ಕೇರಳ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಅನು ಶಿವರಾಮನ್ ಇದೀಗ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಗೊಂಡಿದ್ದಾರೆ. ಅನು ಶಿವರಾಮನ್ ಮನವಿಗೆ ಸ್ಪಂದಿಸಿದ ಸುಪ್ರೀಂ ಕೋರ್ಟ್ ಕೊಲಿಜಿಯಂ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಿದೆ.
ನವದೆಹಲಿ(ಮಾ.19) ಕೇರಳ ಹೈಕೋರ್ಟ್‌ನಿಂದ ನ್ಯಾಮೂರ್ತಿ ಅನು ಶಿವರಾಮನ್ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆಗೊಂಡಿದ್ದಾರೆ. ಸುಪ್ರೀಂ ಕೋರ್ಟ್ ಕೊಲಿಜಿಂ ಶಿಫರಸು ಪುರಸ್ಕರಿಸಿದ ಕೇಂದ್ರ ಸರ್ಕಾರ, ಇದೀಗ ಅನು ಶಿವರಾಮನ್ ಅವರನ್ನು ಕೇರಳದಿಂದ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆಗೊಳಿಸುವಂತೆ ಅಧಿಸೂಚನೆ ಹೊರಡಿಸಿದೆ.
ವೈಯುಕ್ತಿ ಕಾರಣಗಳಿಂದ ಕೇರಳ ಹೈಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಬೇಕು ಎಂದು ನ್ಯಾಯಮೂರ್ತಿ ಅನು ಶಿವರಾಮನ್ 2023ರ ಅಕ್ಟೋಬರ್‌ನಲ್ಲಿ ಮನವಿ ಮಾಡಿದ್ದರು. ಸುಪ್ರೀಂ ಕೋರ್ಟ್ ಕೊಲಿಜಿಯಂಗೆ ಸಲ್ಲಿಸಿದ್ದ ಮನವಿಯಿಂದ ಇದೀಗ ವರ್ಗಾವಣೆ ಮಾಡಲಾಗಿದೆ. ಅನು ಶಿವರಾಮನ್ ಅವರ ಅರ್ಜಿ ಸ್ವೀಕರಿಸಿದ ಸುಪ್ರೀಂ ಕೋರ್ಟ್ ಕೊಲಿಜಿಂಯ ನ್ಯಾಯಮೂರ್ತಿಗಳ ವರ್ಗಾವಣೆ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
60% ಕನ್ನಡ ಫಲಕ ಇಲ್ಲವೆಂದು ಮಳಿಗೆ ಮುಚ್ಚಬೇಡಿ: ಹೈಕೋರ್ಟ್
ವೈಯಕ್ತಿಕ ಕಾರಣಕ್ಕಾಗಿ ವರ್ಗಾವಣೆ ಬಯಸಿದ್ದ ನ್ಯಾ।ಅನು ಶಿವರಾಮನ್ ಹಾಗೂ ಕಲ್ಕತ್ತಾ ಹೈಕೋರ್ಟ್‌ನ ನ್ಯಾ।ಮೌಶುಮಿ ಭಟ್ಟಾಚಾರ್ಯ ಅವರನ್ನು ಕ್ರಮವಾಗಿ ಕರ್ನಾಟಕ ಮತ್ತು ತೆಲಂಗಾಣ ಹೈಕೋರ್ಟ್‌ಗೆ ವರ್ಗಾವಣೆ ಮಾಡಲು ಶಿಫಾರಸು ಮಾಡಲಾಗಿತ್ತು. ಇನ್ನು ತಮ್ಮ ಪುತ್ರ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ವಕೀಲನಾಗಿರುವ ಕಾರಣ ನ್ಯಾ।ಸುಜಯ್ ಪೌಲ್ ವರ್ಗಾವಣೆ ಬಯಸಿದ್ದರು. ಇವರನ್ನು ಸಹ ತೆಲಂಗಾಣ ಹೈಕೋರ್ಟ್‌ಗೆ ವರ್ಗಾವಣೆ ಮಾಡುವಂತೆ ಕೊಲಿಜಿಯಂ ಸೂಚಿಸಿತ್ತು. ಇದರಂತೆ ಕೇಂದ್ರ ಸರ್ಕಾರ ಇದೀಗ ನ್ಯಾಯಮೂರ್ತಿಗಳ ವರ್ಗಾವಣೆ ಆದೇಶ ಹೊರಡಿಸಿದೆ.
ಎಪ್ರಿಲ್ 10, 2015ರಲ್ಲಿ ಅನು ಶಿವರಾಮವನ್ ಅವರನ್ನು ಕೇರಳ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು. 2017ರಲ್ಲಿ ಖಾಯಂ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿತ್ತು. 2001ರಿಂದ 2007ರ ವರೆಗೆ ನಿಗಮ ಸ್ಥಾಯಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.