
ನವದೆಹಲಿ (ಆ.30): ಎಂಟು ವರ್ಷಗಳ ಹಿಂದೆ ಪ್ರಾರಂಭವಾದ ಜಿಯೋ ಕಂಪನಿ ಇದೀಗ ಜಗತ್ತಿನ ನಂ.1 ಮೊಬೈಲ್ ಡೇಟಾ ಕಂಪನಿಯಾಗಿ ಹೊರಹೊಮ್ಮಿದೆ. ಜಿಯೋ ಬಳಿ ಈಗ 49 ಕೋಟಿ ಗ್ರಾಹಕರಿದ್ದು, ಇವರು ಮಾಸಿಕ ಸರಾಸರಿ 30 ಜಿ.ಬಿ. ಡೇಟಾ ಬಳಕೆ ಮಾಡುತ್ತಿದ್ದಾರೆ. ಗುರುವಾರ ನಡೆದ ರಿಲಯನ್ಸ್ ಇಂಡಸ್ಟ್ರೀಸ್‌ನ 47ನೇ ವಾರ್ಷಿಕ ಸಭೆಯಲ್ಲಿ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಈ ವಿಷಯ ತಿಳಿಸಿದರು.
ಭಾರತವೀಗ ಜಗತ್ತಿನ ಅತಿದೊಡ್ಡ ಮೊಬೈಲ್ ಡೇಟಾ ಮಾರುಕಟ್ಟೆಯಾಗಿದ್ದು, ಜಿಯೋ ಕಂಪನಿಯು ಜಗತ್ತಿನ ಮೊಬೈಲ್ ಟ್ರಾಫಿಕ್‌ನಲ್ಲಿ ಶೇ.8ರಷ್ಟು ಪಾಲು ಹೊಂದಿದೆ. ಜಗತ್ತಿನ ದೊಡ್ಡ ದೊಡ್ಡ ಟೆಲಿಕಾಂ ಕಂಪನಿಗಳನ್ನು ಜಿಯೋ ಹಿಂದಿಕ್ಕಿದೆ ಎಂದು ಹೇಳಿದರು. ಜಿಯೋ ಗ್ರಾಹಕರು ತಿಂಗಳಿಗೆ ಸರಾಸರಿ 30 ಜಿ.ಬಿ. ಡೇಟಾ ಬಳಕೆ ಮಾಡುತ್ತಾರೆ. 5ಜಿ ಹಾಗೂ 6ಜಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಜಿಯೋ 350 ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸಿದೆ ಎಂದೂ ತಿಳಿಸಿದರು.
100 ಜಿಬಿ ಉಚಿತ ಎಐ ಕ್ಲೌಡ್ ಸ್ಪೇಸ್: ಕೃತಕ ಬುದ್ಧಿಮತ್ತೆ (ಎಐ) ಹಾಗೂ ಕ್ಲೌಡ್ ಸೇವೆಗಳು ಜನಸಾಮಾನ್ಯರಿಗೂ ಲಭಿಸುವಂತೆ ಮಾಡಲು ರಿಲಯನ್ಸ್ ಸಮೂಹದ ಜಿಯೋ ಕಂಪನಿ ತನ್ನ ಎಲ್ಲ ಗ್ರಾಹಕರಿಗೆ 100 ಜಿ.ಬಿ.ವರೆಗಿನ ಎಐ-ಕ್ಲೌಡ್ ಸ್ಟೋರೇಜನ್ನು ಉಚಿತವಾಗಿ ನೀಡುವುದಾಗಿ ಪ್ರಕಟಿಸಿದೆ. ಗುರುವಾರ ನಡೆದ ರಿಲಯನ್ಸ್ ಇಂಡಸ್ಟ್ರೀಸ್‌ನ ವಾರ್ಷಿಕ ಸಭೆಯಲ್ಲಿ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಈ ವಿಷಯ ಪ್ರಕಟಿಸಿದರು.
ಬಿಜೆಪಿಗರು, ಆರೆಸ್ಸೆಸ್ ವಿರುದ್ಧ ರಾಜ್ಯ ಸರ್ಕಾರ ಕೆಐಎಡಿಬಿ ಭೂ ಪ್ರತ್ಯಸ್ತ್ರ: ಸಚಿವ ಎಂ.ಬಿ.ಪಾಟೀಲ್
ಜಿಯೋ ಎಐ-ಕ್ಲೌಡ್ ಸೇವೆಯನ್ನು ಬಳಸಿಕೊಂಡು ಜಿಯೋ ಗ್ರಾಹಕರು 100 ಜಿ.ಬಿ.ಯಷ್ಟು ಫೋಟೋಗಳು, ವಿಡಿಯೋಗಳು, ದಾಖಲೆಗಳು ಹಾಗೂ ಡಿಜಿಟಲ್ ಕಂಟೆಂಟ್‌ಗಳನ್ನು ಉಚಿತವಾಗಿ ತಮ್ಮ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನ ಹೊರಗೆ ಇಂಟರ್ನೆಟ್‌ನಲ್ಲೇ ಸೇವ್ ಮಾಡಿ ಇರಿಸಿಕೊಂಡು, ಬೇಕೆಂದಾಗ ಬಳಸಿಕೊಳ್ಳಬಹುದು. ದೀಪಾವಳಿಯಿಂದ ಈ ಸೇವೆ ಎಲ್ಲಾ ಜಿಯೋ ಗ್ರಾಹಕರಿಗೂ ಲಭ್ಯವಾಗಲಿದೆ ಎಂದು ತಿಳಿಸಿದರು. ಎಐ ತಂತ್ರಜ್ಞಾನ ಬಳಸಲು ಹೆಚ್ಚು ಸ್ಪೇಸ್ ಬೇಕಾಗುತ್ತದೆ. ಇದನ್ನು ಜಿಯೋ ಕ್ಲೌಡ್ ನೀಡಲಿದೆ. ಅಲ್ಲಿಂದ ಸಾಮಾನ್ಯ ಜಿಯೋ ಗ್ರಾಹಕರೂ ಎಐ ತಂತ್ರಜ್ಞಾನದ ಲಾಭ ಪಡೆಯಬಹುದು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ