Breaking: ಜಾರ್ಖಂಡ್‌ನಲ್ಲಿ ಭೀಕರ ದುರಂತ, ರೈಲು ಹರಿದು 12 ಜನರ ದಾರುಣ ಸಾವು!

By Santosh NaikFirst Published Feb 28, 2024, 8:39 PM IST
Highlights

ಜಾರ್ಖಂಡ್‌ನ ಜಮ್ತಾರಾದಲ್ಲಿ ಭೀಕರ ದುರಂತ ಸಂಭವಿಸಿದ್ದು, ರೈಲು ಹರಿದು 12 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 

ರಾಂಚಿ (ಫೆ.28): ಜಾರ್ಖಂಡ್‌ನ ಜಮ್ತಾರಾದಲ್ಲಿ ಭಾರೀ ರೈಲು ಅಪಘಾತ ಸಂಭವಿಸಿದೆ. ಸಾಕಷ್ಟು ಸಾವಿ ನೋವಿನ ಬಗ್ಗೆ ವರದಿಯಾಗಿದ್ದು, ಹೆಚ್ಚಿನ ಮೂಲಗಳ ಪ್ರಕಾರ ಕನಿಷ್ಠ 12 ಮಂದಿ ಸಾವು ಕಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಘಟನೆ ನಡೆದ ಬೆನ್ನಲ್ಲಿಯೇ ಜಮ್ತಾರಾ ಜಲ್ಲಾಧಿಕಾರಿ ಸ್ಥಳಕ್ಕೆ ಧಾವಿಸಿದ್ದಾರೆ. , 'ಜಮ್ತಾರಾದ ಕಾಲಜಾರಿಯಾ ರೈಲು ನಿಲ್ದಾಣದಲ್ಲಿ ರೈಲು ಅನೇಕ ಪ್ರಯಾಣಿಕರ ಮೇಲೆ ಹರಿದಿದೆ. ಕೆಲವು ಸಾವುಗಳು ವರದಿಯಾಗಿವೆ. ಸಾವಿನ ನಿಖರ ಸಂಖ್ಯೆಯನ್ನು ನಂತರ ದೃಢೀಕರಿಸಲಾಗುವುದು. ವೈದ್ಯಕೀಯ ತಂಡಗಳು ಮತ್ತು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ತಲುಪಿವೆ ಎಂದು ತಿಳಿಸಿದ್ದಾರೆ. ಬುಧವಾರ ಸಂಜೆ ಜಾರ್ಖಂಡ್‌ನ ಜಮ್ತಾರಾ-ಕರ್ಮತಾಂಡ್ ಪ್ರದೇಶದ ಕಾಲಜಾರಿಯಾ ಬಳಿ ರೈಲಿನ ಅಡಿಗೆ ಸಿಕ್ಕು ಹಲವು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ.  ಎಷ್ಟು ಪ್ರಮಾಣದ ಸಾವುನೋವುಗಳು ಮತ್ತು ಗಾಯಗಳಾಗಿವೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿಯನ್ನು ಅಧಿಕಾರಿಗಳು ನೀಬೇಕಿದೆ. ಘಟನೆ ಕುರಿತು ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ಸ್ಪಂದಿಸಿದ್ದು, ಘಟನಾ ಸ್ಥಳದಲ್ಲಿದ್ದಾರೆ.

ಘಟನೆಗೆ ಕಾರಣವೇನು: ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎನ್ನುವ ವರದಿ ಸಿಕ್ಕ ಬಳಿಕ ಎಕ್ಸ್‌ಪ್ರೆಸ್‌ ರೈಲು ನಿಂತುಕೊಂಡಿತ್ತು. ಈ ವೇಳೆ ಅಪಾಯದಿಂದ ಪಾರಾಗುವ ನಿಟ್ಟಿನಲ್ಲಿ ಹಲವು ಪ್ರಯಾಣಿಕರು ರೈಲಿನಿಂದ ಜಿಗಿದಿದ್ದಾರೆ. ಆದರೆ, ಅವರು ಜಿಗಿದು ಪಕ್ಕದ ರೈಲ್ವೇ ಟ್ರ್ಯಾಕ್‌ಗೆ ಹೋಗಿದ್ದರಿಂದ ಝಾಝಾ-ಅಸನ್ಸೋಲ್ ರೈಲು ಅವರ ಮೇಲೆ ಹರಿದು ಹೋಗಿದ್ದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ ಎಂದು ವರದಿಯಾಗಿದೆ.

Jharkhand | A train ran over the passengers at Kalajharia railway station in Jamtara. Some deaths have been reported. The exact number of deaths will be confirmed later. Medical teams and ambulances rushed to the spot: Deputy Commissioner, Jamtara

More details awaited.

— ANI (@ANI)

ಸುದ್ದಿ ಅಪ್‌ಡೇಟ್‌ ಆಗುತ್ತಿದೆ

click me!