
ಕಲ್ಲಿಕೋಟೆ(ಮಾ.17): ಕೇರಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಿಂದುಳಿದ ‘ಪಣಿಯಾ’ ಬುಡಕಟ್ಟು ಸಮುದಾಯದ ಮೊದಲ ಎಂಬಿಎ ಪದವೀಧರನಾದ ಸಿ. ಮಣಿಕಂಠನ್ ಅಲಿಯಾಸ್ ಮಣಿಕುಟ್ಟನ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಆದರೆ ಇದರ ಬೆನ್ನಲ್ಲೇ, ತಾವು ಬಿಜೆಪಿ ಕಾರ್ಯಕರ್ತನೂ ಅಲ್ಲ. ಬಿಜೆಪಿಯ ಬೆಂಬಲಿಗನೂ ಅಲ್ಲ. ಹೀಗಾಗಿ ಬಿಜೆಪಿಯ ಟಿಕೆಟ್ನಿಂದ ಚುನಾವಣಾ ಕಣಕ್ಕಿಳಿಯುವುದಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ಘೋಷಿಸಿದ್ದಾರೆ.
ಒಂದು ದೇಶ, ಒಂದು ಎಲೆಕ್ಷನ್‌ಗೆ ಮತ್ತಷ್ಟು ಬಲ!
ಕೇರಳದಲ್ಲಿ ಇದು ಬಿಜೆಪಿಗೆ ದೊಡ್ಡ ಮುಜುಗರವಾಗಿ ಪರಿಣಮಿಸಿದೆ. ಈ ಬಗ್ಗೆ ಮಾತನಾಡಿದ ಮಣಿಕುಟ್ಟನ್ ಅವರು, ‘ವಯನಾಡು ವ್ಯಾಪ್ತಿಗೆ ಬರುವ ಮನಂಥವಾಡಿ ವಿಧಾನಸಭೆ ಚುನಾವಣಾ ಕಣಕ್ಕೆ ಕೇಂದ್ರ ಬಿಜೆಪಿ ನಾಯಕತ್ವ ನನ್ನ ಹೆಸರನ್ನು ಪ್ರಕಟಿಸಿರುವುದು ಟೀವಿಗಳಿಂದ ಗೊತ್ತಾಯಿತು. ಈ ವಿಚಾರದಿಂದ ನನಗೆ ಆಶ್ಚರ್ಯವಾಗಿದೆ. ಈ ಬಗ್ಗೆ ಚರ್ಚಿಸಲು ಬಿಜೆಪಿ ನಾಯಕರು ನನಗೆ ಕರೆ ಮಾಡಿದಾಗಲೂ, ನಾನು ಪಕ್ಷ ರಾಜಕೀಯ ಮತ್ತು ಚುನಾವಣೆ ರಾಜಕೀಯಕ್ಕೆ ಬರಲ್ಲ ಎಂಬ ನಿರ್ಧಾರವನ್ನೇ ತಿಳಿಸಿದ್ದೇನೆ’ ಎಂದಿದ್ದಾರೆ.
ಯಾವಾಗ ಚುನಾವಣೆ:
ಕೇರಳ (140 ಕ್ಷೇತ್ರ)| ಮಲ್ಲಪುರಂ ಉಪ-ಚುನಾವಣೆ| ಒಂದು-ಹಂತ|
ಚುನಾವಣೆ ದಿನಾಂಕ: ಏಪ್ರಿಲ್ 6
ಮತ ಎಣಿಕೆ ದಿನಾಂಕ: ಮೇ 2
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ