
ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಎರ್ ಇಂಡಿಯಾ AI171 ವಿಮಾನ ಅಪಘಾತಕ್ಕೀಡಾದ ಘಟನೆ ಕುರಿತು ಬಿಡುಗಡೆಯಾದ ಪ್ರಾಥಮಿಕ ವರದಿ, ಅವಘಡದ 98 ಸೆಕೆಂಡುಗಳ ದುರಂತ ಕ್ಷಣಗಳನ್ನು ವಿವರಿಸಿದೆ. ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳ ಬಳಿಕ ಎಂಜಿನ್ ಸ್ಥಗಿತಗೊಂಡು ನೆಲಕ್ಕೆ ಬಿದ್ದ ಪರಿಣಾಮ ವೈದ್ಯಕೀಯ ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿಗಳು ಸೇರಿ ಒಟ್ಟು 260 ಮಂದಿ ಮೃತಪಟ್ಟಿದ್ದರು. ಒಟ್ಟು 242 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಅದಾಗಿತ್ತು ಮತ್ತು ಓರ್ವ ಪ್ರಯಾಣಿಕ ಮಾತ್ರ ಜೀವಂತವಾಗಿ ಬದುಕುಳಿದ.
ಅಪಘಾತದ ದಿನದ ವಿವರಗಳು
ಜೂನ್ 12 ರಂದು, ಅಹಮದಾಬಾದ್‌ನಿಂದ ಲಂಡನ್‌ಗೆ ಹಾರಲು ಹೊರಟಿದ್ದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ AI171, ಮಧ್ಯಾಹ್ನ 1:38ಕ್ಕೆ ಟೇಕ್ ಆಫ್‌ಗೆ ಕ್ಲಿಯರೆನ್ಸ್ ಪಡೆದು ಹಾರಿತು. ಆದರೆ, ಟೇಕ್ ಆಫ್ ಆದ 32 ಸೆಕೆಂಡುಗಳ ನಂತರವೇ ವಿಮಾನ ಅಪಘಾತಕ್ಕೀಡಾಯಿತು. ಟೇಕ್ ಆಫ್ ರನ್‌ದ ಸಂದರ್ಭದಲ್ಲಿ ವಿಮಾನವು ಪ್ರಥಮವಾಗಿ ಗಂಟೆಗೆ 284 ಕಿ.ಮೀ ವೇಗವನ್ನು ಹಾರಿತು. ಮುಂದಿನ ಎರಡು ಸೆಕೆಂಡುಗಳಲ್ಲಿ ಅದು 287 ಕಿ.ಮೀ ವೇಗ ತಲುಪಿತು ಮತ್ತು ವಿಮಾನದ ಚಕ್ರಗಳು ನೆಲದಿಂದ ಮೇಲಕ್ಕೆ ಎತ್ತಲಾಯಿತು.
ಅನಂತರದ ಮೂರು ಸೆಕೆಂಡುಗಳಲ್ಲಿ ವಿಮಾನವು 334 ಕಿ.ಮೀ ವೇಗ ತಲುಪಿತು. ಈ ವೇಳೆ ಎರಡೂ ಎಂಜಿನ್‌ಗಳು ಸ್ಥಗಿತಗೊಂಡು, ವಿಮಾನವು ಎತ್ತರಕ್ಕೆ ಹಾರುವ ಶಕ್ತಿಯನ್ನು ಕಳೆದುಕೊಂಡಿತು. ತುರ್ತು ಪರಿಸ್ಥಿತಿಯಲ್ಲಿ ರಾಮ್ ಏರ್ ಟರ್ಬೈನ್ (RAT) ಕಾರ್ಯನಿರ್ವಹಿಸಲು ನಿಯೋಜಿಸಲಾಯಿತು. ಆದರೆ ತಜ್ಞರ ಪ್ರಕಾರ, ಕಡಿಮೆ ಎತ್ತರದಲ್ಲಿ RAT ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಧ್ಯತೆ ಕಡಿಮೆ.
ಟೇಕ್ ಆಫ್‌ನಿಂದ ಪತನವರೆಗೆ ನಡೆದ ಘಟನೆಗಳ ವೇಳಾಪಟ್ಟಿ
ಬೆಳಿಗ್ಗೆ 11:17 – ವಿಮಾನ ದೆಹಲಿಯಿಂದ ಅಹಮದಾಬಾದ್‌ಗೆ ಬಂದಿಳಿಯಿತು.
ಬೆಳಿಗ್ಗೆ 11:55 – ವಿಮಾನ ಸಿಬ್ಬಂದಿಗೆ ಬ್ರಿಥ್ ಅಲೈಸರ್ ಪರೀಕ್ಷೆ ನಡೆಸಲಾಯಿತು. ವಿಮಾನ ಹಾರಾಟಕ್ಕೆ ಯೋಗ್ಯವೆಂದು ಘೋಷಿಸಲಾಯಿತು.
ಮಧ್ಯಾಹ್ನ 12:10 – ತಾಂತ್ರಿಕ ಪರಿಶೀಲನೆಯ ಬಳಿಕ ವಿಮಾನಕ್ಕೆ ಹಾರಾಟಕ್ಕೆ ಅನುಮತಿ ನೀಡಲಾಯಿತು.
ಮಧ್ಯಾಹ್ನ 12:35 – ಸಿಬ್ಬಂದಿ ಬೋರ್ಡಿಂಗ್ ಗೇಟ್‌ಗೆ ಆಗಮಿಸುತ್ತಿರುವುದು ಸಿಸಿಟಿವಿಯಲ್ಲಿ ದೃಶ್ಯವಾಯಿತು.
ಮಧ್ಯಾಹ್ನ 1:18:38 – ವಿಮಾನ ಬೇ 34 ರಿಂದ ಹೊರಟಿತು.
ಮಧ್ಯಾಹ್ನ 1:25:15 – ವಿಮಾನಕ್ಕೆ ಟ್ಯಾಕ್ಸಿ ಕ್ಲಿಯರೆನ್ಸ್ ದೊರಕಿತು.
ಮಧ್ಯಾಹ್ನ 1:26:08 – ವಿಮಾನ ಟ್ಯಾಕ್ಸಿಯಿಂಗ್ ಪ್ರಾರಂಭಿಸಿತು.
ಮಧ್ಯಾಹ್ನ 1:37:33 – ವಿಮಾನಕ್ಕೆ ಟೇಕ್ ಆಫ್ ಅನುಮತಿ ದೊರಕಿತು.
ಮಧ್ಯಾಹ್ನ 1:37:33 – ವಿಮಾನ ಟೇಕ್ ಆಫ್ ರನ್‌ಗೆ ಪ್ರಾರಂಭಿಸಿದ ಕ್ಷಣ.
ಮಧ್ಯಾಹ್ನ 1:38:33 – ವಿಮಾನ ಗಂಟೆಗೆ 283 ಕಿ.ಮೀ ವೇಗ ತಲುಪಿತು.
ಮಧ್ಯಾಹ್ನ 1:38:35 – ವಿಮಾನ ಗಂಟೆಗೆ 287 ಕಿ.ಮೀ ವೇಗ ತಲುಪಿತು.
ಮಧ್ಯಾಹ್ನ 1:38:39 – ವಿಮಾನ ನೆಲದಿಂದ ಮೇಲಕ್ಕೆ ಎತ್ತಲಾಯಿತು.
ಮಧ್ಯಾಹ್ನ 1:38:42 – ವಿಮಾನ 333 ಕಿ.ಮೀ ವೇಗ ತಲುಪಿತು.
ತಕ್ಷಣದ ನಂತರ – ಎಂಜಿನ್ 1 ಮತ್ತು 2ರ ಇಂಧನ ಕಟ್ ಆಫ್ ಸ್ವಿಚ್ “CUTOFF” ಗೆ ಹೋಗಿತು.
ಮಧ್ಯಾಹ್ನ 1:38:47 – ರಾಮ್ ಏರ್ ಟರ್ಬೈನ್ (RAT) ನಿಯೋಜಿಸಲಾಯಿತು. ವಿಮಾನ ಎತ್ತರ ಕಳೆದುಕೊಳ್ಳಲು ಪ್ರಾರಂಭಿಸಿತು.
ಮಧ್ಯಾಹ್ನ 1:38:52 – ಎಂಜಿನ್ 1 ಮತ್ತೆ ಚಾಲನೆಗೊಳ್ಳುವ ಪ್ರಯತ್ನವಾಯಿತು.
ಮಧ್ಯಾಹ್ನ 1:38:54 – APU ಒಳಹರಿವಿನ ಬಾಗಿಲು ತೆರೆಯಲು ಪ್ರಾರಂಭವಾಯಿತು.
ಮಧ್ಯಾಹ್ನ 1:38:56 – ಎಂಜಿನ್ 2 ಇಂಧನ ಸರಬರಾಜು ಮತ್ತೆ “RUN” ಸ್ಥಿತಿಗೆ ಮರಳಿತು.
ಮಧ್ಯಾಹ್ನ 1:38:05 – ಪೈಲಟ್ ಮಯ್ದಿನಕ್ಕೆ ಕರೆ ಮಾಡಿದನು.
ಮಧ್ಯಾಹ್ನ 1:38:11 – EAFR ರೆಕಾರ್ಡಿಂಗ್ ಸ್ಥಗಿತಗೊಂಡಿತು ಮತ್ತು ವಿಮಾನ ಅಪಘಾತಕ್ಕೀಡಾಯಿತು.
ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಬಿಡುಗಡೆ ಮಾಡಿದ 15 ಪುಟಗಳ ಪ್ರಾಥಮಿಕ ವರದಿ, ಈ ದುರಂತದ ತೀವ್ರತೆಯನ್ನು ಬಹಿರಂಗಪಡಿಸಿದೆ. ಪೂರ್ಣ ತನಿಖಾ ವರದಿ ನಿರೀಕ್ಷೆಯಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ