ಚಿತ್ರಮಂದಿರಗಳಲ್ಲಿ ಸರಸ ಸಲ್ಲಾಪ ಮಾಡೋರೆ ಜೋಕೆ: ಅಶ್ಲೀಲ ಸೈಟ್‌ಗಳಲ್ಲಿ ಕಾಣಿಸ್ತಿದೆ ಥಿಯೇಟರ್‌ಗಳ ರೋಮ್ಯಾನ್ಸ್

Published : Dec 02, 2025, 11:20 AM IST
Movie  theatres photo

ಸಾರಾಂಶ

Kerala theater CCTV footage leak: ಚಿತ್ರಮಂದಿರಗಳಲ್ಲಿ ಪ್ರೇಮಿಗಳ ಖಾಸಗಿ ಕ್ಷಣಗಳ ಸಿಸಿಟಿವಿ ದೃಶ್ಯಗಳು ಸೋರಿಕೆಯಾಗಿ ಅಶ್ಲೀಲ ತಾಣಗಳಲ್ಲಿ ಮಾರಾಟವಾಗುತ್ತಿವೆ. ಥಿಯೇಟರ್ ಲೋಗೋಗಳಿದ್ದರೂ, ಅಧಿಕಾರಿಗಳು ಈ ಬಗ್ಗೆ ಅರಿವಿಲ್ಲವೆಂದು ಹೇಳಿದ್ದಾರೆ.

ಸಿನಿಮಾ ಥಿಯೇಟರ್‌ಗಳಲ್ಲಿ ಪ್ರೇಮಿಗಳ ಸರಸ ಸಲ್ಲಾಪ

ಪ್ರೇಮಿಗಳು ರೋಮ್ಯಾನ್ಸ್ ಮಾಡುವ ತಾಣಗಳಲ್ಲಿ ಸಿನಿಮಾ ಥಿಯೇಟರ್‌ಗಳು ಕೂಡ ಒಂದು. ಅನೇಕರು ಸಿನಿಮಾ ನೋಡುವ ಬದಲು ಥಿಯೇಟರ್‌ಗಳಲ್ಲಿ ರೋಮಾನ್ಸ್ ಮಾಡೋದು ಹೊಸದೇನು ಅಲ್ಲ, ಆದರೆ ಹೀಗೆ ರೋಮಾನ್ಸ್ ಮಾಡೋರಿಗೆ ಶಾಕ್ ಕಾದಿದೆ. ಹೌದು ಇಲ್ಲೊಂದು ಕಡೆ ಸಿನಿಮಾ ಮಂದಿರಗಳಲ್ಲಿ ಪ್ರೇಮಿಗಳು ನಡೆಸುವ ರೋಮ್ಯಾನ್ಸ್‌ ವೀಡಿಯೋಗಳು ಅಶ್ಲೀಲ ಸೈಟ್‌ಗಳಿಗೆ ಪೋಸ್ಟ್ ಆಗಿದೆ. ಅಂದಹಾಗೆ ಈ ಘಟನೆ ನಡೆದಿರುವುದು ನೆರೆಯ ಕೇರಳದಲ್ಲಿ. ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮ (KSFDC) ಒಡೆತನದ ಚಿತ್ರಮಂದಿರಗಳೊಳಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಅಶ್ಲೀಲ ತಾಣಗಳು, ಟೆಲಿಗ್ರಾಮ್ ಮತ್ತು ಎಕ್ಸ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಕೇರಳ ಸಿನಿಮಾ ಥಿಯೇಟರ್‌ಗಳ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್

ಚಿತ್ರಮಂದಿರಗಳೊಳಗಿನ ಪ್ರೇಮಿಗಳ ದೃಶ್ಯಗಳನ್ನು ಕೇವಲ ಸೆಕೆಂಡುಗಳ ಉದ್ದದ ಟ್ರೇಲರ್‌ಗಳ ಹೆಸರಿನಲ್ಲಿ ವಿವಿಧ ಎಕ್ಸ್‌ ಖಾತೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರೊಂದಿಗೆ, ಟೆಲಿಗ್ರಾಮ್ ಚಾನೆಲ್‌ಗಳಿಗೆ ಸೇರಲು ಲಿಂಕ್‌ಗಳನ್ನು ಸಹ ಹಂಚಿಕೊಳ್ಳಲಾಗುತ್ತಿದೆ. ನೀವು ಟೆಲಿಗ್ರಾಮ್ ಚಾನೆಲ್‌ಗೆ ಸೇರಿದರೆ, ನೀವು ಅದರಲ್ಲಿ ಅನೇಕ ಉಪ ಚಾನೆಲ್‌ಗಳನ್ನು ನೋಡಬಹುದು. ನಂತರ, ವಿವಿಧ ವರ್ಗಗಳಾಗಿ ವಿಂಗಡಿಸಲಾದ ಅನೇಕ ಸಿಸಿಟಿವಿ ದೃಶ್ಯಾವಳಿಗಳಿಗೆ ಹಣವನ್ನು ಪಾವತಿಸುವ ಮೂಲಕ ಡೌನ್‌ಲೋಡ್ ಮಾಡಬಹುದು ಎಂದು ಆಮಿಷ ನೀಡಲಾಗಿದೆ ಎಂದು ವರದಿಯಾಗಿದೆ.

ಜನ ಹಣ ಪಾವತಿ ಮಾಡಿದ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳುತ್ತಿರುವ ಇನ್ನೊಂದು ಚಾನೆಲ್ ಕೂಡ ಇದೆ. ಸಿಸಿಟಿವಿ ದೃಶ್ಯಗಳಲ್ಲಿ ಥಿಯೇಟರ್‌ನಲ್ಲಿರುವ ಆಸನಗಳ ಮೇಲೆ ಕೆಎಸ್‌ಎಫ್‌ಡಿಸಿ ಲೋಗೋ ಸ್ಪಷ್ಟವಾಗಿ ಗೋಚರಿಸುತ್ತದೆ. ಕೆಲವು ದೃಶ್ಯಗಳಲ್ಲಿ, ಕೈರಲಿ ಎಲ್ 3 ವಾಟರ್‌ಮಾರ್ಕ್ ಕೂಡ ಗೋಚರಿಸುತ್ತದೆ, ಮತ್ತು ಕೆಲವದರಲ್ಲಿ, ಶ್ರೀ ಬಿಆರ್ ಎಂಟರ್‌ಟೈನ್‌ಮೆಂಟ್ಸ್‌ ಹಾಗೂ ನಿಲಾ ಬಿಎಲ್ ಎಂಟ್ರನ್ಸ್ ವಾಟರ್‌ಮಾರ್ಕ್‌ಗಳು ಗೋಚರಿಸುತ್ತವೆ.

ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳು ಸಹ ಸೋರಿಕೆಯಾಗುತ್ತಿವೆಯೇ?

ಘಟನೆಗೆ ಸಂಬಂಧಿಸಿದಂತೆ ಥಿಯೇಟರ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಇಲ್ಲಿಯವರೆಗೆ ಅಂತಹ ಯಾವುದೇ ದೂರುಗಳು ಬಂದಿಲ್ಲ ಎಂದು ತಿಳಿಸಲಾಗಿದೆ. ಇಂತಹ ವಿಚಾರಗಳ ಬಗ್ಗೆ ನಮಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ ಕೆಎಸ್‌ಎಫ್‌ಡಿಸಿ ಥಿಯೇಟರ್‌ಗಳಲ್ಲಿ ಸಿಸಿಟಿವಿಗಳನ್ನು ಕೆಲ್ಟ್ರಾನ್ ಸಂಸ್ಥೆ ಅಳವಡಿಸಿದೆ ಮತ್ತು ಅಂತಹ ದೃಶ್ಯಗಳು ಸೋರಿಕೆಯಾಗಲು ಯಾವುದೇ ಮಾರ್ಗವಿಲ್ಲ ಎಂದು ಥಿಯೇಟರ್ ಅಧಿಕಾರಿಗಳು ಹೇಳುತ್ತಾರೆ. ಆಸ್ಪತ್ರೆಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಈ ರೀತಿ ಪ್ರಸಾರ ಮಾಡಲಾಗುತ್ತಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಸಾರ್ವಜನಿಕ ಸುರಕ್ಷತೆಯ ಕಾರಣಕ್ಕೆ ಅಳವಡಿಸಲಾದ ಸಿಸಿಟಿವಿ ದೃಶ್ಯಾವಳಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಸಾಫ್ಟ್ ಪೋರ್ನ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿರುವುದು ಈಗ ಸಾಕಷ್ಟು ಕಳವಳಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ