊಂದಿಗೆ ಹೋಲಿಕೆ ಮಾಡುತ್ತಿರುವ ಬಗ್ಗೆ ಉತ್ತರಾಖಂಡ ಸಿಎಂ ತೀರಥ್‌ ಸಿಂಗ್‌ ರಾವತ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬುಧವಾರ ಹರಿದ್ವಾರದ ಹರ್‌ ಕಿ ಪೌಡಿಯಲ್ಲಿ ಸೇರಿದ ಭಕ್ತಾದಿಗಳು ಗಂಗಾ ನದಿಯಲ್ಲಿ ಪವಿತ್ರ ಪುಣ್ಯಸ್ನಾನ ಮಾಡಿದ್ದಾರೆ. ಇನ್ನು ಕುಂಭಮೇಳದ 2ನೇ ದಿನವಾದ ಸೋಮವಾರವಷ್ಟೇ ನಾಗ ಸಾಧುಗಳು, ಇತರ ಸಾಧು-ಸಂತರು ಹಾಗೂ ಭಕ್ತಾದಿಗಳು ಸೇರಿದಂತೆ 20 ಲಕ್ಷಕ್ಕೂ ಹೆಚ್ಚು ಜನರು ಗಂಗಾ ನದಿಯಲ್ಲಿ ಮಿಂದೆದ್ದು, ಪುಣ್ಯಸ್ನಾನ ಮಾಡಿದ್ದರು. ಈ ವೇಳೆ ಕೊರೋನಾ ನಿಯಂತ್ರಣದ ಮಾರ್ಗಸೂಚಿಗಳಾದ ಮಾಸ್ಕ್‌ ಧರಿಸುವಿಕೆ, ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಕ್ರಮಗಳನ್ನು ಅನುಸರಿಸಲಾಗಿಲ್ಲ ಎಂದು ಆಯೋಜಕರು ಕೈ-ಕೈ ಹಿಸುಕಿಕೊಂಡಿದ್ದರು. 

: Devotees take a holy dip in river Ganga at Har Ki Pauri in Haridwar, Uttarakhand. pic.twitter.com/TUS2IMPcwb

— ANI (@ANI)

ಲಕ್ಷಾಂತರ ಜನರು ಅಂತರವಿಲ್ಲದೆ, ಒಂದೇ ಬಾರಿ ನದಿಯಲ್ಲಿ ಸ್ನಾನ ಮಾಡಿರುವುದು ಸೇರಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿರುವ ಸಮಯದಲ್ಲಿ ಇಂಥಹ ನಡವಳಿಕೆಗಳಿಂದ ಇನ್ನಷ್ಟು ಅಪಾಯಕಾರಿ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಕೆಲವರು ಇದನ್ನು ನಿಜಾಮುದ್ದೀನ್‌ ಮರ್ಕಝ್‌ನಲ್ಲಿ ನಡೆದಿದ್ದ ಧಾರ್ಮಿಕ ಸಭೆಗೆ ಹೋಲಿಸಿದ್ದಾರೆ. ಕಳೆದ ವರ್ಷ ನಿಷೇದಾಜ್ಞೆಯ ನಡುವೆಯೂ ನೂರಾರು ಮಂದಿ ಮರ್ಕಝ್ನಲ್ಲಿ ಸೇರಿದ್ದರು ಹಾಗೂ ತಬ್ಲಿಘಿ ಜಮಾತ್‌ನ ಹಲವು ಸದಸ್ಯರಿಗೆ ಕೊರೋನಾ ವೈರಸ್‌ ತಗುಲಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ತೀರಥ್‌ ಸಿಂಗ್ ರಾವತ್‌, 'ಕುಂಭ ಮೇಳ ಮತ್ತು ನಿಜಾಮುದ್ದೀನ್‌ ಮರ್ಕಜ್‌ ನಡುವೆ ಹೋಲಿಕೆ ಸರಿಯಲ್ಲ. ಮರ್ಕಜ್‌ ಒಳಾಂಗಣದಲ್ಲಿ ಕಾರ್ಯಕ್ರಮ ನಡೆದಿತ್ತು, ಕುಂಭ ಮೇಳ ಹೊರಗಡೆ, ಗಂಗಾ ನದಿ ದಂಡೆಯಲ್ಲಿ ನಡೆಯುತ್ತಿದೆ' ಎಂದಿದ್ದಾರೆ.
 

click me!