ಸಿಎಂ ಕೇಳಲೇ ಇಲ್ಲ, ಆದ್ರೂ ಪರಿಹಾರ ನಿಧಿಗೆ ಹರಿದು ಬಂತು ಕೋಟಿ ಕೋಟಿ ಹಣ

Suvarna News   | Asianet News
Published : Apr 24, 2021, 09:10 AM ISTUpdated : Apr 24, 2021, 09:49 AM IST
ಸಿಎಂ ಕೇಳಲೇ ಇಲ್ಲ, ಆದ್ರೂ ಪರಿಹಾರ ನಿಧಿಗೆ ಹರಿದು ಬಂತು ಕೋಟಿ ಕೋಟಿ ಹಣ

ಸಾರಾಂಶ

ವ್ಯಾಕ್ಸೀನ್, ಆಕ್ಸಿಜನ್ ಕೊರತೆ | ಮತ್ತಷ್ಟು ವ್ಯಾಕ್ಸೀನ್ ಕೇಳಿದ್ದ ಸಿಎಂ | ರಾಜ್ಯದ ಎಲ್ಲಾ ಜನರಿಗೆ ಉಚಿತ ಲಸಿಕೆ | ಮುಖ್ಯಮಂತ್ರಿ ಕೇಳದಿದ್ದರೂ ಪರಿಹಾರ ನಿಧಿಗೆ ಹರಿದು ಬಂತು ಕೋಟಿ ಕೋಟಿ ಹಣ | ಇದು ನಮ್ಮ ರಾಜ್ಯದ ವಿಶೇಷತೆ ಎಂದ ಸಿಎಂ

ತಿರುವನಂತಪುರಂ(ಏ.24): ಕೇಂದ್ರದ ಹೊಸ ಕೊರೋನಾ ಲಸಿಕೆ ವಿತರಣಾ ನೀತಿಯಲ್ಲಿ ಕೆಲವು ಷರತ್ತುಗಳನ್ನು ಆಕ್ಷೇಪಿಸಿ ಮತ್ತು ರಾಜ್ಯಗಳಿಗೆ ಉಚಿತ ಲಸಿಕೆಗಳನ್ನು ನೀಡುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು.

ಈ ಪತ್ರ ಬರೆದ ಎರಡು ದಿನಗಳ ನಂತರ ಸಾಮಾಜಿಕ ಮಾಧ್ಯಮ ಅಭಿಯಾನವೊಂದು ಕೇರಳದಲ್ಲಿ ರೂಪುಗೊಂಡಿದೆ. ದೇಣಿಗೆ ಕೋರಿ ಲಸಿಕಾ ಅಭಿಯಾನದ  ವೆಚ್ಚವನ್ನು ಭರಿಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿ (ಸಿಎಂಡಿಆರ್ಎಫ್)ಗೆ ಭಾರೀ ಮೊತ್ತದ ಹಣ ಹರಿದು ಬರುತ್ತಿದೆ.

ಅಂಬಾನಿಯಿಂದ ಬ್ರಿಟನ್‌ ಕ್ಲಬ್‌, ಗಾಲ್ಫ್‌ ರೆಸಾರ್ಟ್‌ 592 ರೂ. ಕೋಟಿ ಗೆ ಖರೀದಿ!

ಈ ಅಭಿಯಾನವನ್ನು ಸ್ಟ್ಯಾಂಡ್ ವಿತ್ ಕೇರಳ, ಸಿಎಂಡಿಆರ್ಎಫ್ ಚಾಲೆಂಜ್ ಮತ್ತು ಲಸಿಕೆಗಾಗಿ ದಾನ ಮಾಡಿ ಎಂಬ ಹ್ಯಾಶ್ ಟ್ಯಾಗ್‌ಗಳೊಂದಿಗೆ ಪ್ರಮೋಟ್ ಮಾಡಲಾಗುತ್ತಿದೆ. ಲಸಿಕೆ ತೆಗೆದುಕೊಂಡವರ ಕೊಡುಗೆಯಾಗಿ ಸಿಎಂಡಿಆರ್ಎಫ್ ಖಾತೆಗೆ ಗುರುವಾರ 22 ಲಕ್ಷ ರೂ. ಜಮೆಯಾಗಿದೆ.

ಇದು ಈ ರಾಜ್ಯದ ವಿಶೇಷತೆ. ಸಂಜೆ 4.30 ರವರೆಗೆ ಸಿಎಮ್‌ಡಿಆರ್‌ಎಫ್‌ಗೆ ಲಸಿಕೆ ತೆಗೆದುಕೊಂಡವರ ಕೊಡುಗೆಯಾಗಿ 22 ಲಕ್ಷ ರೂಪಾಯಿಗಳು ಜಮೆಯಾಗಿದೆ ಎಂದು ಅವರು ಹೇಳಿದ್ದಾರೆ. ಇದು ನಿರ್ಣಾಯಕ ಹಂತದಲ್ಲಿ ಸರ್ಕಾರದೊಂದಿಗೆ ನಿಲ್ಲುವ ಜನರ ಮನೋಭಾವವನ್ನು ತೋರಿಸುತ್ತದೆ. ಜನರಿಂದ ಈ ನಿಲುವು ಸರ್ಕಾರಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ ಎಂದಿದ್ದಾರೆ. ಬರೋಬ್ಬರಿ 45 ಗಂಟೆಯಲ್ಲಿ 2.28 ಕೋಟಿ ಸಿಎಂ ಪರಿಹಾರ ನಿಧಿಯಲ್ಲಿ ಜಮೆಯಾಗಿದೆ.

50 ವರ್ಷ ಮೇಲ್ಪಟ್ಟ ಇಲ್ಲಿನ ಸಿಬ್ಬಂದಿಗೆ ದಿನ ಬಿಟ್ಟು ದಿನ ಕೆಲಸ

ಲಸಿಕೆಗಾಗಿ ಸಿಎಂಡಿಆರ್‌ಎಫ್‌ಗೆ ಕೊಡುಗೆ ನೀಡುತ್ತಾ, ಯುಎಇಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳುವ ವ್ಯಕ್ತಿಯು ತನ್ನ ಫೇಸ್ಬುಕ್ ಪೋಸ್ಟ್‌ನಲ್ಲಿ ಯುಎಇ ನನಗೆ ಎರಡು ಲಸಿಕೆ ಡೋಸ್ ಉಚಿತವಾಗಿ ನೀಡಿತು. ಆದ್ದರಿಂದ, ಕೇರಳದ ಇಬ್ಬರು ಜನರಿಗೆ ಲಸಿಕೆ ಹಾಕಲು ಬೇಕಾದ ಮೊತ್ತವನ್ನು ಸಿಎಂಡಿಆರ್ಎಫ್ಗೆ ನೀಡುತ್ತಿದ್ದೇನೆ ಎಂದಿದ್ದಾರೆ.

ಕೇರಳ ಸರ್ಕಾರವು ಲಸಿಕೆಗಳ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದಕ್ಕಾಗಿ ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ವಿ ಮುರಳೀಧರನ್ ಅವರು  ಟೀಕಿಸಿದ್ದರು. ಈ ಬೆನ್ನಲೇ ಅಭಿಯಾನ ಇನ್ನಷ್ಟು ವೇಗ ಪಡೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ