
ತಿರುವನಂತಪುರಂ (ಜು.21): ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದೊಂದಿಗೆ ಸದಾ ಜಟಾಪಟಿ ನಡೆಸುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರ, ಹಿರಿಯ ಐಎಎಸ್ ಅಧಿಕಾರಿ ಕೆ. ವಾಸುಕಿ ಅವರನ್ನು ರಾಜ್ಯದ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಿದೆ. ವಿದೇಶಾಂಗ ಕಾರ್ಯದರ್ಶಿ ಎನ್ನುವುದು ಕೇಂದ್ರ ಸರ್ಕಾರದಲ್ಲಿನ ಮಹತ್ವದ ಹುದ್ದೆ. ನೆರೆಯ ದೇಶಗಳೊಂದಿಗೆ ವ್ಯವಹಾರ ಸಂಬಂಧ ವಿದೇಶಾಂಗ ಸಚಿವಾಲಯದಲ್ಲಿ ಈ ಹುದ್ದೆ ರಚಿಸಲಾಗುತ್ತದೆ.
ಆದರೆ ದೇಶದಲ್ಲೇ ಮೊದಲ ಬಾರಿಗೆ ಎನ್ನುವಂತೆ ಕೇರಳ ಸರ್ಕಾರ, ನೆರೆ ದೇಶಗಳ ಜೊತೆಗಿನ ಸಮನ್ವಯದ ಹೆಸರಲ್ಲಿ ವಿದೇಶಾಂಗ ಕಾರ್ಯದರ್ಶಿಯೊಬ್ಬರನ್ನು ನೇಮಕ ಮಾಡಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ರಾಯಭಾರಿಗಳ ಕಚೇರಿ, ಮಿಷನ್ ಜೊತೆಗೆ ಸಂಪರ್ಕ ಸಾಧಿಸಲು ನೇಮಕ ಮಾಡಲಾಗಿದೆ ಎಂದು ಸರ್ಕಾರ ನೇಮಕಕ್ಕೆ ಕಾರಣ ನೀಡಿದೆ.
ಒಡಿಶಾದಲ್ಲಿ ಬ್ರಿಟನ್ ರೀತಿ ‘ವಿಪಕ್ಷದ ಸಚಿವ ಸಂಪುಟ’! ಏನಿದು ಶಾಡೋ ಕ್ಯಾಬಿನೆಟ್?
ಕಾರ್ಮಿಕ ಮತ್ತು ಕೌಶಲ್ಯ ಇಲಾಖೆಯ ಕಾರ್ಯದರ್ಶಿಯಾಗಿದ್ದ ಕೆ. ವಾಸುಕಿ(Vasuki IAS) ಅವರನ್ನು ವಿದೇಶಾಂಗ ಕಾರ್ಯದರ್ಶಿ(ಬಾಹ್ಯ ಸಹಕಾರಕ್ಕೆ ಸಂಬಂಧಿಸಿದ ವಿಷಯಗಳ ಉಸ್ತುವಾರಿ ಕಾರ್ಯದರ್ಶಿ)ಯಾಗಿ ಜುಲೈ 15ರಂದು ಹೆಚ್ಚುವರಿ ಹೊಣೆಯನ್ನುನೀಡಿ ಆದೇಶ ಹೊರಡಿಸಿದೆ.
ಕೇರಳದ 14 ವರ್ಷದ ಬಾಲಕನಲ್ಲಿ ಪತ್ತೆಯಾದ ನಿಫಾ ವೈರಸ್, ಹೈ ಅಲರ್ಟ್ ಘೋಷಣೆ!
ಬಿಜೆಪಿ ಕಟುಟೀಕೆ:
ವಿದೇಶಾಂಗ ಇಲಾಖೆ(Department of Foreign Affairs)ಯ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲದೇ ಇರುವಾಗ ವಾಸುಕಿ ಅವರನ್ನು ವಿದೇಶಾಂಗ ಕಾರ್ಯದರ್ಶಿ ಆಗಿ ನೇಮಿಸಿರುವುದು ಸಂವಿಧಾನ ವಿರೋಧಿ ನಡೆ ಎಂದು ಎಂದು ಬಿಜೆಪಿ(BJP) ಆರೋಪಿಸಿದೆ. ಈ ಬಗ್ಗೆ ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್(Kerala BJP President K. Surendran) ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ‘ಐಎಎಸ್ ಅಧಿಕಾರಿಯನ್ನು ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದು ನಮ್ಮ ಸಂವಿಧಾನದ ಒಕ್ಕೂಟ ಪಟ್ಟಿಯ ಉಲ್ಲಂಘನೆಯಾಗಿದೆ. ಎಲ್‌ಡಿಎಫ್ ಸರ್ಕಾರ(LDF government)ಕ್ಕೆ ವಿದೇಶಾಂಗ ಇಲಾಖೆಯಲ್ಲಿ ಯಾವುದೇ ಅವಕಾಶವಿಲ್ಲ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ