ಛತ್ತೀಸ್‌ಗಢ: ಸಚಿವನಿಂದಲೇ ವಿಧಾನಸಭೆಯಲ್ಲಿ ಸಭಾತ್ಯಾಗ!

By Suvarna NewsFirst Published Jul 28, 2021, 9:01 AM IST
Highlights

* ಛತ್ತೀಸ್‌ಗಢನ ಆರೋಗ್ಯ ಮಂತ್ರಿ ಟಿ.ಎಸ್‌.ಸಿಂಗ್‌ದೇವ್‌

* ಸಚಿವನಿಂದಲೇ ವಿಧಾನಸಭೆಯಲ್ಲಿ ಸಭಾತ್ಯಾಗ

* ಕಾಂಗ್ರೆಸ್‌ ಶಾಸಕರಿಂದ ಯಾವುದೇ ದೂರು ಬಂದಿಲ್ಲವಾದ್ದರಿಂದ ತನಿಖೆ ನಡೆಸಲು ಸಾಧ್ಯವಿಲ್ಲ ಎಂದ ಸ್ಪೀಕರ್‌

ರಾಯ್‌ಪುರ್‌(ಜು.28): ಛತ್ತೀಸ್‌ಗಢನ ಆರೋಗ್ಯ ಮಂತ್ರಿ ಟಿ.ಎಸ್‌.ಸಿಂಗ್‌ದೇವ್‌, ತಮ್ಮ ಮೇಲೆ ಕಾಂಗ್ರೆಸ್‌ನ ಎಂಎಲ್‌ಎ ಮಾಡಿರುವ ಆರೋಪಕ್ಕೆ ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳಬೇಕು. ಅಲ್ಲಿಯವರೆಗೆ ಸದನದಲ್ಲಿ ಭಾಗವಹಿಸುವುದಿಲ್ಲ ಎಂದು ಸಭಾತ್ಯಾಗ ಮಾಡಿದ್ದಾರೆ.

ಆಡಳಿತ ಪಕ್ಷದ ಶಾಸಕ ಬೃಹಸ್ಪತಿ ಸಿಂಗ್‌, ಮಾಜಿ ಮುಖ್ಯಮಂತ್ರಿಯನ್ನು ಹೊಗಳಿದ್ದಕ್ಕೆ ಮೇಲೆ ಸಿಂಗ್‌ದೇವ್‌ ಅವರ ಆಜ್ಞೆಯಂತೆ ಅವರ ಬೆಂಬಲಿಗರು ದಾಳಿ ಮಾಡಿದ್ದರು ಎಂದು ಆರೋಪ ಮಾಡಿದ್ದರು. ಸದನದ ಮೊದಲ ದಿನವಾದ ಸೋಮವಾರದ ಅಧಿವೇಶನದಲ್ಲಿ ಬಿಜಿಪಿ ಶಾಸಕರು, ಈ ಆರೋಪವು ಬಹಳ ಗಂಭೀರವಾದುದು. ಸದನ ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಮಂಗಳವಾರವೂ ಬಿಜೆಪಿ ಶಾಸಕರ ಈ ಆಗ್ರಹ ಮುಂದುವರೆಯಿತು.

ಕಾಂಗ್ರೆಸ್‌ ಶಾಸಕರಿಂದ ಯಾವುದೇ ದೂರು ಬಂದಿಲ್ಲವಾದ್ದರಿಂದ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಸ್ಪೀಕರ್‌ ಹೇಳಿದರು. ಈ ಮಧ್ಯೆ ಎದ್ದು ನಿಂತ ಸಿಂಗ್‌ದೇವ್‌, ಈ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ಸಭೆಯನ್ನು ಕೂಡ ಕರೆದಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಲಿಖಿತ ಉತ್ತರ ನೀಡುವವರೆಗೂ ಸದನದಲ್ಲಿ ಭಾಗವಹಿಸುವುದಿಲ್ಲ ಎಂದು ಹೊರ ನಡೆದರು.

click me!