ಪರಿಶಿಷ್ಟ ಪಂಗಡದ ವ್ಯಕ್ತಿಗೆ ಕೇರಳ ದೇಗುಲದ ಅರ್ಚಕ ಹುದ್ದೆ: ಇದೇ ಪ್ರಥಮ!

By Kannadaprabha NewsFirst Published Nov 7, 2020, 10:18 AM IST
Highlights

 ಶಬರಿಮಲೆ ಅಯ್ಯಪ್ಪ ಸೇರಿದಂತೆ ಕೇರಳದ 1200ಕ್ಕೂ ಹೆಚ್ಚು ದೇಗುಲಗಳ ಉಸ್ತುವಾರಿ ಹೊತ್ತಿರುವ ಟ್ರಾವಂಕೂರು ದೇವಸ್ವಂ ಮಂಡಳಿ| ಕೇರಳ ದೇಗುಲಕ್ಕೆ ಮೊದಲ ಬಾರಿ ಪರಿಶಿಷ್ಟಪಂಗಡದ ವ್ಯಕ್ತಿಗೆ ಅರ್ಚಕ ಹುದ್ದೆ!

ತಿರುವನಂತಪುರಂ(ನ.07):  ಶಬರಿಮಲೆ ಅಯ್ಯಪ್ಪ ಸೇರಿದಂತೆ ಕೇರಳದ 1200ಕ್ಕೂ ಹೆಚ್ಚು ದೇಗುಲಗಳ ಉಸ್ತುವಾರಿ ಹೊತ್ತಿರುವ ಟ್ರಾವಂಕೂರು ದೇವಸ್ವಂ ಮಂಡಳಿ, ಇದೇ ಮೊದಲ ಬಾರಿಗೆ ಅರ್ಚಕ ಹುದ್ದೆಗೆ ಪರಿಶಿಷ್ಟಪಂಗಡಕ್ಕೆ ಸೇರಿದ ವ್ಯಕ್ತಿಯೊಬ್ಬರನ್ನು ನೇಮಕ ಮಾಡಲು ನಿರ್ಧರಿಸಿದೆ. ಈ ಮೂಲಕ ರಾಜ್ಯದಲ್ಲಿ ಹೊಸ ಇತಿಹಾಸ ರಚನೆಗೆ ವೇದಿಕೆ ಸಿದ್ಧವಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಕೇರಳದ ಮುಜರಾಯಿ ಇಲಾಖೆ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ‘ರಾಜ್ಯದ ವಿವಿಧ ದೇವಾಲಯಗಳಿಗೆ ಕೆಳವರ್ಗದ 19 ಜನರನ್ನು ಅರ್ಚಕರಾಗಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಇದರಲ್ಲಿ ಪರಿಶಿಷ್ಟಜಾತಿಗೆ ಸೇರಿದ 18 ಮತ್ತು ಪರಿಶಿಷ್ಟಪಂಗಡಕ್ಕೆ ಸೇರಿದ ಓರ್ವ ವ್ಯಕ್ತಿ ಸೇರಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪರಿಶಿಷ್ಟಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಅರ್ಚಕ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಈಗಾಗಲೇ ವಿವಿಧ ದೇಗುಗಳಿಗೆ 310 ಜನರನ್ನು ಹಂಗಾಮಿಯಾಗಿ ಅರ್ಚಕ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿದೆ. ಆದರೆ ನೇಮಕಾತಿ ಸಂದರ್ಭದಲ್ಲಿ ಎಸ್‌ಸಿ/ ಎಸ್‌ಟಿ ಸಮುದಾಯದಿಂದ ಅರ್ಹತೆ ಪಡೆದ ಅಭ್ಯರ್ಥಿಗಳು ಇರಲಿಲ್ಲ. ಹೀಗಾಗಿ ವಿಶೇಷ ನೇಮಕಾತಿ ಇದೀಗ ಮತ್ತೆ 19 ಜನರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಸುರೇಂದ್ರನ್‌ ತಿಳಿಸಿದ್ದಾರೆ

click me!