ಅಮೆರಿಕಾ ಹೇಳಿಕೆ ಬೆನ್ನಲೇ ತನ್ನ ಭೂಗತ ಕ್ಷಿಪಣಿ ಶಸ್ತ್ರಾಗಾರದ ವೀಡಿಯೋ ಹರಿಬಿಟ್ಟ ಇರಾನ್

Published : Mar 24, 2026, 03:21 PM IST
iran displays missile

ಸಾರಾಂಶ

ಅಮೆರಿಕ-ಇಸ್ರೇಲ್ ಜೊತೆಗಿನ ಸಂಘರ್ಷದ ನಡುವೆ, ಇರಾನ್ ತನ್ನ ಬೃಹತ್ ಭೂಗತ ಮಿಲಿಟರಿ ಸಂಕೀರ್ಣದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಸುಧಾರಿತ ಕ್ಷಿಪಣಿಗಳನ್ನು ಪ್ರದರ್ಶಿಸಲಾಗಿದ್ದು ಈ ಮೂಲಕ ತನ್ನ ಮಿಲಿಟರಿ ಸಾಮರ್ಥ್ಯ ಕುಗ್ಗಿಲ್ಲ ಎಂದು ಇರಾನ್ ಜಗತ್ತಿಗೆ ಸಾರಿದೆ.

ಅಮೆರಿಕ-ಇಸ್ರೇಲ್-ಇರಾನ್ ನಡುವಣ ಯುದ್ಧ 25ನೇ ದಿನಕ್ಕೆ ಕಾಲಿರಿಸಿದೆ. ಈ ನಡುವೆ ಇರಾನಿನ ಮಿಲಿಟರಿ ಸಾಮರ್ಥ್ಯಗಳು ಸಂಪೂರ್ಣವಾಗಿ ನಾಶವಾಗಿವೆ ಎಂಬ ಅಮೆರಿಕದ ಹೇಳಿಕೆಯನ್ನು ಸುಳ್ಳು ಎಂದು ಸಾಬೀತುಪಡಿಸುವ ಪ್ರಯತ್ನದಲ್ಲಿ, ಸುಧಾರಿತ ಶಸ್ತ್ರಾಸ್ತ್ರಗಳಿಂದ ತುಂಬಿದ ವಿಸ್ತಾರವಾದ ಭೂಗತ ಮಿಲಿಟರಿ ಸಂಕೀರ್ಣವನ್ನು ಪ್ರದರ್ಶಿಸುವ ವೀಡಿಯೊವನ್ನು ಇರಾನಿನ ರಾಜ್ಯ ಮಾಧ್ಯಮ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್‌ಕಾಸ್ಟಿಂಗ್ (ಐಆರ್‌ಐಬಿ)ಬಿಡುಗಡೆ ಮಾಡಿದೆ.

ಐಆರ್‌ಐಬಿ ನ್ಯೂಸ್‌ನ ದೃಶ್ಯಗಳು ಭೂಗತ ಸೌಲಭ್ಯದೊಳಗೆ ಕ್ಷಿಪಣಿಗಳನ್ನು ಸಾಲಾಗಿ ನಿಲ್ಲಿಸಿರುವುದನ್ನು ತೋರಿಸುತ್ತಿವೆ. ಇದು ಪುಟ್ಟ ದೇಶ ಇರಾನ್‌ನ ದೇಶದ ಬ್ಯಾಲಿಸ್ಟಿಕ್ ಸಾಮರ್ಥ್ಯಗಳ ಪ್ರಮಾಣವನ್ನು ಎತ್ತಿ ತೋರಿಸಿದೆ. ಅಂತರರಾಷ್ಟ್ರೀಯ ವೀಕ್ಷಕರಿಗೆ ಐಆರ್‌ಐಬಿ ಮೂಲಕ ನೀಡಿರುವ ಸ್ಪಷ್ಟ ಸಂದೇಶದಲ್ಲಿ, ರಾಷ್ಟ್ರದ ಗುಪ್ತ ಶಸ್ತ್ರಾಗಾರವಿರುವ ಆ ಕಾರ್ಯತಂತ್ರದ ತಾಣವನ್ನು ಮಂಜುಗಡ್ಡೆಯ ತುದಿ (the tip of the iceberg) ಎಂದು ಸ್ಪಷ್ಟವಾಗಿ ವಿವರಿಸಿದೆ.

ಇಸ್ರೇಲ್ ಹಾಗೂ ಅಮೆರಿಕಾದ ದಾಳಿಗೆ ಪ್ರತೀಕಾರವಾಗಿ ಟ್ರೂ ಪ್ರಾಮಿಸ್ 4 ಎಂಬ ಪ್ರತೀಕಾರದ ಕಾರ್ಯಾಚರಣೆಯ ಅಡಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) 75 ನೇ ಅಲೆಯ ಕ್ಷಿಪಣಿ ದಾಳಿಯನ್ನು ನಡೆಸಿದೆ ಎಂಬ ಹೇಳಿಕೆಯೊಂದಿಗೆ ಈ ಸಾಲುಗಟ್ಟಿ ನಿಲ್ಲಿಸಿರುವ ಕ್ಷಿಪಣಿಗಳ ದೃಶ್ಯವನ್ನು ತೋರಿಸಲಾಗಿದೆ. ಪ್ರೆಸ್ ಟಿವಿಯ ವರದಿಯ ಪ್ರಕಾರ, ಇರಾನ್‌ನ ಇತ್ತೀಚಿನ ದಾಳಿಗಳು ಇಸ್ರೇಲಿ ಮಿಲಿಟರಿ ನೆಲೆಗಳು ಮತ್ತು ಸೌದಿ ಅರೇಬಿಯಾದಲ್ಲಿರುವ ಪ್ರಮುಖ ಯುನೈಟೆಡ್ ಸ್ಟೇಟ್ಸ್ ಮಿಲಿಟರಿ ಸ್ಥಾಪನೆಯಾದ ಯುಎಸ್ ಪ್ರಿನ್ಸ್ ಸುಲ್ತಾನ್ ಏರ್ ಬೇಸ್ ಅನ್ನು ಗುರಿಯಾಗಿಸಿಕೊಂಡಿವೆ.

ತನ್ನ ದೇಶದ ಹುತಾತ್ಮ ಕಮಾಂಡರ್‌ಗಳ ಗೌರವಾರ್ಥವಾಗಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ ಮತ್ತು ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ನಿರಂತರ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಇದನ್ನು ಮಾಡಲಾಗಿದೆ ಎಂದು ಐಆರ್‌ಜಿಸಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಸುಧಾರಿತ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿ ದಾಳಿಗಳನ್ನು ನಡೆಸಲಾಗಿದೆ ಮತ್ತು ಅದರ ಗುಪ್ತಚರ ಘಟಕಗಳ ನಿಖರವಾದ ವಿಚಕ್ಷಣ ಮಾಹಿತಿ ಆಧರಿಸಿ ದಾಳಿ ನಡೆದಿದೆ ಎಂದು ಅದು ಹೇಳಿದೆ.

ಹೊಸ ಮಿಲಿಟರಿ ನಿಯೋಜನೆಗಳು ಮತ್ತು ಇಸ್ರೇಲಿ ಪಡೆಗಳ ಅಡಗುತಾಣಗಳು ಗುರಿಗಳಲ್ಲಿ ಸೇರಿವೆ ಎಂದು ಐಆರ್‌ಜಿಸಿ ಹೇಳಿದ್ದು, ಸೌದಿ ಅರೇಬಿಯಾದಲ್ಲಿರುವ ಪ್ರಿನ್ಸ್ ಸುಲ್ತಾನ್ ವಾಯುನೆಲೆಯು ಇರಾನ್ ವಿರುದ್ಧದ ಯುಎಸ್ ದಾಳಿಯ ನಿಯೋಜನೆಗಳು ಮತ್ತು ವಾಯುದಾಳಿ ಕಾರ್ಯಾಚರಣೆಗಳಿಗೆ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಅದರ ಮೇಲೆ ದಾಳಿ ಮಾಡಲಾಗಿದೆ ಎಂದು ಅದು ಹೇಳಿದೆ.

ತನ್ನ ನಿಲುವನ್ನು ಪುನರುಚ್ಚರಿಸುತ್ತಾ ಇಸ್ರೇಲಿ ಮತ್ತು ಅಮೆರಿಕದ ಪಡೆಗಳು ನಿರಂತರ ಕಣ್ಗಾವಲು ಅಡಿಯಲ್ಲಿವೆ ಮತ್ತು ಅವರು ಮತ್ತು ನಾಗರಿಕ ಪ್ರದೇಶಗಳಲ್ಲಿ ಮಿಲಿಟರಿ ಸ್ವತ್ತುಗಳನ್ನು ಮರೆಮಾಡಲು ಪ್ರಯತ್ನಿಸುವುದರಿಂದ ಅವರಿಗೆ ರಕ್ಷಣೆ ದೊರೆಯುವುದಿಲ್ಲ. ಯಾವುದೇ ಅಡಗುತಾಣ ಅಥವಾ ರಕ್ಷಣಾತ್ಮಕ ಕ್ರಮವು ಆಕ್ರಮಣಕಾರರನ್ನು ಹೊಣೆಗಾರಿಕೆಯಿಂದ ರಕ್ಷಿಸುವುದಿಲ್ಲ ಎಂದು ಹೇಳುವ ಮೂಲಕ ಇದು ಕಾರ್ಯಾಚರಣೆಯನ್ನು ಮುಂದುವರಿಸುವ ತನ್ನ ಉದ್ದೇಶವನ್ನು ಒತ್ತಿ ಹೇಳಿದೆ.

ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರವಾಗಿ ಉಲ್ಬಣಗೊಂಡಿರುವ ಮಧ್ಯೆ ಈ ಬೆಳವಣಿಗೆ ಸಂಭವಿಸಿದೆ. ಇತ್ತೀಚಿನ ವಾರಗಳಲ್ಲಿ ಈ ಪ್ರದೇಶದಾದ್ಯಂತ ಹಲವಾರು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ವರದಿಯಾಗಿವೆ. ಇರಾನ್ ಪಡೆಗಳು ಈ ಹಿಂದೆ ಹಲವಾರು ಅಮೆರಿಕ ಸಂಬಂಧಿತ ಮಿಲಿಟರಿ ಸ್ಥಾಪನೆಗಳು ಮತ್ತು ಇಸ್ರೇಲಿ ನಗರಗಳನ್ನು ಗುರಿಯಾಗಿಸಿಕೊಂಡು ವಿವಿಧ ಕ್ಷಿಪಣಿಗಳು ಮತ್ತು ಮಾನವ ರಹಿತ ವೈಮಾನಿಕ ವ್ಯವಸ್ಥೆಗಳ ಮೂಲಕ ದಾಳಿ ನಡೆಸಿವೆ.

ಸೌದಿ ಅರೇಬಿಯಾದ ಅಲ್-ಖಾರ್ಜ್ ಪ್ರದೇಶದಲ್ಲಿ ನೆಲೆಗೊಂಡಿರುವ ಪ್ರಿನ್ಸ್ ಸುಲ್ತಾನ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡಿರುವುದು ಇರಾನ್ ಪಾಲಿಗೆ ಬಹಳ ಮಹತ್ವದ ತಿರುವಾಗಿದೆ. ಏಕೆಂದರೆ ಇದು ಈ ಪ್ರದೇಶವು ಅಮೆರಿಕದ ಮಿಲಿಟರಿ ಉಪಸ್ಥಿತಿ ಮತ್ತು ಕಾರ್ಯಾಚರಣೆಗಳಿಗೆ ಬಹಳ ಹಿಂದಿನಿಂದಲೂ ಪ್ರಮುಖ ಕೇಂದ್ರವಾಗಿದೆ. ಫೆಬ್ರವರಿ ತಿಂಗಳ ಕೊನೆದಿ ಪ್ರಾರಂಭವಾದ ವಿಶಾಲ ಸಂಘರ್ಷದಿಂದಾಗಿ ಜಗತ್ತಿನ ಆರ್ಥಿಕತೆ ತಲೆಕೆಳಗಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮತಾಂತರವಾದ ವ್ಯಕ್ತಿ ಪರಿಶಿಷ್ಟ ಜಾತಿಯಿಂದ ಹೊರಕ್ಕೆ: ಮಹತ್ವದ ತೀರ್ಪಿನಲ್ಲಿ Supreme Court ಹೇಳಿದ್ದೇನು?
ಕಾಲುವೆ ಬಳಿ ತಲೆ ಇಲ್ಲದ ಶವ ಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್: 3 ಮಕ್ಕಳ ತಾಯಿಗೆ ಗೆಳೆಯನೇ ಮುಹೂರ್ತವಿಟ್ಟಿದ್ದೇಕೆ