ಮಕ್ಕಳೇ ಆರೋಗ್ಯವಾಗಿರಿ! ಶಾಲೆ ಸುತ್ತಮುತ್ತ ಜಂಕ್‌ ಫುಡ್‌ ನಿಷೇಧ

By Kannadaprabha NewsFirst Published Nov 6, 2019, 7:59 AM IST
Highlights

ಶಾಲೆ, ಸುತ್ತಮುತ್ತ ಜಂಕ್‌ ಫುಡ್‌ ನಿಷೇಧ | ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ |  2020ರ ಜೂನ್‌ ಒಳಗೆ ಎಲ್ಲ ಕಡೆ ಜಾರಿ |  ಹೀಗಾಗಿ ಶಾಲೆಯ ಸುತ್ತಮುತ್ತ ಚಿಫ್ಸ್‌, ನೂಡಲ್ಸ್‌, ಕೋಲಾ ಮಾರುವಂತಿಲ್ಲ

ನವದೆಹಲಿ (ನ. 06): ಶಾಲೆಗಳ ಸುತ್ತ ಚಿಫ್ಸ್‌, ಬರ್ಗರ್‌ ಅಥವಾ ನೂಡಲ್ಸ್‌ನಂತಹ ಕುರುಕಲು ತಿಂಡಿ (ಜಂಕ್‌ ಫುಡ್‌) ಮಾರಾಟವನ್ನು ನಿಷೇಧಿಸುವ ಕರಡು ನಿಯಮಗಳಿಗೆ ಅನುಮೋದನೆ ನೀಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಇದರಿಂದಾಗಿ ಶಾಲಾ ಕ್ಯಾಂಪಸ್‌ ಹಾಗೂ ಸುತ್ತಮುತ್ತ ಕುರುಕಲು ತಿಂಡಿ ಮಾರಾಟ ಮಾರಾಟ ಮಾಡುವಂತಿಲ್ಲ. ಶಾಲಾ ಕ್ಯಾಂಪಸ್‌ ಸುತ್ತಲಿನ 50 ಮೀಟರ್‌ ವ್ಯಾಪ್ತಿಯಲ್ಲಿ ಜಂಕ್‌ ಫುಡ್‌ನ ಅಪಾಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಜಾಹೀರಾತುಗಳನ್ನು ಹಾಕುವುದು ಕಡ್ಡಾಯವಾಗಲಿದೆ. ಶಾಲಾ ಕ್ಯಾಂಟೀನ್‌ ಹಾಗೂ ಹಾಸ್ಟೆಲ್‌ಗಳಲ್ಲಿ ಕೂಡ ಕಡ್ಡಾಯವಾಗಿ ಜಂಕ್‌ ಫುಡ್‌ ಅಪಾಯ ವಿವರಿಸುವ ಜಾಹೀರಾತು ಹಾಕಬೇಕು.
1 ದಿನ ಬೆಂಗಳೂರಿನಾದ್ಯಂತ ಮದ್ಯ ಮಾರಾಟ ಬಂದ್..!

ಕಮ್ಮಿ ಪೋಷಕಾಂಶ ಹೊಂದಿದ ಫ್ರೈಗಳು, ತಂಪು ಪಾನೀಯಗಳು, ಚಿಫ್ಸ್‌ ತಯಾರಿಕಾ ಕಂಪನಿಗಳ ಪ್ರಾಯೋಜಕತ್ವವನ್ನು ಯಾವುದೇ ಶಾಲಾ ಸಮಾರಂಭಗಳು ಹಾಗೂ ಕ್ರೀಡಾಕೂಟಗಳ ಸಂದರ್ಭದಲ್ಲಿ ನಿಷೇಧಿಸಲಾಗುತ್ತದೆ.

‘ಜಂಕ್‌ ಫುಡ್‌ನಲ್ಲಿ ಕೊಬ್ಬು, ಅತಿಯಾದ ಉಪ್ಪಿನ ಅಂಶ ಹಾಗೂ ಸಕ್ಕರೆ ಅಂಶ ಇರ್ತುತದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗಿ ಕೊಬ್ಬು ಹೆಚ್ಚಾಗುತ್ತದೆ. ಇದರ ಬದಲು ಪೌಷ್ಟಿಕ ಮಧ್ಯಾಹ್ನದ ಬಿಸಿಯೂಟ ಉತ್ತಮ’ ಎಂದು ಆಹಾರ ತಜ್ಞರೊಬ್ಬರು ಹೇಳಿದ್ದಾರೆ..

ಈ ಆದೇಶಗಳನ್ನು ಮುಂದಿನ ಶೈಕ್ಷಣಿಕ ಆರಂಭ ಮಾಸವಾದ 2020ರ ಜೂನ್‌ ಒಳಗೆ ಜಾರಿ ಮಾಡಲು ತೀರ್ಮಾನಿಸಲಾಗಿದೆ. ಸರ್ಕಾರಿ ಆಹಾರ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಆದೇಶವು ಜಾರಿಗೆ ಬಂದಿದೆಯೇ ಎಂಬುದನ್ನು ಪರಿಶೀಲಿಸಲಿದ್ದಾರೆ.

click me!