ಕೇರಳ ಭೂಕುಸಿತ ಸಂತ್ರಸ್ತರ ಸಾಲ ಮನ್ನಾ ಮಾಡಲು ಕೇರಳ ಬ್ಯಾಂಕ್ ನಿರ್ಧಾರ

By Kannadaprabha News  |  First Published Aug 13, 2024, 9:52 AM IST

ಭೂಕುಸಿತ ಪೀಡಿತ ಪ್ರದೇಶ ಗಳಾದ ಮುಂಡಕ್ಕೆ ಮತ್ತು ಚೂರಲ್‌ಮಲೆಯ ತನ್ನ ಶಾಖೆಗಳಲ್ಲಿನ ಸಾಲ ಮನ್ನಾ ಮಾಡಲು ಸಹಕಾರಿ ಸ್ವಾಮ್ಯದ ಕೇರಳ ಬ್ಯಾಂಕ್ ಸೋಮವಾರ ನಿರ್ಧರಿಸಿದೆ. 


ತಿರುವನಂತಪುರಂ: ಭೂಕುಸಿತ ಪೀಡಿತ ಪ್ರದೇಶ ಗಳಾದ ಮುಂಡಕ್ಕೆ ಮತ್ತು ಚೂರಲ್‌ಮಲೆಯ ತನ್ನ ಶಾಖೆಗಳಲ್ಲಿನ ಸಾಲ ಮನ್ನಾ ಮಾಡಲು ಸಹಕಾರಿ ಸ್ವಾಮ್ಯದ ಕೇರಳ ಬ್ಯಾಂಕ್ ಸೋಮವಾರ ನಿರ್ಧರಿಸಿದೆ. ಈ ಮೂಲಕ ಸಂತ್ರಸ್ತರಿಗೆ ಮಾನವೀಯತೆ ಆಧಾರದಲ್ಲಿ ಸಹಾಯಕ್ಕೆ ಮುಂದಾಗಿದೆ.

ದುರಂತದಲ್ಲಿ ಮಡಿದವರ ಕುಟುಂಬದ ವಿವಿಧ ಸಾಲ, ಮನೆ, ಆಸ್ತಿ ಸಾಲಗಳನ್ನು ಮನ್ನಾ ಮಾಡಲು ನಿರ್ವಹಣಾ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬ್ಯಾಂಕ್ ಮುಖ್ಯಸ್ಥರು ಹೇಳಿದ್ದಾರೆ. ಎಷ್ಟು ಜನರ ಸಾಲ ಮನ್ನಾ ಆಗುತ್ತದೆ? ಸಾಲ ಮನ್ನಾದ ನಿಖರ ಪ್ರಮಾಣ ಎಷ್ಟು ಎಂಬುದನ್ನು ಬ್ಯಾಂಕ್ ಹೇಳಿಲ್ಲ. ಆದರೆ ಕೇರಳ ಬ್ಯಾಂಕ್ ಸೇರಿ ವಿವಿಧ ಬ್ಯಾಂಕ್ ಗಳಲ್ಲಿ ಈ ಭಾಗದ ಜನ ಸುಮಾರು 30 ಕೋಟಿ ರು. ಸಾಲ ಮಾಡಿದ್ದಾರೆ. ಇದರಲ್ಲಿ ಕೇರಳ ಬ್ಯಾಂಕ್ ಪಾಲು ಅಧಿಕ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Tap to resize

Latest Videos

Wayanad Landslide: ಆರೆಸ್ಸೆಸ್‌ನ ರಕ್ಷಣಾ ಕಾರ್ಯಕ್ಕೆ ಕ್ರಿಶ್ಚಿಯನ್‌ ಸಮುದಾಯದಿಂದ ಮೆಚ್ಚುಗೆ

ಇದರೊಂದಿಗೆ ಕೇರಳ ಬ್ಯಾಂಕ್ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ 50 ಲಕ್ಷ ರು. ನೀಡಿದ್ದು, ಅದರ ಉದ್ಯೋಗಿಗಳೂ ಸಹ ತಮ್ಮ 5 ದಿನದ ಸಂಬಳವನ್ನು ನಿಧಿಗೆ ನೀಡಲು ಮುಂದಾಗಿದ್ದಾರೆ. ಸರ್ಕಾರದ ಅಂಕಿ-ಅಂಶ ಪ್ರಕಾರ ಭೂಕುಸಿತ ದುರಂತದಲ್ಲಿ ಈವರೆಗೆ 229 ಮಂದಿ ಕಾಣೆಯಾಗಿದ್ದು, 130ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆ. ಉಳಿದವರು ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ವಯನಾಡು ಭೂಕುಸಿತ: ರಕ್ಷಣೆ ಮಾಡಿದ ಯೋಧರು, ಶ್ವಾನದಳಕ್ಕೆ ಕೇರಳಿಗರ ಭಾವುಕ ವಿದಾಯ 

ವಯನಾಡು ಸಂತ್ರಸ್ತರಿಗೆ 1 ತಿಂಗಳು ನಿತ್ಯ 300 ರು. ತುರ್ತು ಆರ್ಥಿಕ ನೆರವು


ತಿರುವನಂತಪುರಂ: ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ಮನೆ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಕುಟುಂಬಗಳಿಗೆ ಕೇರಳ ಸರ್ಕಾರ ತುರ್ತು ಆರ್ಥಿಕ ನೆರವನ್ನು ಘೋಷಿಸಿದೆ. ನಿತ್ಯ 300 ರು. ಹಣವನ್ನು ಸಂತ್ರಸ್ತ ಕುಟುಂಬಗಳಿಗೆ ನೀಡಲು ನಿರ್ಧರಿಸಿದೆ. ಈ ನೆರವು ಪ್ರತಿ ಕುಟುಂಬದ ಗರಿಷ್ಠ ಇಬ್ಬರಿಗೆ ಸಿಗಲಿದೆ. ಒಂದು ವೇಳೆ ಕುಟುಂಬದ ಸದಸ್ಯರು ಅನಾರೋಗ್ಯಕ್ಕೆ ತುತ್ತಾಗಿದ್ದರೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಈ ನೆರವನ್ನು ವಿಸ್ತರಿಸುವುದಾಗಿ ಸರ್ಕಾರ ಹೇಳಿದೆ. ಇದರ ಜೊತೆಗೆ ಕೇರಳ ಸರ್ಕಾರ, ಸರ್ಕಾರಿ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ನಿರಾಶ್ರಿತರಿಗೆ ಸೂರು ಕಲ್ಪಿಸಿಕೊಡಲು ಕೂಡ ಚಿಂತನೆ ನಡೆಸಿದೆ.

click me!