ಕಲಮಶ್ಶೇರಿ ಬಾಂಬ್‌ ಸ್ಫೋಟ ಪ್ರಕರಣ: 2500 ಜನರಿದ್ದ ಕ್ರೈಸ್ತ ಭವನವನ್ನೇ ಸ್ಫೋಟಿಸಲು ಸಂಚು

By Kannadaprabha News  |  First Published Oct 31, 2023, 10:29 AM IST

ಮೂವರನ್ನು ಬಲಿಪಡೆದ ಭಾನುವಾರದ ಕಲಮಶ್ಶೇರಿ ಬಾಂಬ್‌ ಸ್ಫೋಟದ ಹಿಂದೆ ದೊಡ್ಡ ಸಂಚೇ ರೂಪಿಸಲಾಗಿತ್ತು. ಸಾವಿರಾರು ಜನರು ಸೇರಿದ್ದ ದೊಡ್ಡ ಸಮುದಾಯ ಭವನವನ್ನೇ ಸ್ಫೋಟಿಸುವ ಬೃಹತ್‌ ಯೋಜನೆಯನ್ನು ದಾಳಿಕೋರ ಡೊಮಿನಿಕ್‌ ಮಾರ್ಟಿನ್‌ (Dominic Martin) ಹಾಕಿಕೊಂಡಿದ್ದ ಎಂಬ ಸ್ಫೋಟಕ ವಿಷಯ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ.


ಎರ್ನಾಕುಲಂ: ಮೂವರನ್ನು ಬಲಿಪಡೆದ ಭಾನುವಾರದ ಕಲಮಶ್ಶೇರಿ ಬಾಂಬ್‌ ಸ್ಫೋಟದ ಹಿಂದೆ ದೊಡ್ಡ ಸಂಚೇ ರೂಪಿಸಲಾಗಿತ್ತು. ಸಾವಿರಾರು ಜನರು ಸೇರಿದ್ದ ದೊಡ್ಡ ಸಮುದಾಯ ಭವನವನ್ನೇ ಸ್ಫೋಟಿಸುವ ಬೃಹತ್‌ ಯೋಜನೆಯನ್ನು ದಾಳಿಕೋರ ಡೊಮಿನಿಕ್‌ ಮಾರ್ಟಿನ್‌ (Dominic Martin) ಹಾಕಿಕೊಂಡಿದ್ದ ಎಂಬ ಸ್ಫೋಟಕ ವಿಷಯ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಅದೃಷ್ಟವಶಾತ್‌ ಬಾಂಬ್‌ ಜೋಡಣೆಯಲ್ಲಿ ಮಾರ್ಟಿನ್‌ ಯಶಸ್ವಿಯಾಗಿದ್ದರೂ, ಅದು ಇನ್ನಷ್ಟು ತೀವ್ರತೆ ಪಡೆದುಕೊಳ್ಳುವಂತೆ ಮಾಡಲು ವಿಫಲವಾದ ಕಾರಣ ಸಾವಿರಾರು ಜನರ ಪ್ರಾಣ ಉಳಿದಿದೆ. ಭಾನುವಾರದ ಕಾರ್ಯಕ್ರಮ ನಡೆದ ಸ್ಥಳದಲ್ಲಿ 2500ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಭಾನುವಾರ ಬೆಳಗ್ಗೆ ಕ್ರೈಸ್ತ ಧರ್ಮಸಭೆಯಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟಕ್ಕೆ 4 ಐಇಡಿಗಳನ್ನು (IED) ಬಳಸಲಾಗಿತ್ತು. ಈ ದುಷ್ಕೃತ್ಯಕ್ಕಾಗಿ ಮಾರ್ಟಿನ್‌ ಆನ್‌ಲೈನ್‌ನಲ್ಲಿ ಬಾಂಬ್‌ ತಯಾರಿಕೆಯನ್ನು ಕಲಿತಿದ್ದ. 

ಕೋವಿಡ್ ಪರೀಕ್ಷೆ ವೇಳೆ ನೀಡಿದ 81.5 ಕೋಟಿ ಜನರ ವೈಯಕ್ತಿಕ ಮಾಹಿತಿ ಸೋರಿಕೆ?

Tap to resize

Latest Videos

ಸ್ಫೋಟಕಗಳಲ್ಲಿ ಪಟಾಕಿಯಲ್ಲಿ ಬಳಸಲಾಗುವ ರಾಸಾಯನಿಕ ಬಳಸಿದ್ದ. ಅಲ್ಲದೆ, ಬೆಂಕಿ ಬೇಗ ಎಲ್ಲೆಡೆ ವ್ಯಾಪಿಸಲು ಪೆಟ್ರೋಲ್‌ ಅನ್ನು ಕೂಡ ಆತ ಬಳಸಿದ್ದ ಹಾಗೂ ಐಇಡಿಯನ್ನು ಸೆಣಬಿನಿಂದ ಸುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಇದರಿಂದಾಗಿ ಇಡೀ ಸಭಾಂಗಣಕ್ಕೆ ಬೆಂಕಿ ಹಾಕುವ ಉದ್ದೇಶವನ್ನು ಆತ ಹೊಂದಿದ್ದ ಎಂದು ತಿಳಿದು ಬರುತ್ತದೆ ಎಂದು ತನಿಖಾಧಿಕಾರಿಗಳನ್ನು ಉಲ್ಲೇಖಿಸಿ ಟೀವಿ ವಾಹಿನಿಯೊಂದು ವರದಿ ಮಾಡಿದೆ.

ತನಿಖಾ ತಂಡಗಳು ಅಪರಾಧ ಸ್ಥಳದಿಂದ ಬ್ಯಾಟರಿಗಳು, ತಂತಿಗಳು, ಸರ್ಕ್ಯೂಟ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿವೆ. ಬಾಂಬ್ ಅನ್ನು ಜೋಡಿಸಿದ ಕಂಟೈನರ್ ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಸೋಮವಾರ, ಕನ್ವೆನ್ಷನ್ ಸೆಂಟರ್‌ನಲ್ಲಿನ ಅಪರಾಧದ ದೃಶ್ಯದ ಪರಿಶೀಲನೆ ಮಾಡಿದಾಗ ಪ್ರತಿ ಬಾಂಬ್‌ಗೆ ಪ್ಲಾಸ್ಟಿಕ್ ಪೌಚ್‌ಗಳಲ್ಲಿ ಕನಿಷ್ಠ 5 ಲೀಟರ್ ಪೆಟ್ರೋಲ್ ಅನ್ನು ಬಳಸಲಾಗಿದೆ ಎಂದು ತಿಳಿದುಬಂತು. ಐಇಡಿಗಳನ್ನು ಪ್ಯಾಕ್ ಮಾಡಲು ಸೆಣಬಿನ ಚೀಲಗಳನ್ನು ಬಳಸಲಾಗಿತ್ತು. ರೇಡಿಯೋ ಫ್ರೀಕ್ವೆನ್ಸಿ ಸಾಧನಗಳನ್ನು, ಸ್ಫೋಟವನ್ನು ಪ್ರಚೋದಿಸಲು ಉಪಯೋಗಿಸಲಾಗಿತ್ತು. ಮೊಬೈಲ್‌ ಮೂಲಕವೇ ರಿಮೋಟ್‌ ಬಳಸಿ ಬಾಂಬ್‌ ಸ್ಫೋಟಿಸಿದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಾಜಾ ನಗರದೊಳಗೆ ನುಗ್ಗಿ ನೆಲೆ ಸ್ಥಾಪಿಸಿದ ಇಸ್ರೇಲ್‌ ಸೈನಿಕರು: ಎಚ್ಚರಿಕೆ ಬಳಿಕ ತೀಕ್ಷ್ಣ ಭೂದಾಳಿ

ಐಇಡಿ ಪ್ಯಾಕ್ ಮಾಡಲಾದ ಸೆಣಬಿನ ಚೀಲವನ್ನು ನಿರ್ದಿಷ್ಟವಾಗಿ ಕುರ್ಚಿಗಳ ಕೆಳಗೆ ಬಟ್ಟೆಯಿಂದ ಮುಚ್ಚಲಾಗಿದ್ದು, ಅವು ವೇಗವಾಗಿ ಬೆಂಕಿಯನ್ನು ಹಿಡಿಯುತ್ತವೆ ಎಂದು ಮೂಲಗಳು ತಿಳಿಸಿವೆ. ಇದರ ಹಿಂದೆ ಇಡೀ ಸಮಾವೇಶ ಕೇಂದ್ರವನ್ನು ಸುಡುವ ಉದ್ದೇಶವಿತ್ತು ಎಂಬುದನ್ನು ದೃಢಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಸ್ಫೋಟದ ಹೊಣೆ ಹೊತ್ತಿರುವ ಪ್ರಕರಣದ ಪ್ರಮುಖ ಶಂಕಿತ ಡೊಮಿನಿಕ್ ಮಾರ್ಟಿನ್ ತನ್ನ ಮನೆಯಲ್ಲಿ ಐಇಡಿಗಳನ್ನು ಜೋಡಿಸಿ ಮತ್ತು ಬಾಂಬ್ ತಯಾರಿಕೆ ಕಲಿಯಲು ಇಂಟರ್ನೆಟ್ ಬಳಸಿದ್ದಾನೆ ಎಂದು ಗೊತ್ತಾಗಿದೆ. ಆತ ಗಲ್ಫ್‌ನಲ್ಲಿ (Gulf) ತಾಂತ್ರಿಕ ಕೆಲಸ ಮಾಡುತ್ತಿದ್ದ. ಆತನಿಗೆ ಯಂತ್ರಗಳ ಬಗ್ಗೆ ಮೂಲಭೂತ ಜ್ಞಾನವಿತ್ತು. ಉಳಿದಿದ್ದನ್ನು ಆನ್‌ಲೈನ್‌ನಲ್ಲಿ ಕಲಿತುಕೊಂಡ ಎಂದು ವಿಚಾರಣೆ ವೇಳೆ ಗೊತ್ತಾಗಿದೆ ಎಂದಿದ್ದಾರೆ.

click me!