ರಾವಣ ಜೊತೆ ಉಮರ್ ಖಾಲಿದ್ ಫೋಟೋ ದಹನ, JNU ದುರ್ಗಾ ವಿಸರ್ಜನೆ ವೇಳೆ ಮಾರಾಮಾರಿ

Published : Oct 02, 2025, 11:06 PM IST
JNU Delhi

ಸಾರಾಂಶ

ರಾವಣ ಜೊತೆ ಉಮರ್ ಖಾಲಿದ್ ಫೋಟೋ ದಹನ, ಜೆನ್‌ಯುನಲ್ಲಿ ದುರ್ಗಾ ವಿಸರ್ಜನೆ ವೇಳೆ ಮಾರಾಮಾರಿ, ತುಕ್ಡೆ ತುಕ್ಡೆ ಗ್ಯಾಂಗ್ ಎಂದೇ ಗುರುತಿಸಿಕೊಂಡಿದ್ದ ಹಲವರ ಫೋಟೋವನ್ನು ರಾವಣ ಪ್ರತಿಕೃತಿ ಜೊತೆ ದಹನ ಮಾಡಿದ್ದೇ ಈ ಮಾರಾಮಾರಿಗೆ ಕಾರಣವಾಗಿದೆ. 

ನವದೆಹಲಿ (ಅ.02) ದೆಹಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯ ಹಲವು ಕಾರಣಗಳಿಂದ ಸದಾ ಸುದ್ದಿಯಲ್ಲಿರುತ್ತದೆ. ಇದೀಗ ಎಬಿವಿಪಿ ಹಾಗೂ ಎಸ್ಎಫ್ಆ, ಡಿಎಸ್ಆಫ್, ಎಐಎಸ್ಎ ಸಂಘಟನೆಗಳ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ. ಜೆಎನ್‌ಯು ವಿಶ್ವವಿದ್ಯಾಲಯದ ದುರ್ಗಾ ಮೂರ್ತಿ ವಿಸರ್ಜನೆಯಲ್ಲಿ ಭಾರಿ ವಿವಾದ ಶುರುವಾಗಿದ್ದು, ಎರಡು ಗುಂಪುಗಳ ನಡುವೆ ಜಗಳಕ್ಕೆ ಕಾರಣವಾಗಿದೆ. ಹಾಸ್ಟೆಲ್ ಬಳಿ ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳು ದಸರಾ ಸಂಭ್ರಮಾಚರಣೆ ಮಾಡಿದ್ದಾರೆ. ರಾವಣ ಪ್ರತಿಕೃತಿ ದಹನ ಜೊತೆ ಟುಕ್ಡೆ ಟುಕ್ಡೆ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ಉಮರ್ ಖಾಲಿದ್ ಸೇರಿದಂತೆ ಹಲವರ ಫೋಟೋಗಳನ್ನು ದಹ ಮಾಡಲಾಗಿತ್ತು. ಇದರಿಂದ ವಿವಾದ ಸೃಷ್ಟಿಯಾಗಿ ದಾಳಿ ಮಾಡಲಾಗಿದೆ.

ರಾವಣ ಪ್ರತಿಕೃತಿ ದಹನ ವಿವಾದ

ಜೆಎನ್‌ಯು ವಿಶ್ವವಿದ್ಯಾಲದ ಬಾರಕ್ ಹಾಸ್ಟೆಲ್ ಆವರಣದಲ್ಲಿ ಎಬಿವಿಪಿ ವಿದ್ಯಾರ್ಥಿ ಸಂಘಟನೆ ವಿದ್ಯಾರ್ಥಿಗಳು ದಸರಾ ಆಚರಿಸಿದ್ದಾರೆ. ರಾವಣ ಪ್ರತಿಕೃತಿ ದಹನ ಮಾಡಿದ್ದಾರೆ. ಆದರೆ ರಾವಣ ಹತ್ತು ತಲೆಗಳ ಪೈಕಿ ಒಂದೊಂದು ತಲೆಗೆ ಒಬ್ಬೊಬ್ಬರ ಫೋಟೋ ಅಂಟಿಸಲಾಗಿತ್ತು. ಸಂಸತ್ತಿನ ಮೇಲೆ ದಾಳಿ ಮಾಡಿದ ಅಫ್ಜಲ್ ಗುರು, ಟುಕ್ಡೆ ಟುಕ್ಡೆ ಗ್ಯಾಂಗ್ ಸದಸ್ಯರಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಚಾರು ಮಜುಮ್ದಾರ್, ಕಾನು ಸನ್ಯಾಲ್ ಸೇರಿದಂತೆ ಕೆಲವರ ಪೋಟೋ ಇಟ್ಟು ದಹನ ಮಾಡಲಾಗಿತ್ತು. ಇದು ವಿವಾದವಾಗಿತ್ತು.

ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದಾಳಿ

ಎಬಿವಿಪಿ ವಿದ್ಯಾರ್ಥಿಗಳು ದುರ್ಗಾ ವಿಸರ್ಜನೆ ವೇಳೆ ಎಸ್ಎಫ್ಐ ಸೇರಿದಂತೆ ಕೆಲ ಸಂಘಟನೆಗಳ ವಿದ್ಯಾರ್ಥಿಗಳು ದಾಳಿ ಮಾಡಿದ್ದಾರೆ ಎಂದು ಎಬಿವಿಪಿ ಆರೋಪಿಸಿದೆ. ಮಾರಾಮಾರಿ ನಡೆದಿದ್ದು, ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಎರಡೂ ಗುಂಪಿನ ನಡುವೆ ತೀವ್ರ ಗುದ್ದಾಟ ನಡೆದಿದೆ.

 

 

ಘಟನೆ ಕುರಿತು ಪ್ರಕಟಣೆ ಹೊರಡಿಸಿದ ಎಬಿವಿಪಿ

ವಿಜಯದಶಮಿ ದಿನ ರಾವಣ ಪ್ರತಿಕೃತಿ ದಹಿಸಲಾಗುತ್ತದೆ. ಶ್ರೀರಾಮ ದುಷ್ಟ ಶಕ್ತಿಗಳ ವಿರುದ್ದ ಗೆಲುವು ಸಾಧಿಸಿ ವಿಜಯಿಯಾಗಿ ಮರಳಿದ ದಿನ. ಇದೇ ರೀತಿ ಇಂದು ರಾವಣನ ಪ್ರತಿಕೃತಿ ಜೊತೆಗೆ ನಕ್ಸಲಿಸಂ, ಎಡಪಂಥೀಯ, ಮಾವುವಾದಿ ಹಿಂಸಾಚಾರ, ಭಾರತ ವಿರೋಧಿ ಚಿಂತನೆಗಳು, ದುಷ್ಠ ಶಕ್ತಿಗಳನ್ನು ದಹನ ಮಾಡಿದ್ದೇವೆ. ಭಾರತ ವಿರೋಧಿ ಶಕ್ತಿಗಳನ್ನು ದಹನ ಮಾಡಿ, ದೇಶ ಕಟ್ಟುವ ಸಂಕಲ್ಪದೊಂದಿಗೆ ಹಬ್ಬ ಆಚರಿಸಿದ್ದೇವೆ. ಇದೇ ವಿಶ್ವವಿದ್ಯಾಲಯದ ಆವರಣದಲ್ಲಿ ಭಗವಾನ್ ಶ್ರೀರಾಮನನ್ನು ಅವಮಾನಿಸಲಾಗಿತ್ತು ಎಂದು ಜೆಎನ್‌ಯು ಸ್ಟೂಡೆಂಟ್ ಯೂನಿಯನ್ ಕಾರ್ಯದರ್ಶಿ ಹೇಳಿದ್ದಾರೆ. ವಿಜಯದಶಮಿ ದಿನವನ್ನು ಟುಕ್ಡೆ ಟುಕ್ಡೆ ಗ್ಯಾಂಗ್ ವಿರುದ್ದ ಆಚರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ