ರಾಮ ಮಂದಿರ ಭೂಮಿ ಪೂಜೆ ಆಮಂತ್ರಣ ಪತ್ರಿಕೆ ವೈರಲ್: ಮೋದಿ ಜೊತೆ ಮೂವರ ಹೆಸರು!

By Suvarna NewsFirst Published Aug 3, 2020, 1:14 PM IST
Highlights

ರಾಮ ಮಂದಿರ ಆಹ್ವಾನ ಪತ್ರಿಕೆ ಬಿಡುಗಡೆ| ಆಮಂತ್ರಣ ಪತ್ರಿಕೆಯಲ್ಲಿ ಮೋದಿ ಜೊತೆ ಇನ್ನೂ ಮೂವರ ಹೆಸರು| ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಆಹ್ವಾನ ಪತ್ರಿಕೆ

ಅಯೋಧ್ಯೆ(ಆ.03): ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಇನ್ನು ಎರಡೇ ದಿನಗಳು ಉಳಿದಿವೆ. ಹೀಗಿರುವಾಗ ಕೇಸರಿ ಬಣ್ಣದ ಆಮಂತ್ರಣ ಪತ್ರಿಕೆಯೊಂದನ್ನು ಬಿಡುಗಡೆ ಮಾಡಲಾಗಿದೆ. ಈ ಆಮಂತ್ರಣ ಪತ್ರಿಕೆಯಲ್ಲಿ ಮೋದಿ ಹೊರತುಪಡಿಸಿ ಇನ್ನು ಕೇವಲ ಮೂರು ಮಂದಿಯ ಹೆಸರು ಶಾಮೀಲಾಗಿದೆ. ಇದು ಅತಿಥಿಗಳ ಪಟ್ಟಿಯನ್ನು ಕಡಿತಗೊಳಿಸಿರುವ ಸಂಕೇತವಾಗಿದೆ. 

ಭೂಮಿಪೂಜೆ ದೂರದರ್ಶನದಲ್ಲಿ ನೇರ ಪ್ರಸಾರ!

ಆಹ್ವಾನ ಪತ್ರಿಕೆಯನ್ವಯ ಮೋದಿ ಹೊರತುಪಡಿಸಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಗವರ್ನರ್ ಆನಂದಿ ಬೆನ್ ಪಟೇಲ್ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಸರು ಹಾಕಲಾಗಿದೆ. ಕೊರೋನಾತಂಕದ ನಡುವೆ ನಡೆಯುತ್ತಿರುವ ಈ ಭವ್ಯ ಮಂದಿರದ ಭೂಮಿ ಪೂಜೆಗೆ ಸೀಮಿತ ಸಂಖ್ಯೆಯಲ್ಲಿ ಅತಿಥಿಗಳನ್ನು ಆಹ್ವಾನಿಸಲಾಗಿದೆ.

ರಾಮ ಮಂದಿರ ನಿರ್ಮಾಣ: ಇಟ್ಟಿಗೆ ಹೊತ್ತು 2066 ಕಿ.ಮೀ. ಪ್ರಯಾಣಿಸಿದ್ದ ಹೂಡಿ ಮಂಜುನಾಥ್‌ ಹರ್ಷ

ಆಹ್ವಾನ ಪತ್ರಿಕೆಯಲ್ಲಿ ಈ ಹೆಸರುಗಳನ್ನು ಹೊರತುಪಡಿಸಿ ಶ್ರೀರಾಮನ ಚಿತ್ರವೂ ಒಂದಿದೆ. ಲಭ್ಯವಾದ ಮಾಹಿತಿ ಅನ್ವಯ ಕೇವಲ 150 ಮಂದಿಗಷ್ಟೇ ಆಮಂತ್ರಣ ನೀಡಲಾಗಿದೆ. ಅಲ್ಲದೇ ಸಭಾ ಕಾರ್ಯಕ್ರಮದಲ್ಲೂ ವೇದಿಕೆ ಮೇಲೆ ಕೇಲ ಐದು ಮಂದಿಗೆ ಕುಳಿತುಕೊಳ್ಳುವ ಸಿದ್ಧತೆ ಮಾಡಲಾಗಿದೆ. ಇದರಲ್ಲಿ ಪಿಎಂ ಮೋದಿ, ಆರ್‌ಎಸ್‌ಎಸ್‌ ನಾಯಕ ಮೋಹನ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಪಟೇಲ್, ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಮಹಂತ್ ನೃತ್ಯ ಗೋಪಾಲದಾಸ್ ಕೂಡಾ ಇರಲಿದ್ದಾರೆ.

click me!