ವಿಧಾನಸಭೆಯಲ್ಲಿ ವಿಧ್ವಂಸಕ ಕೃತ್ಯ: ಕೇರಳ ಸರ್ಕಾರದ ಅರ್ಜಿ ವಜಾಗೊಳಿಸಿದ ಸುಪ್ರೀಂ!

By Suvarna NewsFirst Published Jul 28, 2021, 11:50 AM IST
Highlights

* 2015ರಲ್ಲಿ ಕೇರಳ ರಾಜ್ಯ ವಿಧಾನಸಭೆಯಲ್ಲಿ ವಿಧ್ವಂಸಕ ಕೃತ್ಯ ಎಸಗಿದ ಆರೋಪ

* ಸಿಪಿಐ(ಎಂ) ನಾಯಕರ ವಿರುದ್ಧದ ಪ್ರಕರಣ ಹಿಂಪಡೆಯಲು ಕೋರಿ ಕೇರಳ ಸರ್ಕಾರ ಸಲ್ಲಿಸಿದ್ದ ಅರ್ಜಿ ವಜಾ

 * ಪ್ರಸ್ತುತ ರಾಜ್ಯ ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ಸೇರಿದಂತೆ ಆರು ಮಂದಿ ವಿರುದ್ಧ ಆರೋಪ

ತಿರುವನಂತಪುರಂ(ಜು.28): 2015ರಲ್ಲಿ ಕೇರಳ ರಾಜ್ಯ ವಿಧಾನಸಭೆಯಲ್ಲಿ ವಿಧ್ವಂಸಕ ಕೃತ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ನಾಯಕರ ವಿರುದ್ಧದ ಪ್ರಕರಣ ಹಿಂಪಡೆಯಲು ಕೋರಿ ಕೇರಳ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಆದೇಶದ ಪ್ರಕಾರ, ಪ್ರಸ್ತುತ ರಾಜ್ಯ ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ಸೇರಿದಂತೆ ಆರು ಆರೋಪಿಗಳು ಈ ಪ್ರಕರಣದಲ್ಲಿ ವಿಚಾರಣೆಗೆ ಎದುರಿಸುತ್ತಿದ್ದರು.

ವಿಚಾರಣೆ ನಡೆಸಿ ಆದೇಶ ಪ್ರಕಟಿಸಿದ ಸುಪ್ರೀಂ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಎಂ. ಆರ್. ಷಾ"ಸವಲತ್ತುಗಳು ಮತ್ತು ವಿನಾಯಿತಿ ಸ್ಥಾನಮಾನದ ಗುರುತು ಅಲ್ಲ, ಅದು ಅವರನ್ನು ಅಸಮಾನ ಹೆಜ್ಜೆಯಲ್ಲಿ ನಿಲ್ಲುವಂತೆ ಮಾಡುತ್ತದೆ. ಈ ಸವಲತ್ತುಗಳು ಶಾಸಕರ ಕಾರ್ಯಗಳ ವಿಸರ್ಜನೆಗೆ ಕ್ರಿಯಾತ್ಮಕ ಸಂಬಂಧವನ್ನು ಹೊಂದಿವೆ, ಆದರೆ ಇದು ಶಾಸಕರನ್ನು ಪೀಠದ ಮೇಲೆ ಇರಿಸುವ ವ್ಯತ್ಯಾಸದ ಗುರುತು ಅಲ್ಲ" ಎಂದಿದೆ. 

ಮಾರ್ಚ್ 13, 2015 ರಂದು ರಾಜ್ಯ ವಿಧಾನಸಭೆಯು ಅಭೂತಪೂರ್ವ ದೃಶ್ಯಗಳಿಗೆ ಸಾಕ್ಷಿಯಾಗಿತ್ತು, ಆಗ ಪ್ರತಿಪಕ್ಷದಲ್ಲಿದ್ದ ಎಲ್‌ಡಿಎಫ್ ಸದಸ್ಯರು ಬಾರ್ ಲಂಚ ಹಗರಣದಲ್ಲಿ ಆರೋಪ ಎದುರಿಸುತ್ತಿದ್ದ ಹಣಕಾಸು ಸಚಿವ ಕೆ ಎಂ ಮಣಿ ಅವರನ್ನು ರಾಜ್ಯ ಬಜೆಟ್ ಮಂಡಿಸದಂತೆ ತಡೆಯಲು ಪ್ರಯತ್ನಿಸಿದ್ದರು.

ವೇದಿಕೆಯಲ್ಲಿದ್ದ ಸ್ಪೀಕರ್ ಕುರ್ಚಿ ಎಳೆದಾಡುವುದರೊಂದಿಗೆ, ಪ್ರೆಸಿಡಿಂಗ್ ಅಧಿಕಾರಿಯ ಮೇಜಿನ ಮೇಲಿರುವ ಕಂಪ್ಯೂಟರ್, ಕೀಬೋರ್ಡ್ ಮತ್ತು ಮೈಕ್‌ಗಳಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನೂ ಎಲ್‌ಡಿಎಫ್ ಸದಸ್ಯರು ಹಾನಿಗೊಳಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. 

click me!