Pinarayi Vijayan Look Viral : ವಿಡಿಯೋ ಶೇರ್ ಮಾಡಿದ ಅಟೆಂಡರ್ ಅಮಾನತು!

Contributor Asianet   | Asianet News
Published : Feb 03, 2022, 04:22 PM ISTUpdated : Feb 03, 2022, 04:32 PM IST
Pinarayi Vijayan Look Viral : ವಿಡಿಯೋ ಶೇರ್ ಮಾಡಿದ ಅಟೆಂಡರ್ ಅಮಾನತು!

ಸಾರಾಂಶ

ದುಬೈನಲ್ಲಿ ಇಂಡಿಯಾ ಪೆವಿಲಿಯನ್ ಎಕ್ಸ್ ಪೋದಲ್ಲಿ ಕೇರಳ ವೀಕ್ ಉದ್ಘಾಟನೆ ಮಾಡಲಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶರ್ಟ್, ಪ್ಯಾಂಟ್ ಧರಿಸಿದ್ದ ವಿಡಿಯೋ ವೈರಲ್ ಮಾಡಿದ ಅಟೆಂಡರ್ ಸಸ್ಪೆಂಡ್

ತಿರುವನಂತಪುರಂ (ಫೆ.3): ಕೇರಳ (Kerala) ಮುಖ್ಯಮಂತ್ರಿ ಪಿಣರಾಯಿ ವಿಜಯನ್ (CM Pinarayi Vijayan ) ಸಾಮಾನ್ಯವಾಗಿ ಧೋತಿ (Dhoti) ಹಾಗೂ ಶರ್ಟ್ (Shirt) ಧರಿಸಿ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ದುಬೈ ಎಕ್ಸ್ ಪೋ 2020 (Expo 2020 Dubai ) ಅಲ್ಲಿರುವ ಇಂಡಿಯಾ ಪೆವಿಲಿಯನ್ ನಲ್ಲಿ (India Pavilion ) ಕೇರಳ ವೀಕ್  (Kerala Week) ಉದ್ಘಾಟನೆ ಮಾಡುವ ಸಲುವಾಗಿ ಅಮೆರಿಕದಿಂದ ನೇರವಾಗಿ ಪಿಣರಾಯಿ ವಿಜಯ್ ದುಬೈಗೆ ತೆರಳಿದ್ದರು. ಸಾಮಾನ್ಯವಾಗಿ ಧೋತಿ ಹಾಗೂ ಶರ್ಟ್ ಧರಿಸುತ್ತಿದ್ದ ಅವರು ಈ ವೇಳೆ ಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದರು. ದುಬೈ ವಿಮಾನ ನಿಲ್ದಾಣದಿಂದ ಹೊರಡುವ ವೇಳೆ ಪಿಣರಾಯಿ ವಿಜಯನ್ (Pinarayi Vijayan) ಅವರನ್ನು ಯಾರೋ ವಿಡಿಯೋ ಮಾಡಿದ್ದಾರೆ. ಆದರೆ, ಇದನ್ನು ಶೇರ್ ಮಾಡಿದ ಕೇರಳ ಸಾಮಾನ್ಯ ಆಡಳಿತ ಇಲಾಖೆಯ ಅಟೆಂಡರ್ ಅನ್ನು ಈಗ ಅಮಾನತು ಮಾಡಲಾಗಿದೆ.

ಸಾಮಾಜಿಕ ಜಾಲ ತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಬಿಳಿ ಬಣ್ಣದ ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿ ಅವರು ದುಬೈ ವಿಮಾನ ನಿಲ್ದಾಣದಿಂದ ಹೊರಡುತ್ತಿರುವ ವಿಡಿಯೋ ಇದಾಗಿದೆ. ಪಿಣರಾಯಿ ವಿಜಯನ್ ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮವಾಗಿರಲಿ ಧೋತಿ ಹಾಗೂ ಬಿಳಿ ಬಣ್ಣದ ಶರ್ಟ್ ಧರಿಸುತ್ತಿದ್ದರು. ಈ ವಿಡಿಯೋವನ್ನು ಎ ಮಣಿಕುಟ್ಟನ್ ( A Manikuttan) ಎನ್ನುವ ವ್ಯಕ್ತಿ ರಾಜ್ಯ ಸಚಿವಾಲಯದ ಸರ್ಕಾರಿ ಅಟೆಂಡರ್‌ಗಳ ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಮುಖ್ಯಮಂತ್ರಿಯವರ ವರ್ಚಸ್ಸಿಗೆ ಮಸಿ ಬಳಿದಿದ್ದಾರೆ ಎನ್ನುವ ಕಾರಣ ನೀಡಿ ಅವರನ್ನು ಅಮಾನತು ಮಾಡಲಾಗಿದೆ.

ಕೆ-ರೈಲ್ ಯೋಜನೆ ಕುರಿತು ಚರ್ಚೆ ನಡೆದ ವೇಳೆ ಯುವ ಕಾಂಗ್ರೆಸ್ ಮುಖಂಡರೊಬ್ಬರು ಖಾದಿ ಶರ್ಟ್ ಮತ್ತು ಧೋತಿಯ ಬದಲಿಗೆ ಶರ್ಟ್ ಮತ್ತು ಪ್ಯಾಂಟ್ ಧರಿಸಿ ಸಭೆಗೆ ನುಗ್ಗಿದ ರೀತಿಯನ್ನು ಕಣ್ಣೂರಿನ ಪ್ರಮುಖ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕರೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಡಿಯೋ ಕೂಡ ಇದರಲ್ಲಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಭಾರತಕ್ಕೆ ಮರಳುವ ಮುನ್ನ ದುಬೈನಲ್ಲಿ ಕೆಲವು ದಿನಗಳನ್ನು ಕಳೆಯಲಿದ್ದಾರೆ ಎಂದು ಕೆಲ ದಿನಗಳ ಹಿಂದೆ ವರದಿಯಾಗಿತ್ತು. ಅನಾರೋಗ್ಯದ ಕಾರಣದಿಂದಾಗಿ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿಣರಾಯಿ ವಿಜಯನ್ ಜನವರಿ 29 ರಂದು ಕೇರಳಕ್ಕೆ ವಾಪಸಾಗಬೇಕಿತ್ತು. ಅವರು ಕೇರಳಕ್ಕೆ ಇಳಿಯುವ ಬದಲು ಶನಿವಾರ ದುಬೈಗೆ ಬಂದಿಳಿದರು ಎಂದು ಮೂಲಗಳು ತಿಳಿಸಿವೆ.

News Channel Banned :ಮೀಡಿಯಾ ಒನ್‌ ಟೀವಿ ಪ್ರಸಾರ ಸ್ಥಗಿತಕ್ಕೆ ಕೇರಳ ಹೈಕೋರ್ಟ್‌ ತಡೆ
ಕೆಲವು ದಿನಗಳ ಹಿಂದೆ ಅವರ ಅಧ್ಯಕ್ಷತೆಯಲ್ಲಿ ನಡೆದ ಆನ್‌ಲೈನ್ ಕ್ಯಾಬಿನೆಟ್ ಸಭೆಯಲ್ಲಿ ಅವರ ಯೋಜನೆ ಬದಲಾವಣೆಯ ಕುರಿತು ಯಾವ ಪ್ರಸ್ತಾಪವೂ ಆಗಿರಲಿಲ್ಲ. ಈ ನಡುವೆ ಫೆಬ್ರವರಿ 7ರ ಒಳಗಾಗಿ ಪಿಣರಾಯಿ ವಿಜಯನ್ ಅವರು ಕೇರಳಕ್ಕೆ ವಾಪಸಾಗುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಅವರು ಫೆಬ್ರವರಿ 2 ರಂದು ತಿರುವನಂತಪುರಕ್ಕೆ ಆಗಮಿಸಿ, ಫೆಬ್ರವರಿ 3 ರಂದು ದುಬೈಗೆ ತೆರಳುವುದು ಹಿಂದಿನ ಯೋಜನೆಯಾಗಿತ್ತು. ಈ ಯೋಜನೆಯನ್ನು ಕೊನೇ ಹಂತದಲ್ಲಿ ಕೈಬಿಡಲಾಗಿದೆ.

ಕೆಲವು ದಿನಗಳ ವಿಶ್ರಾಂತಿಯ ನಂತರ, ಫೆಬ್ರವರಿ 04 ರಂದು ದುಬೈನಲ್ಲಿ ನಡೆಯುತ್ತಿರುವ ಎಕ್ಸ್‌ಪೋದಲ್ಲಿ ವಿಜಯನ್ ಕೇರಳ ಪೆವಿಲಿಯನ್ ಅನ್ನು ಉದ್ಘಾಟಿಸಲಿದ್ದಾರೆ. ಅವರು ಯುಎಇಯ ಕೆಲವು ಉನ್ನತ ನಾಯಕರೊಂದಿಗೆ ಸಭೆಗಳನ್ನು ಏರ್ಪಡಿಸಿದ್ದಾರೆ ಎಂದು ಹೇಳಲಾಗಿದೆ. 

ನಾರಾಯಣ ಗುರು ಸ್ತಬ್ಧಚಿತ್ರ ವಿವಾದ ಹಿಂದೆ ಕೇರಳ ಕುತಂತ್ರ ಬಯಲು, ಶಿವಗಿರಿ ಸ್ವಾಮೀಜಿ ಬಿಚ್ಚಿಟ್ಟ ಸ್ಫೋಟಕ ಸತ್ಯ!
ಈ ಮೊದಲು ವರದಿಯಾದಂತೆ ಪಿಣರಾಯಿ ವಿಜಯನ್ ಮತ್ತು ಅವರ ಹೆಂಡತಿಯೊಂದಿಗೆ ಅಮೆರಿಕಕ್ಕೆ ಹೋಗಿದ್ದು ಅವರ ವೈಯಕ್ತಿಕ ಸಹಾಯಕ ಅಲ್ಲ, ಮುಖ್ಯಮಂತ್ರಿ ಕಚೇರಿಯ ಯುವ ಅಧಿಕಾರಿಯನ್ನು ಅಮೆರಿಕ್ಕೆ ಕರೆದುಕೊಂಡು ಹೋಗಲಾಗಿತ್ತು. ವಿಶೇಷವೇನೆಂದರೆ, ಸುಮಾರು ಒಂದು ಮಿಲಿಯನ್ ಕೇರಳೀಯರು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ವಾಸಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana