ಅ.31ರ ರಾತ್ರಿ ಅಪರೂಪದ ಬ್ಲೂ ಮೂನ್‌: ತಿಂಗಳಲ್ಲಿ 2 ಹುಣ್ಣಿಮೆ

By Suvarna NewsFirst Published Oct 31, 2020, 7:33 AM IST
Highlights

ಖಗೌಳ ಕೌತುಕಕ್ಕೆ ಸಾಕ್ಷಿಯಾಗಲಿದೆ ಅಕ್ಬೋಬರ್ 31ರ ರಾತ್ರಿ. ಒಂದೇ ತಿಂಗಳಿನಲ್ಲಿ 2 ಬಾರಿ ಹುಣ್ಣಿಮೆ ಚಂದ್ರ ಗೋಚರ. ಸುಮಾರು 2.5 ವರ್ಷಕ್ಕೊಮ್ಮೆ ಜರುಗುವ ಅಪರೂಪದ ವಿದ್ಯಾಮಾನ.

ನವದೆಹಲಿ (ಅ.31): ಖಗೋಳ ಕೌತುಕಗಳಲ್ಲಿ ಒಂದಾದ ಬ್ಲ್ಯೂಮೂನ್‌ ಅ.31ರಂದು ಸಂಭವಿಸಲಿದೆ. ಅಂದರೆ ಇದು ಈ ತಿಂಗಳಲ್ಲಿ ಬರುವ ಎರಡನೇ ಹುಣ್ಣಿಮೆ. ಮೊದಲ ಹುಣ್ಣಿಮೆ ಅ.1ರಂದು ಸಂಭವಿಸಿತ್ತು.

ಗ್ರೆಗೋರಿಯನ್‌ ಕ್ಯಾಲೆಂಡರ್‌ ಪ್ರಕಾರ ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆ (ಲೂನಾರ್‌ ಮಂಥ್‌) ನಡುವಿನ ಅವಧಿ 29 ದಿನ, 44 ನಿಮಿಷ 38 ಸೆಕೆಂಡ್‌ ಆಗಿರುತ್ತದೆ. ಇದರಲ್ಲಿ 30 ದಿನ ತುಂಬಲು ಬಾಕಿ ಉಳಿದ ಸಮಯ ಸೇರಿ ಸೇರಿ ಕೊನೆಗೊಂದು ತಿಂಗಳಲ್ಲಿ ಎರಡು ಹುಣ್ಣಿಮೆ ಸಂಭವಿಸುತ್ತದೆ. ಇದನ್ನೇ ಬ್ಲೂಮೂನ್‌ ಎನ್ನಲಾಗುತ್ತದೆ. ಅ.31ರಂದು ಸಂಭವಿಸುತ್ತಿರುವುದು ಇದೇ ಬ್ಲೂಮೂನ್‌.

ಕೊರೋನಾಗಿಂತ ಭೀಕರತೆ ಸೃಷ್ಟುಸುತ್ತಾ ಇದು?

ಈ ಹಿಂದೆ 2018ರಲ್ಲಿ 2 ಬ್ಲೂಮೂನ್‌ ಸಂಭವಿಸಿತ್ತು. ಒಂದು ಜ.31 ಮತ್ತೊಂದು ಮಾ.31ರಂದು. ಮುಂದಿನ ಬ್ಲೂಮೂನ್‌ 2023ರ ಆ.31ರಂದು ಸಂಭವಿಸಲಿದೆ.

31 ದಿನಗಳು ಇರುವ ತಿಂಗಳಲ್ಲಿ ಇಂಥ ಬ್ಲೂಮೂನ್‌ ಸಾಮಾನ್ಯ. ಆದರೆ 30 ದಿನಗಳು ಇರುವ ತಿಂಗಳಲ್ಲಿ ಬಲು ಅಪರೂಪ. ಈ ಹಿಂದೆ 2007ರ ಜೂ.30ರಂದು ನಡೆದಿದ್ದ ಇಂಥ ಘಟನೆ ಮತ್ತೆ ನಡೆಯುವುದು 2050ರ ಸೆ.30ಕ್ಕೆ.

 

click me!