ಉಸಿರಾಟದ ತೊಂದರೆ ಕಾಣಿಸಿದರೆ ‘ಪ್ರೋನಿಂಗ್‌’ವ್ಯಾಯಾಮ ಮಾಡಿ!

By Kannadaprabha NewsFirst Published Apr 24, 2021, 8:38 AM IST
Highlights

ಉಸಿರಾಟದ ತೊಂದರೆ ಕಾಣಿಸಿದರೆ ‘ಪ್ರೋನಿಂಗ್‌’ ಮಾಡಿ| ಇದರಿಂದ ಉಸಿರಾಟ ಸಮಸ್ಯೆ ನಿವಾರಣೆ ಸಾಧ್ಯ| ಹೋಮ್‌ ಐಸೋಲೇಶನ್‌ನಲ್ಲಿರುವ ಸೋಂಕಿತರಿಗೆ ಸರ್ಕಾರ ಸಲಹೆ| ಇದು ಯೋಗಾಸನದ ಭಂಗಿಯ ಒಂದು ವ್ಯಾಯಾಮ

 

ನವದೆಹಲಿ(ಏ.24): ಕೊರೋನಾ ರೋಗಿಗಳು ಹೋಮ್‌ ಐಸೋಲೇಶನ್‌ನಲ್ಲಿರುವಾಗ ಉಸಿರಾಟದ ತೊಂದರೆ ಕಾಣಿಸಿದರೆ ‘ಪ್ರೋನಿಂಗ್‌’ ಎಂಬ ಉಸಿರಾಟದ ವ್ಯಾಯಾಮ ಮಾಡುವಂತೆ ಕೇಂದ್ರ ಆರೋಗ್ಯ ಇಲಾಖೆ ಸಲಹೆ ನೀಡಿದೆ. ಹೀಗೆ ಮಾಡುವುದರಿಂದ ಉಸಿರಾಟ ಸುಗಮವಾಗುತ್ತದೆ. ಸರಿಯಾದ ಸಮಯಕ್ಕೆ ಪ್ರೋನಿಂಗ್‌ ಮಾಡಿದರೆ ಹಲವು ಜೀವ ಉಳಿಸಬಹುದು ಎಂದೂ ಹೇಳಿದೆ.

ಚಾಪೆ ಅಥವಾ ಮಂಚದ ಮೇಲೆ ಒಂದು ದಿಂಬು ಇರಿಸಿಕೊಂಡು, ಅದರ ಮೇಲೆ ಎದೆ ಬರುವಂತೆ ನಾವು ಬೋರಲಾಗಿ ಮಲಗಬೇಕು. ನಂತರ ಕುತ್ತಿಗೆಯನ್ನು ಒಂದು ಕಡೆ ತಿರುಗಿಸಿಟ್ಟುಕೊಂಡು ಚೆನ್ನಾಗಿ ಉಸಿರಾಡಬೇಕು. ಇದನ್ನೇ ಪ್ರೋನಿಂಗ್‌ ಭಂಗಿ ಎನ್ನುತ್ತಾರೆ. ಇದು ಉಸಿರಾಟ ಚೆನ್ನಾಗಿ ನಡೆಯಲು ಹಾಗೂ ದೇಹಕ್ಕೆ ಚೆನ್ನಾಗಿ ಆಮ್ಲಜನಕ ಪೂರೈಕೆಯಾಗುವಂತೆ ನೋಡಿಕೊಳ್ಳಲು ಜಗತ್ತಿನಾದ್ಯಂತ ವೈದ್ಯರು ಸೂಚಿಸುವ ಭಂಗಿಯಾಗಿದೆ.

ಮನೆಯಲ್ಲಿಯೇ ಕೊರೋನಾ ಸೋಲಿಸಿದ 82ರ ಅಜ್ಜಿ

‘ಕೊರೋನಾ ರೋಗಿಗಳಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಹಾಗೂ ದೇಹದಲ್ಲಿ ಆಮ್ಲಜನಕದ ಮಟ್ಟ(ಎಸ್‌ಪಿಒ2) 94ಕ್ಕಿಂತ ಕೆಳಗಿಳಿದರೆ ಮಾತ್ರ ಇದನ್ನು ಮಾಡಿದರೆ ಸಾಕು. ಊಟವಾದ ಒಂದು ಗಂಟೆಯೊಳಗೆ ಇದನ್ನು ಮಾಡಬಾರದು. ಗರ್ಭಿಣಿಯರು, ಹೃದ್ರೋಗಿಗಳು ಅಥವಾ ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆ ಇರುವವರು ಮಾಡಬಾರದು’ ಎಂದು ಸೂಚನೆ ನೀಡಿದೆ.

 

click me!