
ಇಂಫಾಲ್(ಸೆ.24): ಕಳೆದ 5 ತಿಂಗಳಿನಿಂದ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿದ್ದ ಮಣಿಪುರದಲ್ಲಿ, ಮೇ 3ರಂದು ಸ್ಥಗಿತಗೊಳಿಸಲಾಗಿದ್ದ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ನಿನ್ನೆ(ಶನಿವಾರ)ಯಿಂದ ಮರುಸ್ಥಾಪಿಸಲಾಗಿದೆ. ಇದರೊಂದಿಗೆ ಕುಕಿ ಮತ್ತು ಮೈತೇಯಿ ಸಮುದಾಯಗಳ ಹಿಂಸಾಚಾರದಿಂದ ನಲುಗಿದ್ದ ರಾಜ್ಯವು 5 ತಿಂಗಳ ಬಳಿಕ ಸಹಜ ಸ್ಥಿತಿಯತ್ತ ಮರಳುತ್ತಿದೆ.
ಶುಕ್ರವಾರ ಈ ಬಗ್ಗೆ ಮಾತನಾಡಿದ್ದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ‘ಸುಳ್ಳು ಸುದ್ದಿ ಪ್ರಚಾರ ಮತ್ತು ದ್ವೇಷ ಭಾಷಣ ಹರಡುವಿಕೆಯನ್ನು ತಪ್ಪಿಸಲು ಸರ್ಕಾರವು ಮೇ3 ರಂದು ಮೊಬೈಲ್ ಇಂಟರ್‌ನೆಟ್ ಸೇವೆಯನ್ನ ಸ್ಥಗಿತಗೊಳಿಸಿತ್ತು. ಆದರೆದೀಗ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸಿದೆಯಾದ್ದರಿಂದ ಶನಿವಾರದಿಂದ ಮೊಬೈಲ್ ಇಂಟರ್‌ನೆಟ್ ಸೇವೆ ಪ್ರಾರಂಭಿಸಲಾಗುವುದು’ ಎಂದಿದ್ದರು.
ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಕರ್ಫ್ಯೂ ವಿರೋಧಿಸಿ ಸಾವಿರಾರು ಮಹಿಳೆಯರು ಬೀದಿಗೆ
ಇದೇ ವೇಳೆ ‘ರಾಜ್ಯದಲ್ಲಿ ಅಕ್ರಮ ವಲಸಿಗರನ್ನು ತಡೆಯಲು ಸರ್ಕಾರ ಹಲವು ಕ್ರಮ ಕೈಗೊಳ್ಳುತ್ತದೆ ಹಾಗೂ ಭಾರತ ಮತ್ತು ಮ್ಯಾನ್ಮಾರ್‌ಗಳ ಗಡ ಪ್ರದೇಶದಲ್ಲಿ ಸಂಪೂರ್ಣ ಬೇಲಿ ಹಾಕುವ ಅಗತ್ಯವಿದೆ. ಹೀಗಾಗಿ ಮಣಿಪುರದ 60 ಕಿ.ಮೀ ಅಂತಾರಾಷ್ಟ್ರೀಯ ಗಡಿಗೆ ಬೇಲಿ ಹಾಕಲು ಕೇಂದ್ರ ಗೃಹ ಸಚಿವಾಲಯ ಮುಂದಾಗಿದೆ. ಇದಲ್ಲದೇ ಭಾರತ ಮತ್ತು ಮ್ಯಾನ್ಮಾರ್ ಗಡಿ ಪ್ರದೇಶದಲ್ಲಿ ವಾಸಿಸುತ್ತಿರುವ ಉಭಯ ಪ್ರದೇಶಗಳ ಜನರು ಯಾವುದೇ ದಾಖಲಾತಿ ಇಲ್ಲದೇ ಪರಸ್ಪರರ ಭೂಪ್ರದೇಶದ ಒಳಗೆ 16 ಕಿ.ಮೀ ವರೆಗೆ ಚಲಿಸುವ ಉಪಕ್ರಮವನ್ನು ರದ್ದು ಮಾಡುವಂತೆ ಕೇಂದ್ರಕ್ಕೆ ಕೋರಲಾಗಿದೆ’ ಎಂದಿದ್ದಾರೆ. ಅಲ್ಲದೇ ಭದ್ರತಾ ಪಡೆಗಳ ನಿಯೋಜನೆಯಿಂದ ಸಂಘರ್ಷಗಳು ಬಹುತೇಕ ಕಡಿಮೆಯಾಗಿದ್ದು 2 ತಿಂಗಳಿನಿಂದ ರಾಜ್ಯದ ಪರಿಸ್ಥಿತಿ ಸುಧಾರಿಸಿದೆ ಎಂದು ಸಿಎಂ ತಿಳಿಸಿದ್ದಾರೆ.
ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿರ್ಧಾರದ ವಿರುದ್ಧ ಕುಕಿ ಸಮುದಾಯದ ಜನರು ಮೇ3 ರಿಂದ ಭಾರೀ ಹಿಂಸೆ ಪೀಡಿತ ಪ್ರತಿಭಟನೆಯಲ್ಲಿ ತೊಡಗಿದ ಬಳಿಕಡೆರಡೂ ಸಮುದಾಯಗಳ ನಡುವೆ ತೀವ್ರ ಸಂಘರ್ಷ ನಡೆದು ಸುಮಾರು 170ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ