ಸ್ಪೆಕ್ಟ್ರಂ ಹರಾಜು: ಜಿಯೋದಿಂದ ಅತ್ಯಧಿಕ 57122 ಕೋಟಿ ರೂ. ಸ್ಪೆಕ್ಟ್ರಂ ಖರೀದಿ!

By Kannadaprabha News  |  First Published Mar 3, 2021, 8:20 AM IST

ಕಳೆದ ಐದು ವರ್ಷದಲ್ಲಿ ಮೊದಲ ಬಾರಿ ನಡೆದ ದೂರವಾಣಿ ತರಂಗಾಂತರ (ಸ್ಪೆಕ್ಟ್ರಂ) ಹರಾಜು| ಜಿಯೋದಿಂದ ಅತ್ಯಧಿಕ .57122 ಕೋಟಿ ಸ್ಪೆಕ್ಟ್ರಂ ಖರೀದಿ


ನವದೆಹಲಿ(ಮಾ.03): ಕಳೆದ ಐದು ವರ್ಷದಲ್ಲಿ ಮೊದಲ ಬಾರಿ ನಡೆದ ದೂರವಾಣಿ ತರಂಗಾಂತರ (ಸ್ಪೆಕ್ಟ್ರಂ) ಹರಾಜು 2 ದಿನಗಳ ಪ್ರಕ್ರಿಯೆ ಮಂಗಳವಾರ ಮುಕ್ತಾಯಗೊಂಡಿದ್ದು, ಸರ್ಕಾರವು 77,814.80 ಕೋಟಿ ರು. ಮೌಲ್ಯದ ಸ್ಪೆಕ್ಟ್ರಂ ಹರಾಜು ಹಾಕಿದೆ.

ಈ ಪೈಕಿ ಮುಕೇಶ್‌ ಅಂಬಾನಿ ಅವರ ರಿಲಯನ್ಸ್‌ ಜಿಯೋ ಅತಿ ಹೆಚ್ಚು ಎಂದರೆ 57,122 ಕೋಟಿ ರು. ಮೌಲ್ಯದ ತರಂಗಾಂತರಗಳನ್ನು ಖರೀದಿಸಿದೆ. ನಂತರದ ಸ್ಥಾನವನ್ನು ವೊಡಾಫೋನ್‌-ಐಡಿಯಾ ಪಡೆದಿದ್ದು, 1,993.40 ರು. ಮೊತ್ತದ ಸ್ಪೆಕ್ಟ್ರಂ ಖರೀದಿ ಮಾಡಿದೆ. ಒಟ್ಟಾರೆ 2,250 ಮೆಗಾ ಹಟ್‌್ರ್ಜ ತರಂಗಾಂತರ ಹರಾಜು ಹಾಕಲು ನಿರ್ಧರಿಸಲಾಗಿತ್ತು. ಇವುಗಳ ಮೌಲ್ಯ 4 ಲಕ್ಷ ಕೋಟಿ ರು. ಆಗಿತ್ತು.

Tap to resize

Latest Videos

900, 1800, 2100 ಹಾಗೂ 2300 ಮೆಗಾ ಹಟ್‌್ರ್ಜ ಬ್ಯಾಂಡ್‌ ಖರೀದಿಗೆ ಕಂಪನಿಗಳು ಆಸಕ್ತಿ ತೋರಿದವು. ಆದರೆ 700 ಹಾಗೂ 2500 ಮೆಗಾ ಹಟ್‌್ರ್ಜ ತರಂಗಾಂತರ ಖರೀದಿಗೆ ಯಾರೂ ಮುಂದೆ ಬರಲಿಲ್ಲ.

click me!