2ನೇ ಡೋಸ್ ಲಸಿಕೆ ಪಡೆದ 1 ವಾರದಲ್ಲಿ ಪೊಲೀಸ್ IG‌ಗೆ ಕೊರೋನಾ ಪಾಸಿಟೀವ್!

By Suvarna NewsFirst Published Apr 2, 2021, 8:00 PM IST
Highlights

ಕೊರೋನಾ ವೈರಸ್ ಭಾರತದಲ್ಲಿ 2ನೇ ಅಲೆ ಸೃಷ್ಟಿಸಿದೆ ಅನ್ನೋ ಮಾತುಗಳು ಬಲವಾಗುತ್ತಿದೆ.  ಲಸಿಕೆ ಹಾಕಿಸಿಕೊಂಡವರಲ್ಲೂ ಕೊರೋನಾ ಪಾಸಿಟೀವ್ ಕಾಣಿಸಿಕೊಳ್ಳುತ್ತಿದೆ. ಇದೀಗ ಪೊಲೀಸ್ ಅಧಿಕಾರಿ 2ನೇ ಡೋಸ್ ಲಸಿಕೆ ಹಾಕಿಸಿಕೊಂಡ ಒಂದೇ ವಾರದಲ್ಲಿ ಕೊರೋನಾ ಪಾಸಿಟೀವ್ ಆಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಉತ್ತರ ಪ್ರದೇಶ(ಎ.02):  ಹೆಮ್ಮಾರಿ ಕೊರೋನಾಗೆ ಬ್ರೇಕ್ ಹಾಕಿದ್ದ ಭಾರತದಲ್ಲೀಗ ಮತ್ತೆ ವೈರಸ್ ಆರ್ಭಟ ಆರಂಭಿಸಿದೆ. ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಗರಿಷ್ಟ ಕೊರೋನಾ ಪ್ರಕಣಗಳು ದಾಖಲಾಗುತ್ತಿದೆ. ಇದೀಗ ಉತ್ತರ ಪ್ರದೇಶದ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್(IG) ರಾಜೇಶ್‌ ಪಾಂಡೆಗೆ ಕೊರೋನಾ ಕಾಣಿಸಿಕೊಂಡಿದೆ.

ಕೊರೋನಾ ಕಂಟ್ರೋಲ್‌ಗೆ ಟಫ್ ರೂಲ್ಸ್;  ಜಿಮ್, ಈಜುಕೋಳ ಬ್ಯಾನ್, ಬಾರ್‌ಗೂ ಹೋಗಂಗಿಲ್ಲ!.

ಐಜಿ ರಾಜೇಶ್ ಫೆಬ್ರವರಿ 5 ರಂದು ಮೊದಲ ಡೋಸ್ ಹಾಗೂ ಮಾರ್ಚ್ 5 ರಿಂದ ಎರಡನೇ ಡೋಸ್ ಲಸಿಕೆ ಪಡೆದಿದ್ದರು. ರಾಜೇಶ್ ಪಾಂಡೆ ಪತ್ನಿ ಲಸಿಕೆ ಪಡೆದುಕೊಂಡಿರಲಿಲ್ಲ. ಆದರೆ ರಾಜೇಶ್ ಹಾಗು ಕುಟಂಬಕ್ಕೆ ನಿಯೋಜನೆಯಾಗಿದ್ದ ಭದ್ರತಾ ಪಡೆಯಿಂದ ಕೊರೋನಾ ರಾಜೇಶ್ ಪತ್ನಿಗೆ ಅಂಟಿಕೊಂಡಿದೆ.

ಪತ್ನಿಗೆ ಕೊರೋನಾ ಪಾಸಿಟೀವ್ ರಿಪೋರ್ಟ್ ಬಂದ ಕಾರಣ ಐಜಿ ರಾಜೇಶ್ ಪಾಂಡೆ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಪಾಂಡೆಗೂ ಕೊರೋನಾ ಪಾಸಿಟೀವ್ ರಿಪೋರ್ಟ್ ಬಂದಿದೆ. ಇದೀಗ ಮೆಡಿಕಲ್ ಕಾಲೇಜಿನಲ್ಲಿ ಪಾಂಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಕೊರೋನಾ ತಡೆಗೆ ಈ ಜಿಲ್ಲೆಯಲ್ಲಿ 9 ದಿನಗಳ ಲಾಕ್ ಡೌನ್!

ಕೊರೋನಾ ವೈರಸ್ ಲಸಿಕೆ ಪಡೆದ ತಕ್ಷಣವೇ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುವುದಿಲ್ಲ. ಲಸಿಕೆ ನಿಧಾನವಾಗಿ ವೈರಸ್ ವಿರುದ್ಧ ಹೋರಾಡಬಲ್ಲ ಶಕ್ತಿ ನೀಡಲಿದೆ. ಹೀಗಾಗಿ ಲಸಿಕೆ ಪಡೆದ ಬೆನ್ನಲ್ಲೇ ಕೊರೋನಾ ಅಂಟಿಕೊಳ್ಳುವುದಿಲ್ಲ ಎಂದುಕೊಳ್ಳುವುದು ತಪ್ಪು ಎಂದು ಈಗಾಗಲೇ ತಜ್ಞ ವೈದ್ಯರು ಸ್ಪಷ್ಟಪಡಿಸಿದ್ದಾರೆ

click me!