ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೊರೋನಾ ಲಸಿಕೆ ಪ್ರಯೋಗ ಸ್ಥಗಿತ!

Published : Oct 14, 2020, 02:39 PM ISTUpdated : Oct 14, 2020, 02:42 PM IST
ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೊರೋನಾ ಲಸಿಕೆ ಪ್ರಯೋಗ ಸ್ಥಗಿತ!

ಸಾರಾಂಶ

ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೊರೋನಾ ಲಸಿಕೆ ಪ್ರಯೋಗ ಸ್ಥಗಿತ| ಲಸಿಕೆ ಪ್ರಯೋಗಕ್ಕೆ ಒಳಗಾದ ಒಬ್ಬರಿಗೆ ಅನಾರೋಗ್ಯ| ಲಸಿಕೆಯಿಂದಲೇ ಅಸ್ವಾಸ್ಥ್ಯವೋ, ಅನ್ಯ ಕಾರಣಕ್ಕೋ ಎಂಬ ಸ್ಪಷ್ಟತೆ ಇಲ್ಲ| ಈ ಬಗ್ಗೆ ಅಧ್ಯಯನ ನಡೆಸಲು ಜಾನ್ಸನ್‌ ನಿರ್ಧಾರ| ಅಲ್ಲಿಯವರೆಗೆ ಪ್ರಯೋಗ ಸ್ಥಗಿತ

ನ್ಯೂ ಬನ್ಸ್‌ರ್‍ವಿಕ್‌ (ಅ.14): ಅಮೆರಿಕದಲ್ಲಿ ನಡೆಯುತ್ತಿರುವ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪನಿ ಆರಂಭಿಸಿದ್ದ ಕೊರೋನಾ ವೈರಸ್‌ ಸಿಂಗಲ್‌ ಡೋಸ್‌ ಲಸಿಕೆಯ ಕೊನೆಯ ಹಂತದ ಪ್ರಯೋಗವನ್ನು ಹಠಾತ್ತನೇ ಸ್ಥಗಿತಗೊಂಡಿದೆ.

ಲಸಿಕೆ ಪ್ರಯೋಗಕ್ಕೆ ಒಳಪಟ್ಟವರಲ್ಲಿ ಒಬ್ಬರು ಏಕಾಏಕಿ ಅಸ್ವಸ್ಥರಾಗಿದ್ದಾರೆ. ಆದರೆ ಅವರು ಲಸಿಕೆಯ ಅಡ್ಡಪರಿಣಾಮದಿಂದ ಅಸ್ವಸ್ಥರಾದರೋ ಅಥವಾ ಬೇರೆ ಕಾರಣಕ್ಕೋ ಎಂಬುದು ಪರೀಕ್ಷೆಯ ಬಳಿಕವಷ್ಟೇ ತಿಳಿದುಬರಬೇಕಿದೆ. ಈ ಕುರಿತಾದ ಅಧ್ಯಯನ ನಡೆಸಲು ನಿರ್ಧರಿಸಲಾಗಿದ್ದು, ಅಲ್ಲಿಯವರೆಗೂ ಲಸಿಕೆ ಪ್ರಯೋಗವನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ತಿಳಿಸಿದೆ.

ಇತ್ತೀಚೆಗೆ ಕೊನೆಯ ಹಂತದ ಆಸ್ಟ್ರಾಜೆನೆಕಾ ಹಾಗೂ ಆಕ್ಸಫರ್ಡ್‌ ವಿವಿ ಲಸಿಕೆ ಪ್ರಯೋಗವೂ ಅಮೆರಿಕದಲ್ಲಿ ಸ್ಥಗಿತಗೊಂಡಿತ್ತು. ಲಸಿಕೆ ಪಡೆದವರು ಅನಾರೋಗ್ಯಕ್ಕೆ ಒಳಗಾಗಿದ್ದೇ ಇದಕ್ಕೆ ಕಾರಣವಾಗಿತ್ತು.

ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಅಮೆರಿಕ ಹಾಗೂ ಇತರ ದೇಶಗಳಲ್ಲಿ 60 ಸಾವಿರ ಜನರ ಮೇಲೆ ಸಿಂಗಲ್‌ ಡೋಸ್‌ ಲಸಿಕೆ ಪ್ರಯೋಗ ಆರಂಭಿಸಿದೆ. ಅಮೆರಿಕದ ಇತರ ಲಸಿಕೆ ಪ್ರಯೋಗಗಳು 2 ಡೋಸ್‌ ಲಸಿಕೆಗಳಾಗಿದ್ದರೆ, ಜಾನ್ಸನ್‌ ಲಸಿಕೆ ಸಿಂಗಲ್‌ ಡೋಸ್‌ನದ್ದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಾಟ್ಸಾಪ್ ಬಳಕೆದಾರರೇ ಎಚ್ಚರ: ಈ ಮೂರು ತಪ್ಪುಗಳು ಮಾಡಿದ್ರೆ ಜೈಲು ಪಾಲಾಗೋದು ಫಿಕ್ಸ್!
10 ಸಾವಿರವಲ್ಲ, 1 ಲಕ್ಷ ಕೊಟ್ರೂ ಮುಸ್ಲಿಮರು ನನಗೆ ವೋಟ್‌ ಹಾಕೋದಿಲ್ಲ: ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮ