ವೇದಿಕೆಯಿಂದ ಬಿದ್ದ ಶಾಸಕಿ ಉಮಾ ತಲೆಗೆ ಗಂಭೀರ ಗಾಯ, ಕಾಂಗ್ರೆಸ್ ನಾಯಕರು ದೌಡು!

By Chethan Kumar  |  First Published Dec 29, 2024, 7:51 PM IST

ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಶಾಸಕಿ ಉಮಾ ಥೋಮಸ್ ವಿಐಪಿ ಗ್ಯಾಲರಿಯಿಂದ ಆಯತಪ್ಪಿ ಬಿದ್ದ ಘಟನೆ ನಡೆದಿದೆ. ಶಾಸಕಿ ತಲೆಗೆ ಗಂಭೀರ ಗಾಯವಾಗಿದ್ದು, ತಕ್ಷಣವೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಂಗ್ರೆಸ್ ನಾಯಕರು ಆಸ್ಪತ್ರೆ ದೌಡಾಯಿಸಿದ್ದಾರೆ.


ಕೊಚ್ಚಿ(ಡಿ.29) ಬೃಹತ್ ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಸಿದ ಕೇರಳದ ತ್ರಿಕ್ಕಾಕರ ಕಾಂಗ್ರೆಸ್ ಶಾಸಕಿ ಉಮಾ ಥೋಮಸ್ ಆಯತಪ್ಪಿ ಬಿದ್ದು ತೆಲೆಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಲೂರಿನ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕಿ ಉಮಾ ವಿಐಪಿ ಗ್ಯಾಲರಿ ಹತ್ತುವಾಗ ಆಯತಪ್ಪಿ ಬಿದ್ದಿದ್ದಾರೆ. ಬರೋಬ್ಬರ 20 ಅಡಿ ಎತ್ತರದಿಂದ ಕಾಂಕ್ರೀಟ್ ನೆಲಕ್ಕೆ ಬಿದ್ದ ಕಾರಣ ತಲೆಗೆ ಗಂಭೀರವಾದ ಗಾಯವಾಗಿದೆ.

ಕಲೂರ್ ಕ್ರೀಡಾಂಗಣದಲ್ಲಿ ಬರೋಬ್ಬರಿ 12 ಸಾವಿರ ಭರತನಾಟ್ಯ ನೃತ್ಯ ಪ್ರತಿಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ಹಾಕಲಾಗಿದೆ. ಇನ್ನು ಸಚಿವರು,ಶಾಸಕರು ಸೇರಿದಂತೆ ಗಣ್ಯರಿಗಾಗಿ ವಿಐಪಿ ಗ್ಯಾಲರಿಯನ್ನು ಪ್ರತ್ಯೇಕವಾಗಿ ಮೀಸಲಿಡಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸ್ಥಳೀಯ ಶಾಸಕಿ ಉಮಾ ವಿಐಪಿ ಗ್ಯಾಲರಿ ಹತ್ತಿದ ಬೆನ್ನಲ್ಲೇ ವೇದಿಕೆ ಅಂಚಿನಿಂದ ಕೆಳಕ್ಕೆ ಬಿದ್ದಿದ್ದಾರೆ. ಬಿದ್ದ ರಭಸದಲ್ಲಿ ಮುಖ ಹಾಗೂ ತಲೆಗೆ ಗಂಭೀರವಾಗಿ ಗಾಯವಾಗಿದೆ. 

Tap to resize

Latest Videos

ಇದೇ ಕಾರ್ಯಕ್ರಮದಲ್ಲಿ ಕೇರಳ ಸರ್ಕಾರದ ಕೆಲ ಸಚಿವರು, ಉನ್ನತ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಇದೇ ವೇಳೆ ಅವಘಡ ಸಂಭವಿಸಿದೆ. ಸ್ಥಳೀಯ ಖಾಸಗಿ ಆಸ್ಪತ್ರೆಗೆ ಶಾಸಕಿಯನ್ನು ದಾಖಲಿಸಲಾಗಿದೆ. ತುರ್ತು ವಿಭಾಗದಲ್ಲಿ ಉಮಾ ಥೋಮಸ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಉಮಾ ಆರೋಗ್ಯ ಸ್ಥಿತಿ ಕುರಿತು ಶೀಘ್ರದಲ್ಲೇ ಆಸ್ಪತ್ರೆ ಮೂಲಗಳು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದ್ದಾರೆ. ಇತ್ತ ಮಾಹಿತಿ ತಿಳಿಯುತ್ತಿದ್ದಂತೆ ಕಾಂಗ್ರೆಸ್ ನಾಯಕರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. 

ಟೇಕಾಫ್ ಆಗುವಾಗ ವಿಮಾನದಿಂದ ಕೆಳಗೆ ಬಿದ್ದ ಗಗನಸಖಿ; ಆಸ್ಪತ್ರೆಗೆ ದಾಖಲು

ಘಟನೆಯಿಂದ ಬೃಹತ್ ನೃತ್ಯ ಕಾರ್ಯಕ್ರಮದಲ್ಲಿನ ಸಂಭ್ರಮ ಮರೆಯಾಗಿದೆ. ಸಾವಿರಾರು ಭರತ ನಾಟ್ಯ ನೃತ್ಯಪಟುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಕಾರ್ಯಕ್ರಮದ ಆರಂಭದಲ್ಲೇ ಸಂಭವಿಸಿದ ಅವಘಡ ಎಲ್ಲರ ಮನಸ್ಸು ಕದಲಿಸಿದೆ.

ಕೇರಳ ವಿಧಾನಸಭೆಯಲ್ಲಿರುವ ಕಾಂಗ್ರೆಸ್ ಪಕ್ಷದ ಏಕೈಕ ಮಹಿಳಾ ಸದಸ್ಯೆ ಅನ್ನೋ ಹೆಗ್ಗಳಿಕೆಗೂ ಉಮಾ ಥೋಮಸ್ ಪಾತ್ರರಾಗಿದ್ದಾರೆ. ತ್ರಿಕ್ಕಾರ ವಿಧಾನಸಭಾ ಕ್ಷೇತ್ರ ಶಾಸಕರಾಗಿದ್ದ ಪಿಟಿ ಥೋಮಸ್ ಹಠಾತ್ ನಿಧನದ ಬಳಿಕ ನಡೆದ ಉಪ ಚುನಾವಣೆಯಲ್ಲಿ ಪತ್ನಿ ಉಮಾ ಥೋಮಸ್ ಸ್ಪರ್ಧಿಸಿದ್ದರು. ಪಿಟಿ ಥೋಮಸ್ ಪತ್ನಿ ಉಮಾ ಥೋಮಸ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಪತಿ ನಿಧನದ ಅನುಕಂಪ ಸೇರಿದಂತೆ ಹಲವು ಕಾರಣಗಳಿಂದ ಉಮಾ ಥೋಮಸ್ 25,016 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.

click me!