ಕೊರೋನಾ ಹಿಮ್ಮೆಟ್ಟಿಸಿದ ಕೇರಳದಲ್ಲೀಗ ಅತೀ ಹೆಚ್ಚು ಸಕ್ರೀಯ ಕೇಸ್!

Published : Oct 06, 2020, 08:33 PM IST
ಕೊರೋನಾ ಹಿಮ್ಮೆಟ್ಟಿಸಿದ ಕೇರಳದಲ್ಲೀಗ ಅತೀ ಹೆಚ್ಚು ಸಕ್ರೀಯ ಕೇಸ್!

ಸಾರಾಂಶ

ಕೊರೋನಾ ವೈರಸ್ ನಿಯಂತ್ರಣದಲ್ಲಿ ದೇಶದಲ್ಲಿ ಕೇರಳ ಮುಂಚೂಣಿಯಲ್ಲಿತ್ತು. ಕೇರಳ ಕಾರ್ಯವನ್ನು ವಿಶ್ವ ಸಂಸ್ಥೆ ಕೂಡ ಶ್ಲಾಘಿಸಿತ್ತು. ಆದರೆ ಇದೇ ಕೇರಳವೀಗ ಅತೀ ಹೆಚ್ಚು ಕೊರೋನಾ ವೈರಸ್ ಸಕ್ರೀಯ ಪ್ರಕರಣ ಹೊಂದಿದ ರಾಜ್ಯ ಎಂಬು ಕುಖ್ಯಾತಿಗೆ ಪಾತ್ರವಾಗಿದೆ.

ಕೊಚ್ಚಿ(ಅ.06); ಕೊರೋನಾ ವೈರಸ್ ವಿರುದ್ಧ ಹೋರಾಡಲು ಕಠಿಣ ನಿಯಮ ಜಾರಿಗೆ ತಂದಿದ್ದ ಕೇರಳ ಒಂದು ಹಂತದ ವರೆಗೆ ಯಶಸ್ವಿಯಾಗಿತ್ತು. ಆದರೆ ಅಂತಾರಾಷ್ಟ್ರೀಯ ವಿಮಾನ ಸೇವೆ, ಅಂತರ್ ರಾಜ್ಯ ಸೇವೆ, ಗಡಿ  ಸಂಚಾರ ಮುಕ್ತಗೊಂಡ ಬೆನ್ನಲ್ಲೇ ಕೇರಳದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಇದೀಗ ಭಾರತದಲ್ಲಿನ ಅತೀ ಹೆಚ್ಚು ಸಕ್ರೀಯ ಕೋವಿಡ್ ಕೇಸ್ ಹೊಂದಿದ ರಾಜ್ಯವಾಗಿ ಕೇರಳ ಮಾರ್ಪಟ್ಟಿದೆ.

ಬಿಎಸ್‌ವೈ ಸಂಪುಟದ ಮತ್ತೋರ್ವ ಸಚಿವರೊಬ್ಬರಿಗೆ ಕೊರೋನಾ..!. 

ಪ್ರತಿ 10 ಲಕ್ಷ ಜನಸಂಖ್ಯೆಗೆ ಕೇರಳದಲ್ಲಿ 2,421 ಕೋವಿಡ್ ಪ್ರಕರಣ ದೃಢಪಪಟ್ಟಿದೆ. 2ನೇ ಸ್ಥಾನದಲ್ಲಿರುವ ಮಹರಾಷ್ಟ್ರದಲ್ಲಿ 2,297,  ಕರ್ನಾಟಕದಲ್ಲಿ 1,945 ಹಾಗೂ ದೆಹಲಿಯಲ್ಲಿ 1053 ಪ್ರಕರಣಗಳು ದಾಖಲಾಗಿದೆ.

ಹೊಸ ಕೋವಿಡ್ 19 ಪ್ರಕರಣದಲ್ಲೂ ಕೇರಳ ಮೊದಲ ಸ್ಥಾನದಲ್ಲಿದೆ. ಪ್ರತಿ 10 ಲಕ್ಷ ಜನಸಂಖ್ಯೆಗೆ ಒಂದು ವಾರದಲ್ಲಿ (ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 03) ಕೇರಳದಲ್ಲಿ 1,599 ಕೇಸ್ ದಾಖಲಾಗಿದೆ. ದೆಹಲಿಯಲ್ಲಿ 1,198 ಕೇಸ್, ಕರ್ನಾಟಕದಲ್ಲಿ 1,055 ಹಾಗೂ ಮಹಾರಾಷ್ಟ್ರದಲ್ಲಿ 976 ಪ್ರಕರಣ ದಾಖಲಾಗಿದೆ.

ಕೇರಳ ಆರೋಗ್ಯ ಸಚಿವಾಲಯದ ವರದಿ ಪ್ರಕಾರ ಮುಂದಿನ 2 ವಾರದಲ್ಲಿ ಕೊರೋನಾ ಮತ್ತಷ್ಟು ವ್ಯಾಪಕವಾಗಿ ಹರಡಲಿದೆ ಎಂದಿದೆ. ಹೊಸ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಕೇರಳದಲ್ಲಿ ಸೂಕ್ತ ರೀತಿ ಬೆಡ್ ವ್ಯವಸ್ಥೆ ಒದಗಿಸುವುದು ತಲೆನೋವಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ