ನಾಳೆ ಕೆಸಿಆರ್‌ ಹೊಸ ರಾಷ್ಟ್ರೀಯ ಪಕ್ಷ ಅನಾವರಣ, ಸ್ಥಳೀಯರಿಗೆ ಮದ್ಯದ ಬಾಟಲಿ, ಕೋಳಿ ನೀಡಿದ ಟಿಆರ್‌ಎಸ್‌ ನಾಯಕ!

By Santosh Naik  |  First Published Oct 4, 2022, 3:53 PM IST

ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್‌ ರಾವ್‌ ವಿಜಯದಶಮಿಯ ನಿಮಿತ್ತ ಹೊಸ ರಾಷ್ಟ್ರೀಯ ಪಕ್ಷವನ್ನು ಬುಧವಾರ ಅನಾವರಣ ಮಾಡಲಿದ್ದಾರೆ. ಇದಕ್ಕಾಗಿ ಟಿಆರ್‌ಎಸ್‌ ನಾಯಕನೊಬ್ಬ ಸಾರ್ವಜನಿಕವಾಗಿ ಸ್ಥಳೀಯ ಜನರಿಗೆ ಮದ್ಯದ ಬಾಟಲಿ ಹಾಗೂ ಕೋಳಿಯನ್ನು ವಿತರಣೆ ಮಾಡಿ ವಿವಾದ ಸೃಷ್ಟಿಸಿದ್ದಾರೆ.


ವಾರಂಗಲ್‌ (ಅ.4): ಮುಂದಿನ ಲೋಕಸಭೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಸೋಲಿಸಲೇಬೇಕು ಎನ್ನುವ ಗುರಿಯಲ್ಲಿರುವ ಎದುರಾಳಿಗಳು ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅದರಂತೆ ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್‌ ರಾವ್‌ ವಿಜಯದಶಮಿಯ ದಿನದಂದು ಹೊಸ ರಾಷ್ಟ್ರೀಯ ಪಕ್ಷವನ್ನು ಅನಾವರಣ ಮಾಡಲಿದ್ದಾರೆ. ಇದನ್ನು ಸಂಭ್ರಮಿಸುವ ಸಲುವಾಗಿ ಟಿಆರ್‌ಎಸ್‌ ನಾಯಕನೊಬ್ಬ ಸ್ಥಳೀಯ ಜನರಿಗೆ ಸಾರ್ವಜನಿಕವಾಗಿ ಮದ್ಯದ ಬಾಟಲಿ ಹಾಗೂ ಕೋಳಿಯನ್ನು ನೀಡಿದ್ದಾರೆ. ಇದರ ವಿಡಿಯೋವನ್ನು ಮಾಡಿ ಮಾಧ್ಯಮಗಳಿಗೂ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ವಿವಾದ ಕೂಡ ಸೃಷ್ಟಿಯಾಗಿದೆ. ವಾರಂಗಲ್‌ನಲ್ಲಿ ಈ ಘಟನೆ ನಡೆದಿದ್ದು, ಟಿಆರ್‌ಎಸ್‌ ನಾಯಕ ರಾಜನಾಲಾ ಶ್ರೀಹರಿ ಜನರಿಗೆ ಒಂದು ಕ್ವಾರ್ಟರ್‌ ಬಾಟಲ್‌ ಮದ್ಯ ಹಾಗೂ ಕೋಳಿಯನ್ನು ನೀಡಿದ್ದಾರೆ.  ಇನ್ನೂ ಕೆಲವು ವರದಿಗಳ ಪ್ರಕಾರ, ದಸರಾ ನಿಮಿತ್ತವಾಗಿ ಬಡಜನರಿಗೆ ಮಾಜಿ ಎಸ್‌ಎಎಪಿ ನಿರ್ದೇಶಕ ರಾಜನಾಲಾ ಶ್ರೀಹರಿ ಎಣ್ಣೆ ಹಾಗೂ ಕೋಳಿಯನ್ನು ವಿತರಣೆ ಮಾಡಿದ್ದಾರೆ ಎನ್ನಲಾಗಿದೆ. ವಾರಂಗಲ್‌ ಪೂರ್ವ ಕ್ಷೇತ್ರದಲ್ಲಿ ಇದರ ಹಂಚಿಕೆ ಮಾಡಿದ್ದಾರೆ ಎಂದು ತೆಲಂಗಾಣದ ಮಾಧ್ಯಮಗಳು ವರದಿ ಮಾಡಿವೆ. ಇನ್ನು ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

| TRS leader Rajanala Srihari distributes liquor bottles and chicken to locals ahead of Telangana CM KC Rao launching a national party tomorrow, in Warangal pic.twitter.com/4tfUsPgfNU

— ANI (@ANI)

ಇನ್ನೂ ಕೆಲವು ವರದಿಗಳ ಪ್ರಕಾರ, ದಸರಾ ನಿಮಿತ್ತವಾಗಿ ಬಡಜನರಿಗೆ ಮಾಜಿ ಎಸ್‌ಎಎಪಿ ನಿರ್ದೇಶಕ ರಾಜನಾಲಾ ಶ್ರೀಹರಿ ಎಣ್ಣೆ ಹಾಗೂ ಕೋಳಿಯನ್ನು ವಿತರಣೆ ಮಾಡಿದ್ದಾರೆ ಎನ್ನಲಾಗಿದೆ. ವಾರಂಗಲ್‌ ಪೂರ್ವ ಕ್ಷೇತ್ರದಲ್ಲಿ ಇದರ ಹಂಚಿಕೆ ಮಾಡಿದ್ದಾರೆ ಎಂದು ತೆಲಂಗಾಣದ ಮಾಧ್ಯಮಗಳು ವರದಿ ಮಾಡಿವೆ.

Tap to resize

Latest Videos

ಮುಖ್ಯಮಂತ್ರಿ ಕೆಸಿಆರ್ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಲಿ ಎಂದು ದಸರಾ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಶ್ರೀಹರಿ (Srihari) ಹೇಳಿದರು. ಬಳಿಕ ಮಾತನಾಡಿದ ಅವರು, ಕೆಸಿಆರ್ (KC Chandrashekar Rao) ಪ್ರಧಾನಿಯಾಗಲಿ, ಕೆಟಿಆರ್ (KTR) ರಾಜ್ಯ ಪಕ್ಷದ ಅಧ್ಯಕ್ಷರಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಯಿತು. ದಸರಾ ಸಂದರ್ಭದಲ್ಲಿ ಸಿಎಂ ಕೆಸಿಆರ್ ತಮ್ಮ ರಾಷ್ಟ್ರೀಯ ಕಾರ್ಯಸೂಚಿಯ ವಿವರಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಅಲ್ಲದೆ, ಟಿಆರ್‌ಎಸ್ ಸಾಮಾನ್ಯ ಸಭೆಯನ್ನು ದಸರಾ (ಅಕ್ಟೋಬರ್ 5) ಬೆಳಗ್ಗೆ 11 ಗಂಟೆಗೆ ತೆಲಂಗಾಣ ಭವನದಲ್ಲಿ (Telangana Bhavan) ನಡೆಸಲಾಗುವುದು ಎಂದು ಕೆಸಿಆರ್ ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಹೈದರಾಬಾದ್‌ನಲ್ಲಿ ಕೆಸಿಆರ್‌, ಎಚ್‌ಡಿಕೆ ಮಹತ್ವದ ಮಾತುಕತೆ

ಮೂಲಗಳ ಪ್ರಕಾರ, ಸಿಎಂ ಕೆಸಿಆರ್ ಅವರು ದಸರಾ ಸಂದರ್ಭದಲ್ಲಿ ತಮ್ಮ ರಾಷ್ಟ್ರೀಯ ಪಕ್ಷದ (National Party) ಹೆಸರನ್ನು ಘೋಷಿಸುತ್ತಾರೆ ಎಂದು ವರದಿಯಾಗಿದೆ. ಸಭೆಯ ನಂತರ ಕೆಸಿಆರ್ ಅವರು ರಾಷ್ಟ್ರ ರಾಜಕಾರಣದ ಬಗೆಗಿನ ವಿವರಗಳನ್ನು ಬಹಿರಂಗಪಡಿಸಬಹುದು ಎನ್ನುವ ಊಹಾಪೋಹಗಳಿವೆ. ಪಕ್ಷದ ಹೆಸರನ್ನು ಬದಲಾಯಿಸಲು ಟಿಆರ್‌ಎಸ್ (TRS) ಪಕ್ಷದ ನಾಯಕರ ನಿಯೋಗ ದೆಹಲಿಗೆ ತೆರಳಲಿದೆ ಎಂದು ನಂಬಲಾಗಿದೆ. ಮೂಲಗಳ ಪ್ರಕಾರ, ಕೆಸಿಆರ್ ಅಕ್ಟೋಬರ್ 9 ರಂದು ದೆಹಲಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

PM ಹುದ್ದೆ ಮೇಲೆ ಕಣ್ಣಿಟ್ಟು KCR ಹೊಸ ರಾಷ್ಟ್ರೀಯ ಪಕ್ಷ ಘೋಷಣೆ..? ಕರ್ನಾಟಕ, ಗುಜರಾತ್‌ನಲ್ಲಿ ಸ್ಪರ್ಧೆ..!

ಈ ಹಿಂದೆ ವರದಿ ಮಾಡಿದಂತೆ ತೆಲಂಗಾಣ ಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ (Telangana PCC Campaign Committee Chairman) ಹಾಗೂ ಮಾಜಿ ಸಂಸದ ಮಧು ಗೌಡ್ ಯಾಶ್ಕಿ (former MP Madhu Goud Yashki ) ಮಾತನಾಡಿ, ತೆಲಂಗಾಣ ಸಿಎಂ ರಾಷ್ಟ್ರೀಯ ಪಕ್ಷ ಸ್ಥಾಪಿಸಿರುವುದು ಅರ್ಥಹೀನ ನಡೆ, ತೆಲಂಗಾಣ ಜನತೆಗೆ ಮೋಸ ಮಾಡಿ ಈಗ ದೇಶದ ಜನತೆಗೆ ಮೋಸ ಮಾಡಲು ಹೊರಟಿದ್ದಾರೆ. ಇದು ಅವರ ವೈಫಲ್ಯಗಳನ್ನು ಮುಚ್ಚಿಹಾಕುವುದು ಮತ್ತು ಅವರ ಕುಟುಂಬ ಸದಸ್ಯರ ದೆಹಲಿ ಮದ್ಯ ಹಗರಣದಿಂದ ಹಣವನ್ನು ಬೇರೆಡೆಗೆ ತಿರುಗಿಸುವ ತಂತ್ರವಾಗಿದೆ ಎಂದಿದ್ದಾರೆ. 

click me!