ಕೇರಳ ಪ್ರವಾಸೋದ್ಯಮ ಇಲಾಖೆಯಿಂದ ಬ್ರಿಟಿಷ್ ಫೈಟರ್ ಜೆಟ್ ಟ್ರೋಲ್, ಹೊಸ ಜಾಹೀರಾತು ವೈರಲ್

Published : Jul 02, 2025, 03:24 PM IST
f 35 b

ಸಾರಾಂಶ

ಇಂಧನ ಸಮಸ್ಯೆ ಎಂದು ಕೇರಳದಲ್ಲಿ ಬಂದಿಳಿದ ಬ್ರಿಟಿಷ್ ಫೈಟರ್ ಜೆಟ್, ಬಳಿಕ ತಾಂತ್ರಿಕ ಸಮಸ್ಯೆ ಸೇರಿದಂತೆ ಹಲವು ಕಾರಣ ನೀಡಿ ಕೇರಳದಲ್ಲೇ ಠಿಕಾಣಿ ಹೂಡಿದೆ.   ಕೇರಳ ಪ್ರವಾಸೋದ್ಯಮ ಇಲಾಖೆಯೂ ಈ ಫೈಟರ್ ಜೆಟ್ ಟ್ರೋಲ್ ಮಾಡಿದೆ. ಈ ಜಾಹೀರಾತು ಭಾರಿ ವೈರಲ್ ಆಗಿದೆ.

ತಿರುವನಂತಪುರಂ (ಜು.02) ಬ್ರಿಟಿಷ್ ಅತ್ಯಾಧುನಿಕ ಫೈಟರ್ ಜೆಟ್ ಎಫ್35ಬಿ ಕೇರಳದಲ್ಲಿ ಇಳಿದು ಹಲವು ದಿನಗಳಾಗಿದೆ. ಒಂದೊಂದೆ ಕಾರಣ ನೀಡಿ ಸಿಬ್ಬಂದಿಗಳು ಹಾಗೂ ಬ್ರಿಟಿಷ್ ಅಧಿಕಾರಿಗಳು ಜೆಟ್ ವಾಪಾಸ್ ಕರೆಸದೆ ದಿನ ದೂಡುತ್ತಿದ್ದಾರೆ. ಇದೀಗ ಅತ್ಯಾಧುನಿಕ ಫೈಟರ್ ಜೆಟ್ ಕೇರಳದಲ್ಲಿ ಭಾರಿ ಟ್ರೋಲ್ ಆಗುತ್ತಿದೆ. ಇದರ ನಡುವೆ ಕೇರಳ ಪ್ರವಾಸೋದ್ಯಮ ಇಲಾಖೆ ಕೂಡ ಇದೇ ಬ್ರಿಟಿಷ್ ಫೈಟರ್ ಜೆಟನ್ನು ಟ್ರೋಲ್ ಮಾಡಿದೆ. ಕೇರಳ ಪ್ರವಾಸೋದ್ಯಮ ಇಲಾಖೆ ಜಾಹೀರಾತಿನಲ್ಲಿ ಇದೇ ಫೈಟರ್ ಜೆಟ್ ಸೇರಿಸಿಕೊಂಡ ಇಲಾಖೆ, ಟ್ರೋಲ್ ಮಾಡಿದೆ. ಕೇರಳ ಉತ್ಯುತ್ತಮ ಸ್ಥಳ. ನಾನು ಇಲ್ಲಿಂದ ಹೊರಡುವುದಿಲ್ಲ ಎಂದು ಹೇಳುವ ಫೈಟರ್ ಜೆಟ್ ಜಾಹೀರಾತು ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.

ನಾನು ಎಲ್ಲರಿಗೂ ಈ ಸ್ಥಳಗಳ ಬಗ್ಗೆ ರೆಕೆಮಂಡ್ ಮಾಡುತ್ತೇನೆ. ನಾನು ಕೇರಳ ಬಿಟ್ಟು ತೆರಳವುದಿಲ್ಲ ಎಂದು ಫೈಟರ್ ಜೆಟ್ ಹೇಳುವ ರೀತಿಯಲ್ಲಿನ ಜಾಹೀರಾತನ್ನು ಕೇರಳ ಪ್ರವಾಸೋದ್ಯಮ ಇಲಾಖೆ ಪ್ರಕಟಿಸಿದೆ. ಒಂದೊಂದು ಕಾರಣ ನೀಡುತ್ತಿರುವ ಅಧಿಕಾರಿಗಳು ಫೈಟರ್ ಜೆಟ್ ಮರಳಿ ತೆಗೆದುಕೊಂಡು ಹೋಗುವ ಯಾವುದೇ ಸೂಚನೆ ನೀಡಿಲ್ಲ. ಕೇರಳ ಜನತೆ ಸೋಶಿಯಲ್ ಮೀಡಿಯಾಗಳಲ್ಲಿ ಈ ಫೈಟರ್ ಜೆಟ್ ಟ್ರೋಲ್ ಮಾಡುತ್ತಿದ್ದಾರೆ. ಇದೇ ವೇಳ ಪ್ರವಾಸೋದ್ಯಮ ಇಲಾಖೆ ಚಾಣಾಕ್ಷ ನಿರ್ಧಾರದ ಮೂಲಕ ಪ್ರವಾಸೋದ್ಯಮ ಪ್ರಚಾರ ಮಾಡುವ ಮೂಲಕ ಫೈಟರ್ ಜೆಟ್ ಟ್ರೋಲ್ ಮಾಡಿದ್ದರೆ.

ಎರಡು ವಾರವಾದ್ರೂ ಫೈಟರ್ ಜೆಟ್ ಸರಿಯಾಗಿಲ್ಲ. ರಿಸರ್ವ್ ಪೈಲಟ್ ವಾಪಸ್ ಹೋಗಿದ್ದಾರೆ. ಈಗ ಫೈಟರ್ ಜೆಟ್ ಏನಾಗುತ್ತೋ ಗೊತ್ತಿಲ್ಲ. ರಿಪೇರಿ ಮಾಡೋಕೆ ಬಂದಿದ್ದ ತಜ್ಞರೂ ವಾಪಸ್ ಹೋಗಿದ್ದಾರೆ. ಅಮೆರಿಕದಲ್ಲಿ ತಯಾರಾದ ಈ ಎಫ್-35ಬಿ ತುಂಬಾ ದುಬಾರಿ ಫೈಟರ್ ಜೆಟ್. ಇದರ ತಂತ್ರಜ್ಞಾನ ಯಾರಿಗೂ ಗೊತ್ತಾಗ್ಬಾರದು ಅಂತ ಹ್ಯಾಂಗರ್ ಕೊಡೋದಕ್ಕೆ ಏರ್ ಇಂಡಿಯಾ ಹೇಳಿದ್ರೂ ಬ್ರಿಟಿಷ್ ನೇವಿ ಬೇಡ ಎಂದಿತ್ತು. ಎರಡು ವಾರದ ಹಿಂದೆ ಈ ಫೈಟರ್ ಜೆಟ್ ತಿರುವನಂತಪುರದಲ್ಲಿ ತುರ್ತಾಗಿ ಇಳಿದಿತ್ತು. ಇಂಡಿಯನ್ ನೇವಿಯ ಜೊತೆ ಅಭ್ಯಾಸ ಮುಗಿಸಿ ವಾಪಸ್ ಹೋಗುತ್ತಿದ್ದಾಗ ತುರ್ತಾಗಿ ಕೇರಳದಲ್ಲಿ ಲ್ಯಾಂಡ್ ಆಗಿತ್ತು.ಇಂಧನ ಖಾಲಿ ಎಂದು ಆರಂಭದಲ್ಲಿ ಹೇಳಿದ್ದರೆ, ಇದೀಗ ತಾಂತ್ರಿಕ ಸಮಸ್ಯೆ ಎಂದು ಹೇಳುತ್ತಿದ್ದಾರೆ.

ಎಫ್-35 ತರಹದ ದುಬಾರಿ ಫೈಟರ್ ಜೆಟ್ ಹೀಗೆ ಇಳಿಯೋದು ಅಪರೂಪ. ಲಂಬವಾಗಿ ಇಳಿಯೋಕೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಿರೋದ್ರಿಂದ ಕ್ಯಾಟಪಲ್ಟ್ ಇಲ್ಲದೆ ಏರ್‌ಕ್ರಾಫ್ಟ್ ಕ್ಯಾರಿಯರ್‌ನಿಂದಲೂ ಹಾರಬಲ್ಲದು. ಇರಾನ್ ಮೇಲೆ ದಾಳಿ ಮಾಡೋಕೆ ಇಸ್ರೇಲ್ ಈ ಫೈಟರ್ ಜೆಟ್ ಬಳಸಿತ್ತು. ಲಾಕ್‌ಹೀಡ್ ಮಾರ್ಟಿನ್ ಕಂಪನಿ ತಯಾರಿಸಿರೋ ಈ ಫೈಟರ್ ಜೆಟ್ ರಾಡಾರ್‌ಗೆ ಸಿಗದೆ ಹಾರಬಲ್ಲದು. ಈ ವರ್ಷದ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದನ್ನ ಇಂಡಿಯಾಗೆ ವಿತರಿಸುತ್ತೇವೆ ಎಂದಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..