ಯುವ ಉದ್ಯಮಿಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲೇ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಕೂಡ ಪ್ರಯಾಣಿಸಿದ್ದರು. ವಿಮಾನದಲ್ಲಿ ಸಚಿವರ ಮಾತನಾಡಿಸಲು ನಡೆಸಿದ ಎಲ್ಲಾ ಪ್ರಯತ್ನ ವಿಫಲವಾಗಿತ್ತು. ಬೇರೆ ದಾರಿ ಕಾಣದ ಉದ್ಯಮಿ ಟಿಶ್ಯೂ ಪೇಪರ್ ಬಳಸಿ ಮನವಿಯೊಂದನ್ನು ಬರೆದು ಸಚಿವರಿಗೆ ತಲುಪಿದ್ದಾನೆ. ಅಚ್ಚರಿ ಎಂಬಂತೆ ಕೆಲವೇ ದಿನಗಳಲ್ಲಿ ಸಚಿವರಿಂದ ಮೀಟಿಂಗ್‌ಗೆ ಕರೆ ಬಂದಿದೆ. ಇದೀಗ ರೈಲ್ವೇ ಇಲಾಖೆ ಹಾಗೂ ಉದ್ಯಮಿ ಜಂಟಿಯಾಗಿ ಮಹತ್ವದ ಯೋಜನೆ ಆರಂಭಿಸಲು ರೆಡಿಯಾಗಿದ್ದಾರೆ.
ಕೋಲ್ಕತಾ(ಫೆ.08) ಪ್ರಯಾಣದ ವೇಳೆ ಅಥಾವ ಇನ್ಯಾವುದೋ ಸ್ಥಳದಲ್ಲಿ ಸೆಲೆಬ್ರೆಟಿಗಳು, ನಾಯಕರು ಸಿಕ್ಕರೆ ಸೆಲ್ಫಿ ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದು ಬಹುತೇಕರ ಹವ್ಯಾಸ. ಆದರೆ ಉದ್ಯಮಿಗಳು, ಸಮಾಜ ಸುಧಾಕರು, ಸಾಮಾಜಿಕ ಸೇವೆ ನೀಡುತ್ತಿರುವ ವ್ಯಕ್ತಿಗಳು ಹಾಗಲ್ಲ. ಪ್ರತಿ ನಿಮಿಷ, ಪ್ರತಿ ಸೆಕೆಂಡ್ ಅತ್ಯಮ್ಯೂಲ ಎಂದು ಭಾವಿಸುತ್ತಾರೆ. ಹೀಗೆ ನವ ಉದ್ಯಮಿಯೊಬ್ಬ ದೆಹಲಿಯಿಂದ ಕೋಲ್ಕತಾಗೆ ತೆರಳು ವಿಮಾನ ಹತ್ತಿದ್ದಾನೆ. ಅದೇ ವಿಮಾನದಲ್ಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಕೂಡ ಕೋಲ್ಕತಾಗೆ ಪ್ರಯಾಣಿಸಿದ್ದಾರೆ. ಭಾರಿ ಭದ್ರತೆಗಳ ಕಾರಣ ಅಶ್ವಿನಿ ವೈಷ್ಣವ್ ಮಾತನಾಡಿಸುವ ಯಾವುದೇ ಪ್ರಯತ್ನ ಕೈಗೂಡಲಿಲ್ಲ. ಕೊನೆಗೆ ವಿಮಾನದಲ್ಲಿ ಸಿಕ್ಕ ಟಿಶ್ಯೂ ಪೇಪರ್‌ನಲ್ಲಿ ಮನವಿಯೊಂದನ್ನು ಬರೆದು ಹಲವು ಪ್ರಯತ್ನಗಳ ಬಳಿಕ ಸಚಿವರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾನೆ. ಇದರ ಪರಿಣಾಮ, ಕೆಲವೇ ದಿನಗಳಲ್ಲಿ ಈ ಉದ್ಯಮಿಗೆ ರೈಲ್ವೇ ಸಚಿವಾಲಯದಿಂದ ಕರೆ ಬಂದಿದೆ. ರೈಲ್ವೇ ಅಧಿಕಾರಿಗಳ ಜೊತೆ ಸಭೆ ಕೂಡ ನಡೆದಿದೆ. ಇದೀಗ ಜಂಟಿಯಾಗಿ ಮಹತ್ವದ ಯೋಜನೆ ಆರಂಭಗೊಳ್ಳುತ್ತಿದೆ.
ಯುವ ಉದ್ಯಮಿ ಅಕ್ಷಯ್ ಸತ್ನಾಲಿವಾಲ ಫೆಬ್ರವರಿ 2ರಂದು ದೆಹಲಿಯಿಂದ ಕೋಲ್ಕಾತಗೆ ವಿಮಾನ ಮೂಲಕ ಪ್ರಯಾಣಿಸಿದ್ದಾನೆ. ಅಕ್ಷಯ್ ಪಶ್ಚಿಮ ಬಂಗಾಳ ಮೂಲದ ಈ ಉದ್ಯಮಿ ಸಾವಯವ ರಸಗೊಬ್ಬರ ಕಾರ್ಖನೆ ಮಾಲೀಕ. ಇದು ಘನ ತಾಜ್ಯಗಳ ನಿರ್ವಹಣೆಯಿಂದ ರಸಗೊಬ್ಬರ ತಯಾರಿಸುತ್ತಿದೆ. ರೈಲ್ವೇ ಇಲಾಖೆ ಜೊತೆ ಮಹತ್ವದ ಒಪ್ಪಂದ ಮಾಡಿಕೊಳ್ಳಲು ಈ ಅಕ್ಷಯ್ ಸತ್ನಾಲಿವಾಲ ಬಯಸಿದ್ದಾನೆ. ಇದೇ ವಿಮಾನದಲ್ಲಿ ಅಶ್ವಿನಿ ವೈಷ್ಣವ್ ಕೂಡ ದೆಹಲಿಯಿಂದ ಕೋಲ್ಕತಾಗೆ ಪ್ರಯಾಣ ಮಾಡಿದ್ದಾರೆ.
2026ರಲ್ಲಿ ಭಾರತದ ಮೊದಲ ಬುಲೆಟ್ ಟ್ರೇನ್ ಕಾರ್ಯಾರಂಭ, ರೈಲ್ವೆ ಸಚಿವರ ಮಾಹಿತಿ
ಅಶ್ವಿನಿ ವೈಷ್ಣವ್ ಮಾತನಾಡಿಸಲು ಹಲವು ಪ್ರಯತ್ನ ಮಾಡಿದ್ದಾನೆ. ಆದರೆ ಭದ್ರತೆ, ಪ್ರೊಟೋಕಾಲ್ ಸೇರಿದಂತೆ ಹಲವು ಕಾರಣಗಳಿಂದ ಸಚಿವರ ಮಾತನಾಡಿಸಲು ಸಾಧ್ಯವಾಗಲಿಲ್ಲ. ಪ್ರಧಾನಿ ಮೋದಿಯ ಸ್ವಚ್ಚ ಭಾರತಕ್ಕೆ ಪೂರಕವಾಗಿ, ತ್ಯಾಜ್ಯಗಳ ಸಮಸ್ಯೆಗೆ ಪರಿಹಾರವಾಗಿ ಹಾಗೂ ಉದ್ಯಮ ವಿಸ್ತರಣೆ ದೃಷ್ಟಿಯಿಂದ ಅಕ್ಷಯ್ ಒಪ್ಪಂದ ಮಾಡಲು ತುದಿಗಾಲಲ್ಲಿ ನಿಂತಿದ್ದಾನೆ. ಆದರೆ ಮಾತನಾಡಿಸುವುದು ಅಸಾಧ್ಯ ಅನ್ನೋದು ಅರಿವಾಗಿತ್ತು. ಹೀಗಾಗಿ ಗಗನಸಖಿ ಬಳಿ ಟಿಶ್ಯೂ ಪೇಪರ್ ಕೇಳಿದ್ದಾರೆ.
undefined
ಟಿಶ್ಯೂ ಪೇಪರ್ ಬಳಸಿ ಮನವಿಯೊಂದನ್ನು ಬರೆದಿದ್ದಾನೆ. ಕೈಯಲ್ಲಿ ಮನವಿಯನ್ನು ಬರೆದಿದ್ದಾನೆ. ಒಂದು ಹಂತದಲ್ಲಿ ತನ್ನ ಪೆನ್ನು ಕೈಕೊಟ್ಟಿತು. ಬಳಿಕ ಬೇರೊಂದು ಪೆನ್ನು ಬಳಸಿ ಮನವಿ ಪತ್ರ ಪೂರ್ಣಗೊಳಿಸಿದ್ದಾನೆ. ಬಳಿಕ ಸಿಬ್ಬಂದಿಗಳಿಗೆ ಮನವಿ ಮಾಡಿ ಈ ಮನವಿಯನ್ನು ಅಶ್ವಿನಿ ವೈಷ್ಣವ್‌ಗೆ ನೀಡಲು ಸೂಚಿಸಿದ್ದಾನೆ. ದಯವಿಟ್ಟು ಈ ಮನವಿ ತಲುಪಿಸಿ, ಇದರಲ್ಲಿ ಯಾವುದೇ ಆತಂಕದ ವಿಚಾರವಿಲ್ಲ, ಕೇವಲ ಘನ ತಾಜ್ಯ ನಿರ್ವಹಣೆ ಕುರಿತ ಮನವಿಯಾಗಿದೆ. ಭದ್ರತೆ ಕಾರಣದಿಂದ ಮಾತನಾಡಿಸಲು ಸಾಧ್ಯವಿಲ್ಲ. ಈ ಮನವಿಯನ್ನು ಸಚಿವರು ಓದಿದರೆ ಸಾಕು, ಬಳಿಕ ನಿರ್ಲಕ್ಷ್ಯಿಸಿದ್ದರೂ ಪರವಾಗಿಲ್ಲ ಎಂದು ಸಿಬ್ಬಂದಿಗೆ ಅಕ್ಷಯ್ ಮನವಿ ಮಾಡಿದ್ದಾನೆ.
ಸರ್, ನೀವು ಅನುಮತಿ ನೀಡಿದರೆ ರೈಲ್ವೇ ಸಚಿವಾಲಯ ಈ ರಸಗೊಬ್ಬರ, ಘನ ತಾಜ್ಯ ನಿರ್ವಹಣೆಯ ಕೊಂಡಿಯಾಗೆ ಹೇಗೆ ಕಾರ್ಯನಿರ್ವಹಿಸಲು ಸಾಧ್ಯ? ಪ್ರಧಾನಿ ಮೋದಿ ಸ್ವಚ್ಚ ಭಾರತಕ್ಕೆ ಪೂರಕವಾಗಿ, ರೈಲ್ವೇ ಇಲಾಖೆಯ ಘನ ತಾಜ್ಯ ನಿರ್ವಹಣೆ ಮಾಡುವುದು ಹೇಗೆ ಅನ್ನೋದನ್ನು ವಿವರವಾಗಿ ತಿಳಿಸುತ್ತೇನೆ ಎಂದು ತನ್ನ ಕಂಪನಿ ಕುರಿತು ವಿವರಗಳನ್ನು ಈ ಟಿಶ್ಯೂ ಪೇಪರ್ ನಲ್ಲಿ ಬರೆದಿದ್ದಾನೆ.
ದಿನಕ್ಕೆ 2 ಲಕ್ಷ ಲೀಟರ್ ಡೀಸೆಲ್ ಉಳಿಸಲು ಭಾರತೀಯ ರೈಲ್ವೆ ಮಾಸ್ಟರ್ ಪ್ಲ್ಯಾನ್!
ಈ ಮನವಿ ಓದಿದ ಅಶ್ವಿನಿ ವೈಷ್ಣವ್, ರೈಲ್ವೇ ಸಚಿವಾಲಯಕ್ಕೆ ಸೂಚನೆ ನೀಡಿದ್ದಾರೆ. ವಿಮಾನ ಕೋಲ್ಕಾತದಲ್ಲಿ ಲ್ಯಾಂಡ್ ಆಗಿದೆ. ಆದರೆ ಕೆಲವೇ ದಿನದಲ್ಲಿ ಅಕ್ಷಯ್‌ಗೆ ರೈಲ್ವೇ ಸಚಿವಾಲಯದಿಂದ ಕರೆಯೊಂದು ಬಂದಿದೆ. ಪೂರ್ವ ರೈಲ್ವೆ ಪ್ರಧಾನ ಕಛೇರಿಗೆ ಆಗಮಿಸಿ ಈ ಕುರಿತು ವಿವರಣೆ ನೀಡುವಂತೆ ಕೋರಲಾಗಿದೆ. ಹಲವು ರೈಲ್ವೇ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಘನ ತ್ಯಾಜ್ಯವನ್ನು ಹಲವು ರಾಜ್ಯಗಳಲ್ಲಿರವು ಕೆಲ ಕಂಪನಿಗಳು ಖರೀದಿಸುತ್ತದೆ. ಇದರಿಂದ ರಸಗೊಬ್ಬರ ಸೇರದಂತೆ ಇತರ ಉತ್ಪನ್ನಗಳನ್ನು ಮಾಡಲಾಗುತ್ತಿದೆ. ರೈಲ್ವೇ ಸಚಿವಾಲಯ ಈ ಯೋಜನೆಯಲ್ಲಿ ಕೈಜೋಡಿಸಿದರೆ ಸಾಗಾಣೆ ಸೇರಿದಂತೆ ಹಲವು ವಿಚಾರಗಳು ಸುಲಭವಾಗಲಿದೆ. ಈ ಕುರಿತು ಸಂಪೂರ್ಣ ವಿವರನ್ನು ಅಕ್ಷಯ್ ನೀಡಿದ್ದಾನೆ.
ಸಭೆ ಬಳಿಕ ರೈಲ್ವೇ ಅಧಿಕಾರಿಗಳು ಪ್ರಪೋಸಲ್ ಸಲ್ಲಿಸಲು ಅಕ್ಷಯ್‌ಗೆ ಸೂಚಿಸಿದ್ದಾರೆ. ಇದೀಗ ರೈಲ್ವೇ ಇಲಾಖೆ ಹಾಗೂ ಅಕ್ಷಯ್ ಹಾಗೂ ಆತನ ಉದ್ಯಮ ಮಹತ್ವದ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ.