ತಿರುವನಂತಪುರಂ(ಏ.14): ದೇಶದಲ್ಲಿ ಮೊದಲ ಕೊರೋನಾ ಸೋಂಕು ಕಾಣಿಸಿಕೊಂಡು ‘ಕೊರೋನಾ ಹಾಟ್‌ಸ್ಪಾಟ್’ ಎನಿಸಿದ್ದ ಕೇರಳದಲ್ಲಿ ಈಗ ವೈರಸ್‌ಗೆ ತುತ್ತಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಇಳಿಕೆ ಕಾಣುತ್ತಿದೆ. ಭಾನುವಾರ ಕೇವಲ 2 ಪ್ರಕರಣಗಳು ದಾಖಲಾಗಿದ್ದರೆ, ಸೋಮವಾರ ಹೊಸದಾಗಿ 3 ಪ್ರಕರಣಗಳಷ್ಟೇ ದೃಢಪಟ್ಟಿವೆ.
ಕೇರಳದಲ್ಲಿ ಒಟ್ಟಾರೆ ಸೋಂಕಿತರ 378ರಷ್ಟಿದ್ದರೂ, ಈಗಾಗಲೇ 200 ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ 178 ಸಕ್ರಿಯ ಪ್ರಕರಣಗಳಷ್ಟೇ ಇವೆ. ಕೇರಳದಲ್ಲಿ ಹೊಸ ಪ್ರಕರಣಗಳಿಗಿಂತ ಗುಣಮುಖರಾಗುತ್ತಿರುವವರ ಸಂಖ್ಯೆ ಅಧಿಕವಾಗಿರುವುದು ಕೊರೋನಾ ವೈರಸ್ ಹೋರಾಟದಲ್ಲಿ ಸಿಕ್ಕ ದೊಡ್ಡ ಯಶಸ್ಸಾಗಿದೆ. ಇದಕ್ಕೆ ಕೇರಳ ಸರ್ಕಾರ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು ಕಾರಣ.
ಲಾಕ್‌ಡೌನ್ ಫಲ: 25 ಜಿಲ್ಲೆಗಳಲ್ಲಿ ವೈರಸ್ ಮಾಯ!
ನಿಯಂತ್ರಿಸಿದ್ದು ಹೇಗೆ?
1. ನಿಫಾ ವೈರಸ್ ಅನಾಹುತಗಳಿಂದ ಪಾಠ ಕಲಿತಿದ್ದ ಕೇರಳ ಸರ್ಕಾರ ಭಾರತದಲ್ಲಿ ಕೊರೋನಾ ಕಾಣಿಸಿಕೊಳ್ಳುವುದಕ್ಕೆ ಮುನ್ನವೇ ಅಗತ್ಯಪೂರ್ವ ಸಿದ್ಧತೆ ಕೈಗೊಂಡಿತ್ತು
2. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 100ರ ಗಡಿ ದಾಟುತ್ತಿದ್ದಂತೆ ಹೆಚ್ಚು ಅಪಾಯಕಾರಿ ವಲಯಗಳನ್ನು ಗುರುತಿಸಿತು. ಅಲ್ಲಿಂದ ಸೋಂಕು ಹರಡದಂತೆ ಎಚ್ಚರ ವಹಿಸಿತು
3. ವಿದೇಶದಿಂದ ಬಂದವರಲೇ ಸೋಂಕು ಹಬ್ಬುತ್ತಿದ್ದ ಕಾರಣ, ವಿಮಾನ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ಮಾಡಿತು. 5000 ಜನರ ಐಸೋಲೇಷನ್ ವಾರ್ಡ್ ತೆರೆಯಿತು
4. ವಿದೇಶ ಹಾಗೂ ಅನ್ಯರಾಜ್ಯ ಪ್ರಯಾಣ ವಿವರ ಮುಚ್ಚಿಟ್ಟವರ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಸಿತು. ಹೀಗಾಗಿ ಜನರು ಸ್ವಯಂ ತಪಾಸಣೆಗೆ ಬಂದರು
5. ವೈರಸ್ ಬಗ್ಗೆ ಜಾಗೃತಿ ಹಾಗೂ ಸಾಮಾಜಿಕ ಅಂತರಕ್ಕೆ ಸರ್ಕಾರ ಆದ್ಯತೆ ನೀಡಿತು. ಜಿಒಕೆ ಡೈರೆಕ್ಟ್ ಎಂಬ ಆ್ಯಪ್ ಮೂಲಕ ಕೊರೋನಾ ಬಗ್ಗೆ ಮಾಹಿತಿ ಒದಗಿಸಿತು
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ