ಖರ್ಗೆ ಜಾಗವನ್ನು ಜಾಣ ಜೈರಾಂ ರಮೇಶ್‌ ತುಂಬಲಿ ಎಂದ ಸ್ಪೀಕರ್‌ ವಿರುದ್ಧ ಕಿಡಿಕಿಡಿಯಾದ ಖರ್ಗೆ

By Kannadaprabha News  |  First Published Jul 3, 2024, 3:27 PM IST

ನಿನ್ನೆಯ ರಾಜ್ಯಸಭೆ ಕಲಾಪವೂ ಸಭಾಪತಿ ಜಗದೀಪ್‌ ಧನಕರ್‌ ಮತ್ತು ಎಐಸಿಸಿ ಅಧ್ಯಕ್ಷರೂ ಆಗಿರುವ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಆಗಿರುವ ಮಲ್ಲಿಕಾರ್ಜುನ ಖರ್ಗೆ ನಡುವೆ ತೀವ್ರ ವಾಕ್ಸಮರಕ್ಕೆ ಸಾಕ್ಷಿಯಾಯಿತು


ನವದೆಹಲಿ: ನಿನ್ನೆಯ ರಾಜ್ಯಸಭೆ ಕಲಾಪವೂ ಸಭಾಪತಿ ಜಗದೀಪ್‌ ಧನಕರ್‌ ಮತ್ತು ಎಐಸಿಸಿ ಅಧ್ಯಕ್ಷರೂ ಆಗಿರುವ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಆಗಿರುವ ಮಲ್ಲಿಕಾರ್ಜುನ ಖರ್ಗೆ ನಡುವೆ ತೀವ್ರ ವಾಕ್ಸಮರಕ್ಕೆ ಸಾಕ್ಷಿಯಾಯಿತು. ಕಾಂಗ್ರೆಸ್‌ ಸಂಸದರು ಶಿಸ್ತಿನಿಂದ ವರ್ತಿಸುವಂತಾಗಲು ಜೈರಾಂ ರಮೇಶ್‌ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಜಾಗವನ್ನು ತುಂಬಬೇಕು ಎಂದು ಸಭಾಪತಿ ಧನಕರ್ ವ್ಯಂಗ್ಯವಾಡಿದ್ದು ಇಬ್ಬರ ಜಟಾಪಟಿಗೆ ಕಾರಣವಾಯಿತು.

ರಾಷ್ಟ್ರಪತಿ ಭಾಷಣದ ಬಗ್ಗೆ ಕಾಂಗ್ರೆಸ್‌ನ ಪ್ರಮೋದ್‌ ತಿವಾರಿ ಮಾತನಾಡುವಾಗ, ಖಚಿತಪಡದ ವಿಷಯಗಳ ಬಗ್ಗೆ ಪ್ರಸ್ತಾಪಿಸಬೇಡಿ ಎಂದು ಸಭಾಪತಿ ಧನಕರ್‌ ಹೇಳಿದರು. ಆಗ ಜೈರಾಂ ರಮೇಶ್‌ ಅವರು ಪರೀಶಿಲಿಸಲಾಗುವುದು ಎಂದರು. ಆಗ ಸಭಾಪತಿ ಧನಕರ್‌ ಅವರು, ನೀವು ಜಾಣ, ಪ್ರತಿಭಾವಂತ ಹಾಗೂ ದೈವದತ್ತ ವ್ಯಕ್ತಿ. ಖರ್ಗೆ ಅವರ ಜಾಗವನ್ನು ತಕ್ಷಣವೇ ನೀವು ತುಂಬಬೇಕು. ಏಕೆಂದರೆ ಅವರು ಮಾಡುವ ಕೆಲಸ ನೀವು ಮಾಡುತ್ತಿದ್ದೀರಿ ಎಂದರು.

Latest Videos

undefined

ದ್ವಿವೇದಿ, ತ್ರಿವೇದಿ, ಚತುರ್ವೇದಿಯಿಂದ ಕನ್ಪ್ಯೂಸ್ ಆದೆ ಎಂದ ಖರ್ಗೆ: ಧನಕರ್ ಉತ್ತರಕ್ಕೆ ನಗೆಗಡಲಲ್ಲಿ ತೇಲಿದ ಸದನ

ಇದರಿಂದ  ಸಿಟ್ಟಿಗೆದ್ದ ಖರ್ಗೆ, ನೀವು ವರ್ಣ ವ್ಯವಸ್ಥೆ ಜಾರಿಗೆ ತರಬೇಡಿ. ಅದೇ ಕಾರಣಕ್ಕೆ ನೀವು ಜೈರಾಂ ರಮೇಶ್‌ ಅವರನ್ನು ತುಂಬಾ ಬುದ್ಧಿವಂತ. ಎಂದು ನನ್ನನ್ನು ದಡ್ಡ ಎಂದು ಹೇಳುತ್ತಿದ್ದೀರಿ ಎಂದರು ಇದರಿಂದ ಆಕ್ರೋಶಗೊಂಡ ಜಗದೀಪ್ ಧನಕರ್, ಮಲ್ಲಿಕಾರ್ಜುನ್ ಖರ್ಗೆ ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ಸಂಸತ್‌ನಲ್ಲಿ ಎಂದೂ ಇಲ್ಲಿಯವರೆಗೆ ಸಭಾಪತಿ ಪೀಠ ಇಷ್ಟೊಂದು ಅವಮಾನಕ್ಕೆ ಗುರಿ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಕಾಂಗ್ರೆಸ್ಸಿಗರಿಗೆ ಸರಳ ಟೆಕ್ನಾಲಾಜಿಯ ಬಗ್ಗೆಯೂ ಗೊತ್ತಿಲ್ಲವೇ? ಸದನದ ಮೈಕ್ ಆಟೋಮೇಟಿಕ್: ರಾಜ್ಯಸಭಾಧ್ಯಕ್ಷ

click me!