ಮುಂದಿನ‌ ಆರೇಳು ವರ್ಷಗಳಲ್ಲಿ ಕರ್ನಾಟಕದಲ್ಲಿ 19,200 ಮೆ. ವ್ಯಾಟ್ಸ್ ಉತ್ಪಾದನೆ: ಗೌರವ್ ಗುಪ್ತಾ

By Suvarna News  |  First Published Sep 16, 2024, 7:25 PM IST

ಮುಂದಿನ‌ ಆರೇಳು ವರ್ಷಗಳಲ್ಲಿ ಕರ್ನಾಟಕದಲ್ಲಿ 19,200 ಮೆ. ವ್ಯಾಟ್ಸ್ ಹೆಚ್ಚುವರಿಯಾಗಿ ಉತ್ಪಾದನೆಯಾಗಲಿದೆ ಎಂದು ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದ್ದಾರೆ. 


ಡೆಲ್ಲಿ ಮಂಜು

ಗಾಂಧಿನಗರ (ಗುಜರಾತ್) (ಸೆ.16): ಮುಂದಿನ‌ ಆರೇಳು ವರ್ಷಗಳಲ್ಲಿ ಕರ್ನಾಟಕದಲ್ಲಿ 19,200 ಮೆ. ವ್ಯಾಟ್ಸ್ ಹೆಚ್ಚುವರಿಯಾಗಿ ಉತ್ಪಾದನೆಯಾಗಲಿದೆ ಎಂದು ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದ್ದಾರೆ. ಸೋಮವಾರ ಗಾಂಧಿನಗರದಲ್ಲಿ ಆಯೋಜಿಸಿದ್ದ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮಾವೇಶ 2024ರಲ್ಲಿ  ಭಾಗವಹಿಸಿದ ಬಳಿಕ ಈ ವಿಷಯ ಸುದ್ದಿಗಾರರಿಗೆ ಗುಪ್ತಾ ತಿಳಿಸಿದ್ರು.

Latest Videos

undefined

ಪ್ರಸ್ತುತ ನಾವು ನವೀವಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 18 ಸಾವಿರ ಮೆ.ವ್ಯಾಟ್ ಉತ್ಪಾದನೆಯಾಗುತ್ತಿದೆ. ಇದು ಹೊರತಾಗಿ ಆರೇಳು ವರ್ಷಗಳಲ್ಲಿ 19,200 ಮೆ. ವ್ಯಾಟ್ಸ್ ಉತ್ಪಾದನೆ ಮಾಡಲಿದ್ದೇವೆ. 2030 ರ ಭಾರತ ಸರ್ಕಾರದ 500  ಗಿಗಾ ವ್ಯಾಟ್ಸ್ ಉತ್ಪಾದನೆ ಗುರಿಗೆ  ಕರ್ನಾಟಕದ ಕೊಡುಗೆಯೂ ಸೇರಲಿದೆ ಎಂದರು. ಕರ್ನಾಟಕದಲ್ಲಿ ಪವನ ಮತ್ತು ಸೌರಶಕ್ತಿ ಉತ್ಪಾದನೆಗೆ ವಿಫುಲ ಅವಕಾಶಗಳು ಇವೆ. ಹಾಗಾಗಿ 19 ಸಾವಿರ ಮೆ.ವ್ಯಾಟ್ ಸೇರ್ಪಡೆಯ ಶಪಥಪತ್ರಕ್ಕೆ ಕರ್ನಾಟಕವೂ ಒಪ್ಪಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆಡಿಯೋ ಕೇಳಿದರೆ ಮುನಿರತ್ನ ತಪ್ಪು ಗೊತ್ತಾಗುತ್ತೆ: ಸಚಿವ ಶಿವರಾಜ ತಂಗಡಗಿ

ಭವಿಷ್ಯದಲ್ಲಿ ನಮ್ಮ ಆದ್ಯತೆ ಉತ್ಪಾದನೆಯಾಗುವ ಇಂಧನವನ್ನು ಶೇಕರಿಸುವ, ಉತ್ತಮ ರೀತಿಯಲ್ಲಿ ವಿತರಣೆ ಮಾಡುವ ಕಡೆ ಇರುತ್ತದೆ. 2022 ರಲ್ಲಿ ಕರ್ನಾಟಕ ಸರ್ಕಾರ ನವೀಕರಿಸಬಹುದಾದ ಇಂಧನ ಕುರಿತು ಒಂದು  ವಿಶೇಷ ನೀತಿ ಕೂಡ ಪ್ರಕಟಿಸಿದೆ ಎಂದರು. ಪ್ರಸ್ತುತ ಈ ಹೂಡಿಕೆ ಸಮಾವೇಶದಲ್ಲಿ ಭಾಗಿಯಾಗಿರುವ ಹಲವು ಹೂಡಿಕೆದಾರರು ಕರ್ನಾಟಕಕ್ಕೆ ಬರಲು ಆಸಕ್ತಿ ತೋರುತ್ತಿದ್ದಾರೆ. ಅವರ ಜೊತೆ ಕೂಡ ಮಾತುಕತೆ ನಡೆಯುತ್ತಿದೆ ಎಂದರು.

ಕರ್ನಾಟಕ ಸ್ಟಾಲ್ ನಲ್ಲಿ ಮೋದಿ: ಗಾಂಧಿನಗರ ಮಹಾತ್ಮ ಮಂದಿರದಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನ ಕೇಂದ್ರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದರು. ಇದೇ ವೇಳೆ ಕರ್ನಾಟಕದ ಸ್ಟಾಲ್ ಗೆ ಕೂಡ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಎಸಿಎಸ್ ಗೌರವ್ ಗುಪ್ತಾ ರಿಂದ ಮಾಹಿತಿ ಪಡೆದುಕೊಂಡರು. ನಮ್ಮ ಕರ್ನಾಟಕದ ಇಂಧನ ಕ್ಷೇತ್ರದಲ್ಲಿ ಆಗಿರುವ ಮತ್ತು ಮುಂದೆ ಆಗಲಿರುವ ಸಾಧನೆಗಳ ಬಗ್ಗೆ ಗುಪ್ತಾ ಪ್ರಧಾನಿಗಳ ಮುಂದೆ ಪ್ರಸ್ತಾಪ ಮಾಡಿದರು. 

ಶಾಸಕ ಮುನಿರತ್ನ ಮಾತನಾಡಿರುವ ಆಡಿಯೋ ಫೇಕ್ ಬಗ್ಗೆ ಚರ್ಚೆ: ಸಂಸದ ರಾಘವೇಂದ್ರ

ದಶಕದಲ್ಲಿ ಅಸಾಧಾರಣ ಸಾಧನೆ: ನವೀಕರಿಸಬಹುದಾದ ಶಕ್ತಿ ಸಾಮರ್ಥ್ಯವು 75.52 ಗೀಗಾ ವ್ಯಾಟ್ ನಷ್ಟು  ಹೆಚ್ಚಾಗಿದೆ. ಮಾರ್ಚ್ 2014 ರಿಂದ ಈತನಕ 207.7 ಗೀಗಾ ವ್ಯಾಟ್ ಗೆ ಹೆಚ್ಚಳವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಹೇಳಿದರು. ಪ್ರಧಾನಿ ಸೂರ್ಯ ಘರ್ ಮುಫ್ತ್ ಬಿಜ್ಲಿ(ಇಂಧನ) ಯೋಜನೆಯಡಿ 3.3 ಲಕ್ಷ ಮಂದಿಗೆ ನೆರವು ಸಿಕ್ಕಿದೆ. 2030 ರ ವೇಳೆಗೆ 500 GW ನಮ್ಮ ಗುರಿ. ಹೊಂದಲಾಗಿದೆ ಎಂದರು.

click me!