ಈಗಾಗಲೇ ಜನರು ಚಂದ್ರನತ್ತ ಹೋಗಿದ್ದಾರೆ. ಅಲ್ಲಿ ಸಾಕಷ್ಟು ಸುತ್ತಾಡಿದ್ದಾರೆ. ಇಸ್ರೋ ತನ್ನ ಮುಂದಿನ ಯೋಜನೆಯಲ್ಲಿ ನರೇಂದ್ರ ಮೋದಿಯವರನ್ನು ಸೂರ್ಯನತ್ತ ಕಳಿಸಬೇಕು ಎನ್ನುವುದು ವಿಜ್ಞಾನಿಗಳಲ್ಲಿ ನನ್ನ ಮನವಿ ಎಂದು ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.
ಮುಂಬೈ (ಸೆ.1): ಮಾಜಿ ಕೇಂದ್ರ ಸಚಿವ ಹಾಗೂ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಚಂದ್ರಯಾನ-3 ಮೂಲಕ ಚಂದ್ರನಲ್ಲಿ ಮಾನವರನ್ನು ಕಳಿಸಿದ್ದಕ್ಕೆ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಹೌದು.. ನೀವು ಓದುತ್ತಿರೋದಿ ನಿಜ. ಇಸ್ರೋ ಚಂದ್ರಯಾನ-3 ಮಿಷನ್ ಮೂಲಕ ಲ್ಯಾಂಡರ್ ಹಾಗೂ ರೋವರ್‌ಅನ್ನು ಚಂದ್ರನ ಮೇಲೆ ಕಳಿಸಿದ್ದರೂ, ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದ ಹಾಗೂ ಎನ್‌ಡಿಎ ವಿರುದ್ಧ ಹೋರಾಟ ಮಾಡಲಿರುವ ಇಂಡಿ ಒಕ್ಕೂಟದ ಪ್ರಮುಖ ನಾಯಕರಾಗಿರುವ ಲಾಲೂ ಪ್ರಸಾದ್ ಯಾದವ್‌ಗೆ ಈ ಯೋಜನೆಯ ಬಗ್ಗೆ ಒಂಚೂರೂ ಮಾಹಿತಿಯಿಲ್ಲ. ಇಸ್ರೋ ಚಂದ್ರನ ಮೇಲೆ ಕಳಿಸಿರುವ ಮಾನವರು, ಅಲ್ಲಿ ಸಾಕಷ್ಟು ಓಡಾಟ ನಡೆಸಿದ್ದಾರೆ ಎಂದು ಮುಂಬೈನಲ್ಲಿ ನಡೆದ ಇಂಡಿ ಒಕ್ಕೂಟದ ಮೂರನೇ ಸಭೆಯ ವೇಳೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. 'ಈಗ ವಿಜ್ಞಾನಿಗಳ ಸಾಧನೆಯನ್ನು ಸಾಕಷ್ಟು ಮಂದಿ ಹೊಗಳುತ್ತಿದ್ದಾರೆ. ಚಂದ್ರಯಾನದ ಮೂಲಕ ಮಾನವರು ಚಂದ್ರನ ಮೇಲೆ ಕಾಲಿಟ್ಟಿದ್ದಾರೆ. ಅಲ್ಲಿ ಸಾಕಷ್ಟು ಸುತ್ತಾಟವನ್ನೂ ಮಾಡಿದ್ದಾರೆ' ಎಂದು ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.
ಅದರ ಬೆನ್ನಲ್ಲಿಯೇ ಮಾತನಾಡಿದ ಅವರು, ಇಸ್ರೋ ವಿಜ್ಞಾನಿಗಳಿಗೆ ನನ್ನದೊಂದಿಗೆ ಮನವಿ ಇದೆ. ಇಸ್ರೋ ತನ್ನ ಮುಂದಿನ ಪ್ರಾಜೆಕ್ಟ್ ವೇಳೆ ನರೇಂದ್ರ ಮೋದಿ ಅವರನ್ನು ಕರೆದುಕೊಂಡು ಹೋಗಿ ಸೂರ್ಯನತ್ತ ಕಳಿಸಬೇಕು ಎಂದು ಲೇವಡಿ ಮಾಡಿದ್ದಾರೆ.
ಆಗಸ್ಟ್ 23 ರಂದು ಇಸ್ರೋ ಉಡಾವಣೆ ಮಾಡಿದ ಚಂದ್ರಯಾನ 3 ನೌಕೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ತನ್ನ ಸಾಫ್ಟ್ ಲ್ಯಾಂಡಿಂಗ್‌ಅನ್ನು ಯಶಸ್ವಿಯಾಗಿ ಮಾಡಿತ್ತು. ಅಲ್ಲಿಂದೀಚೆಗೆ, ಬಾಹ್ಯಾಕಾಶ ಕಾರ್ಯಾಚರಣೆಗಳ ಬಗ್ಗೆ ಅಪರೂಪವಾಗಿ ಏನನ್ನೂ ತಿಳಿದಿರದ ವಿವಿಧ ಪಕ್ಷಗಳ ಭಾರತೀಯ ರಾಜಕಾರಣಿಗಳು ಅನೇಕ ವಿಲಕ್ಷಣ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಚಂದ್ರಯಾನ 3 ಇಸ್ರೋದ ಮಾನವರಹಿತ ಮಿಷನ್ ಆಗಿದೆ.
ಹಾಗಂಥ ಇಂಥ ಕುಚೋದ್ಯದ ಹೇಳಿಕೆ ನೀಡಿದ ಮೊದಲ ರಾಜಕಾರಣಿ ಲಾಲೂ ಪ್ರಸಾದ್ ಯಾದವ್ ಅಲ್ಲ. ಈ ಹಿಂದೆ, ರಾಜಸ್ಥಾನದ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಅಶೋಕ್ ಚಂದನಾ ಚಂದ್ರಯಾನ -3 ಮಾನವಸಹಿತ ಮಿಷನ್ ಎಂದು ನಂಬಿದ್ದರು ಮತ್ತು ಭಾರತವು ಚಂದ್ರನ ಮೇಲೆ ಗಗನಯಾತ್ರಿಗಳನ್ನು ಕಳುಹಿಸಿದೆ. ಅವರು ಹೇಳಿದರು, “ನಾವು ಯಶಸ್ವಿಯಾಗಿದ್ದೇವೆ ಮತ್ತು ನಾವು ಸುರಕ್ಷಿತವಾಗಿ ಇಳಿದಿದ್ದೇವೆ. ಅಲ್ಲಿಗೆ ಹೋದ ಗಗನಯಾತ್ರಿಗಳಿಗೆ ನಾನು ನಮಸ್ಕರಿಸುತ್ತೇನೆ. ಈ ಯಶಸ್ಸಿನಿಂದ ನಮ್ಮ ದೇಶ ಬಾಹ್ಯಾಕಾಶ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಒಂದು ಹೆಜ್ಜೆ ಮುಂದೆ ಸಾಗಲಿದೆ. ನಾನು ಎಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ' ಎಂದು ಹೇಳಿದ್ದರು.
ಚಂದ್ರಯಾನ-3 ಮಿಷನ್ ಸಕ್ಸಸ್ ಹಿಂದಿರುವ ವಿಜ್ಞಾನಿಗಳು ಮತ್ತು ತಂತ್ರಜ್ಞರ ವೇತನ ವಿವರ
ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (SBSP) ನಾಯಕ ಓಪಿ ರಾಜ್‌ಭರ್, ಚಂದ್ರನ ಮೇಲ್ಮೈಯನ್ನು ಯಶಸ್ವಿಯಾಗಿ ಮುಟ್ಟಿದ ಚಂದ್ರಯಾನ-3 ರ ವಿಜಯಶಾಲಿ ಮಿಷನ್‌ಗಾಗಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುವಾಗ ಇದೇ ತಪ್ಪನ್ನು ಮಾಡಿದರು. ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದರು. ಭೂಮಿಯ ಮೇಲೆ ಇವರೆಲ್ಲರೂ ಸೇಫ್ ಆಗಿ ಇಳಿದಾಗ ಇಡೀ ದೇಶ ಅವರನ್ನು ಹೆಮ್ಮೆಯಿಂದ ಸ್ವಾಗತಿಸಬೇಕು ಎಂದಿದ್ದರು.
ಮೊದಲ ಬಾರಿ ಚಂದ್ರನ ಮೇಲಿನ ಕಂಪನ ಪತ್ತೆ, ಚಂದಮಾಮನ ಉಲ್ಲೇಖ ಮಾಡಿದ ಇಸ್ರೋ
"चंद्रयान पर लोग गए, घूमे-फिरे" : चाराचोर
ये भारत का भविष्य बनाएंगे 🤣🤣🤣🤣 pic.twitter.com/UmsoSK2rTW