
ಒಮ್ಮೊಮ್ಮೆ ಇದು ಆಗೋಕೆ ಹೇಗೆ ಸಾಧ್ಯ ಎಂದು ಯೋಚನೆ ಮಾಡುತ್ತಿರುವಾಗಲೇ ಅಂಥದ್ದೊಂದು ಘಟನೆ ನಡೆದುಹೋಗಿರುತ್ತದೆ. ಕೆಲ ವರ್ಷಗಳ ಹಿಂದೆ ನಾರ್ವೆಯಲ್ಲಿ ಒಂದು ಘಟನೆ ನಡೆದಿತ್ತು. ವ್ಯಕ್ತಿಯೊಬ್ಬ ಐಕಿಯಾ ಸ್ಟೋರ್‌ನಿಂದ ಒಂದು ಚೇರ್ ಖರೀದಿ ಮಾಡಿದ್ದ. ಆದರೆ, ಚೇರ್ ಮೇಲೆ ಕುಳಿತುಕೊಂಡಾಗಲೇ ಆತನಿಗೆ ಗೊತ್ತಾಗಿದ್ದು ಇದು ಪುರುಷರು ಕೂರುವ ಖುರ್ಚಿಯಲ್ಲ ಅನ್ನೋದು.
ಆ ಚೇರ್‌ನಲ್ಲಿ ಕೂತುಕೊಂಡಾಗಲೇ ವ್ಯಕ್ಯಿಯ ವೃಷಣ ಬೀಜ, ಚೇರ್‌ನಲ್ಲಿದ್ದ ಹೋಲ್‌ಗೆ ಸಿಕ್ಕಿಹಾಕಿಕೊಂಡಿತ್ತು. ಈ ಸುದ್ದಿ ಭಾರೀ ಮಟ್ಟದಲ್ಲಿ ಚರ್ಚೆಯಾಗಿತ್ತು. ಈಗ ಭಾರತದಲ್ಲೂ ಅಂಥದ್ದೇ ಒಂದು ಘಟನೆ ನಡೆದಿದೆ.
ಒಂದು ವಾರದ ಹಿಂದೆ ನ್ಯೂಸ್ ಚಾನೆಲ್‌ವೊಂದರ ಇನ್ಸ್‌ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಳ್ಳಲಾಗಿರುವ ವಿಡಿಯೋವೊಂದರಲ್ಲಿ ಹುಡುಗನೊಬ್ಬ ನರಳಾಟ ಮಾಡುತ್ತಿರುವುದು ಕಂಡಿದೆ. ಇದರಲ್ಲಿ ಆಗಿದ್ದೇನೆಂದರೆ, ಅಂದಾಜು 6-7 ಕ್ಲಾಸ್‌ನ ಹುಡುಗನೊಬ್ಬ ಕೆಂಪು ಬಣ್ಣ ಸಣ್ಣ ಸ್ಟೂಲ್‌ನಲ್ಲಿ ಕುಳಿತುಕೊಂಡು ನರಳಾಡುತ್ತಿರುವುದು ಕಂಡು ಬಂದಿದೆ.
ಸ್ಟೂಲ್‌ನ ಮೇಲ್ಭಾಗದಲ್ಲಿ ತೂತುಗಳಿದ್ದು, ಅದರಲ್ಲಿ ಕುಳಿತುಕೊಂಡಾಗ ಹುಡುಗ ವೃಷಣ ಬೀಜ ಅದರಲ್ಲಿ ಸಿಕ್ಕಿಹಾಕಿಕೊಂಡಿದೆ. ಏನೆಲ್ಲಾ ಪ್ರಯತ್ನ ಮಾಡಿದರೂ ಅದನ್ನು ತೆಗೆಯಲು ಸಾಧ್ಯವಾಗಿಲ್ಲ. ಇದೆಲ್ಲವನ್ನೂ ಮನೆಯವರೇ ಯಾರೋ ಒಬ್ಬರು ವಿಡಿಯೋ ಮಾಡಿದ್ದು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಅಂಗಾತ ಮಲಗಿ ಸ್ಟೂಲ್ ಅನ್ನು ತೆಗೆಯುವ ಪ್ರಯತ್ನ ಮಾಡಿದ್ದರೂ ಅದು ಸಾಧ್ಯವಾಗಿಲ್ಲ. ಹುಡುಗನ ನರಳಾಟದ ಕೆಲವೇ ಕೆಲವು ಸೆಕೆಂಡ್‌ನ ವಿಡಿಯೋ ಇದಾಗಿದೆ. ವಿಡಿಯೋದಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಕೊನೆಗೆ ಮನೆಯವರ ಪ್ರಯತ್ನ ಸಾಕಾಗದೆ, ಹುಡುಗನ್ನು ಅಪ್ಪ ಆಸ್ಪತ್ರೆಗೆ ಕರೆದೊಯ್ದಿದ್ದ ಎನ್ನಲಾಗಿದೆ. ಇನ್ನು ಈ ವಿಡಿಯೋ ಯಾವ ಊರಿನದ್ದು. ಹುಡುಗನ ಹೆಸರೇನು ಎನ್ನುವ ಮಾಹಿತಿಗಳು ಲಭ್ಯವಾಗಿಲ್ಲ.
ತಮಾಷೆಗೆಂದು ಮನೆಯಲ್ಲಿ ಮಾಡುವ ಕೆಲವೊಂದು ಸರ್ಕಸ್‌ಗಳು ಪ್ರಾಣಕ್ಕೆ ಸಂಚಕಾರವೂ ತರಬಹುದು. ಹಾಗಾಗಿ ಮನೆಯಲ್ಲಿ ವಸ್ತುಗಳನ್ನು ಬಳಕೆ ಮಾಡುವ ಅದರಿಂದ ಆಗಬಹುದಾದ ಆಗುಹೋಗುಗಳ ಬಗ್ಗೆಯೂ ಗಮನ ನೀಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ