ಅಯೋಧ್ಯೆ ಗೋಶಾಲೆಗಳ ಹಸುಗಳಿಗೆ ಚಳಿ ತಡೆಯಲು ವಿಶೇಷ ಸೆಣಬಿನ ಕೋಟ್‌!

By Web Desk  |  First Published Nov 25, 2019, 8:04 AM IST

ಅಯೋಧ್ಯೆ ಗೋಶಾಲೆಗಳ ಹಸುಗಳಿಗೆ ಚಳಿ ತಡೆಯಲು ವಿಶೇಷ ಸೆಣಬಿನ ಕೋಟ್‌!| ಗೋಶಾಲೆಯಲ್ಲಿನ ಹಸುಗಳ ರಕ್ಷಣೆಗಾಗಿ 3-4 ಹಂತದಲ್ಲಿ ಈ ಯೋಜನೆ ಜಾರಿ 


ಅಯೋಧ್ಯೆ[ನ.25]: ನಗರದ ವಿವಿಧೆಡೆ ಇರುವ ಗೋಶಾಲೆಗಳ ಗೋವುಗಳನ್ನು ಮೈ ಕೊರೆಯುವ ಚಳಿಯಿಂದ ರಕ್ಷಿಸಲು ಅಯೋಧ್ಯೆ ಮಹಾನಗರ ಪಾಲಿಕೆ ಸೆಣಬಿನ ಕೋಟ್‌ಗಳ ಮೊರೆ ಹೋಗಲು ನಿರ್ಧರಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅಯೋಧ್ಯೆ ನಗರ ನಿಗಮದ ಆಯುಕ್ತ ನೀರಜ್‌ ಶುಕ್ಲಾ, ಗೋಶಾಲೆಯಲ್ಲಿನ ಹಸುಗಳ ರಕ್ಷಣೆಗಾಗಿ 3-4 ಹಂತದಲ್ಲಿ ಈ ಯೋಜನೆ ಜಾರಿ ಮಾಡಲಾಗುತ್ತದೆ. 700 ಎತ್ತುಗಳು ಸೇರಿದಂತೆ ಒಟ್ಟಾರೆ 1200 ಹಸುಗಳಿಗೆ ರಕ್ಷಣೆ ನೀಡುತ್ತಿರುವ ಬೈಶಿಂಗಪುರದಲ್ಲಿರುವ ಗೋಶಾಲೆಗೆ ಈ ಯೋಜನೆಯಡಿ ಸೆಣಬಿನ ಕೋಟ್‌ ಪೂರೈಸಲಾಗುತ್ತದೆ ಎಂದರು.

Tap to resize

Latest Videos

undefined

ಕರ್ನಾಟಕದ ಆಶ್ರಮವೊಂದರಲ್ಲಿವೆ ಅಯೋಧ್ಯೆ ರಾಮ-ಲಕ್ಷ್ಮಣ, ಸೀತಾ ಅಸಲಿ ವಿಗ್ರಹ!

ಅಲ್ಲದೆ, ಒಂದು ಕೋಟ್‌ಗೆ 250-300 ರು. ದರ ನಿಗದಿಯಾಗಿದ್ದು, ಹಸುಗಳು, ಕರು ಮತ್ತು ಎತ್ತುಗಳಿಗೆ ಪ್ರತ್ಯೇಕವಾದ ಕೋಟ್‌ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದಿದ್ದಾರೆ.

ಅಯೋಧ್ಯೆ: ಮುಸ್ಲಿಂ ಯುವಕನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹನುಮನ ಚಿತ್ರ!

click me!